ಕೋವಿಡ್ ಲಸಿಕೆಯ ಎರಡನೇ ಡೋಸ್‌ ಪಡೆದ 'ತಲೈವಾ' ರಜನಿಕಾಂತ್‌

ತಲೈವಾ ರಜನಿಕಾಂತ್ ಅವರು ಈಚೆಗಷ್ಟೇ 'ಅಣ್ಣಾಥೆ' ಶೂಟಿಂಗ್ ಮುಗಿಸಿ, ಚೆನ್ನೈಗೆ ಮರಳಿದ್ದರು. ಮನೆಗೆ ಬಂದಕೂಡಲೇ ಅವರು ತಮ್ಮ ಕೊರೊನಾ ಲಸಿಕೆಯ ಎರಡನೇ ಡೋಸ್ ಅನ್ನು ಪಡೆದುಕೊಂಡಿದ್ದಾರೆ. ಆ ಫೋಟೋ ಈಗ ವೈರಲ್ ಆಗಿದೆ.

ಕೋವಿಡ್ ಲಸಿಕೆಯ ಎರಡನೇ ಡೋಸ್‌ ಪಡೆದ 'ತಲೈವಾ' ರಜನಿಕಾಂತ್‌
Linkup
'ಸೂಪರ್ ಸ್ಟಾರ್' ಅವರು ಮೇ 12ರಂದು 'ಅಣ್ಣಾಥೆ' ಸಿನಿಮಾದ ಶೂಟಿಂಗ್ ಮುಗಿಸಿ, ಖಾಸಗಿ ವಿಮಾನದ ಮೂಲಕ ಹೈದರಾಬಾದ್‌ನಿಂದ ಚೆನ್ನೈಗೆ ಮರಳಿದ್ದರು. ಹಲವು ದಿನಗಳ ಬಳಿಕ ಮನೆಗೆ ಬಂದ ಪತಿಗೆ ಆರತಿ ಬೆಳಗಿ ಸ್ವಾಗತಿಸಿದ್ದರು ಪತ್ನಿ ಲತಾ ರಜನಿಕಾಂತ್. ಇಂದು (ಮೇ 13) ರಜನಿಕಾಂತ್ ಅವರು ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಕೂಡ ಪಡೆದುಕೊಂಡಿದ್ದಾರೆ. 45 ವರ್ಷ ಮೇಲ್ಪಟ್ಟವರಿಗೆ ಸರ್ಕಾರ ಕೋವಿಡ್ ಲಸಿಕೆ ನೀಡುವುದಕ್ಕೆ ಈ ಹಿಂದೆಯೇ ಚಾಲನೆ ನೀಡಿತ್ತು. ಆಗ ಮೊದಲ ಡೋಸ್ ಪಡೆದುಕೊಂಡಿದ್ದ ರಜನಿಕಾಂತ್, ಈಗ ಕೋವಿಡ್‌ಶಿಲ್ಡ್‌ನ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಲಸಿಕೆ ಪಡೆಯುವ ಫೋಟೋ ಹಂಚಿಕೊಂಡ ಪುತ್ರಿ ರಜನಿಕಾಂತ್ ಲಸಿಕೆ ಪಡೆದುಕೊಳ್ಳುತ್ತಿರುವ ಫೋಟೋವೊಂದನ್ನು ಪುತ್ರಿ ಸೌಂದರ್ಯಾ ರಜನಿಕಾಂತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ನಮ್ಮ ತಲೈವರ್ ಅವರು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಎಲ್ಲರೂ ಹೋರಾಡೋಣ, ಈ ಕೊರೊನಾ ವಿರುದ್ಧದ ಯುದ್ಧದಲ್ಲಿ ಒಟ್ಟಿಗೆ ಗೆಲ್ಲೋಣ..' ಎಂದು ಬರೆದುಕೊಂಡಿರುವ ಅವರು, ಮಾಸ್ಕ್ ಧರಿಸಿ, ಮನೆಯೊಳಗೆ ಇರಿ, ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ. ಬಹುನಿರೀಕ್ಷಿತ ಅಣ್ಣಾಥೆ ಶೂಟಿಂಗ್ ಕಂಪ್ಲೀಟ್ ಹೈದರಾಬಾದ್‌ನಲ್ಲಿ ಅಣ್ಣಾಥೆ ಸಿನಿಮಾದ ಚಿತ್ರೀಕರಣವನ್ನು ರಜನಿಕಾಂತ್ ಮುಗಿಸಿಕೊಟ್ಟಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಸಕಲ ಸಿದ್ಧತೆಯೊಂದಿಗೆ ಅಣ್ಣಾಥೆ ಶೂಟಿಂಗ್ ಶುರುವಾಗಿತ್ತು. ಆದರೆ, ಚಿತ್ರೀಕರಣ ಆರಂಭವಾದ ಕೆಲವೇ ದಿನಗಳಲ್ಲಿ ತಂಡದ ಕೆಲ ಮಂದಿಗೆ ಕೊರೊನಾ ಪಾಸಿಟಿವ್‌ ಆಗಿತ್ತು. ಆದ್ದರಿಂದ ಶೂಟಿಂಗ್‌ ಸ್ಥಗಿತಗೊಳಿಸಲಾಗಿತ್ತು. ಆನಂತರ ಪುನಃ ಏಪ್ರಿಲ್‌ನಲ್ಲಿ ಶೂಟಿಂಗ್ ಮತ್ತೆ ಆರಂಭಗೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದ್ದ ರಜನಿಕಾಂತ್, ನಿರಂತರವಾಗಿ ಕೆಲಸ ಮಾಡಿ ಶೂಟಿಂಗ್ ಮುಗಿಸಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಜೊತೆ ನಯನತಾರಾ, ಕೀರ್ತಿ ಸುರೇಶ್‌, ಮೀನಾ, ಖುಷ್ಬೂ, ಜಾಕಿಶ್ರಾಫ್‌, ಪ್ರಕಾಶ್ ರೈ, ಸತೀಶ್, ಸೂರಿ ಮುಂತಾದವರು ನಟಿಸಿದ್ದಾರೆ. ಸನ್ ಪಿಕ್ಚರ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದು, ಹಾಡುಗಳಿಗೆ ಡಿ. ಇಮ್ಮಾನ್‌ ಸಂಗೀತ ನೀಡಿದ್ದಾರೆ. ಈ ಹಿಂದೆ ಅಜಿತ್‌ ಜೊತೆ 'ವೀರಂ', 'ವಿಶ್ವಾಸಂ'ನಂತಹ ಹಿಟ್ ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಶಿವ, 'ಅಣ್ಣಾಥೆ'ಗೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರತಂಡ ಘೋಷಣೆ ಮಾಡಿರುವಂತೆ, ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4ರಂದು ಗುರುವಾರ 'ಅಣ್ಣಾಥೆ' ತೆರೆಗೆ ಬರಲಿದೆ.