Mumbai Rain: ಮುಂಬಯಿನಲ್ಲಿ ವರುಣನ ಅಟ್ಟಹಾಸ: ಮನೆ, ಗೋಡೆ ಕುಸಿದು 15 ಮಂದಿ ದುರ್ಮರಣ!

ಮಹಾರಾಷ್ಟ್ರದ ಹಲವೆಡೆ ಶನಿವಾರ ತಡರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಬೃಹನ್‌ ಮುಂಬೈ ಮಹಾನಗರ ಪಾಲಿಕೆ ,ಪಾಲ್ಘರ್‌, ಥಾಣೆ, ರಾಯ್‌ಗಡ, ಕುರ್ಲಾ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು ವಿಪತ್ತು ನಿರ್ವಹಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಧಾರಾಕಾರ ಮಳೆಯಿಂದ ಮಹಾರಾಷ್ಟ್ರದ ವಿವಿಧಡೆ ಅವಘಡಗಳು ಸಂಭವಿಸಿದೆ. ಎರಡು ಬೇರೆ ಬೇರೆ ಘಟನೆಗಳಲ್ಲಿ ಒಟ್ಟು 15 ಮಂದಿ ಸಾವನಪ್ಪಿದ್ದಾರೆ

Mumbai Rain: ಮುಂಬಯಿನಲ್ಲಿ ವರುಣನ ಅಟ್ಟಹಾಸ: ಮನೆ, ಗೋಡೆ ಕುಸಿದು 15 ಮಂದಿ ದುರ್ಮರಣ!
Linkup
ಮುಂಬಯಿ: ಮಹಾರಾಷ್ಟ್ರದ ಹಲವೆಡೆ ಶನಿವಾರ ತಡರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಸುರಿದ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ,ಪಾಲ್ಘರ್‌, ಥಾಣೆ, ರಾಯ್‌ಗಡ, ಕುರ್ಲಾ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು ವಿಪತ್ತು ನಿರ್ವಹಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಹಲವು ಕಡೆ ನೀರು ತುಂಬಿರುವ ರಸ್ತೆಗಳು, ಮನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನಿಜಕ್ಕೂ ಜನ ಜೀವನ ಅಸ್ತವ್ಯಸ್ತವಾಗಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಮುಂಬೈ ನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ 200 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ. ಇನ್ನು ಸಂಪೂರ್ಣ ಮುಂಬಯಿ ಇದೀಗ ಭಾರೀ ಮಳೆಯಿಂದಾಗಿ ಸ್ಥಬ್ಧವಾಗಿದೆ. ಮಹಾ ಮಳೆಗೆ 11 ಮಂದಿ ಸಾವು! ಇನ್ನು ಧಾರಾಕಾರ ಮಳೆಯಿಂದ ಮಹಾರಾಷ್ಟ್ರದ ವಿವಿಧಡೆ ಅವಘಡಗಳು ಸಂಭವಿಸಿದೆ. ಎರಡು ಬೇರೆ ಬೇರೆ ಘಟನೆಗಳಲ್ಲಿ ಒಟ್ಟು 15 ಮಂದಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಚೆಂಬೂರಿನ ಭಾರತಿ ನಗರ ಪ್ರದೇಶದಲ್ಲಿ ಕಾಂಪೌಂಡ್ ಗೋಡಿ ಕುಸಿದ ಪರಿಣಾಮ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಭೂಕುಸಿತದಿಂದಾಗಿ ಕಾಂಪೌಂಡ್ ಗೋಡೆ ಕುಸಿದಿದ್ದು, ಗೋಡೆ ಬಳಿ ಇದ್ದ ಗುಡಿಸಲುಗಳು ಮೇಲೆ ಬಿದಿದ್ದು, ಈ ವೇಳೆ ಅಲ್ಲಿದ್ದ ಸುಮಾರು 11 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ 2 ತಂಡ ದೌಡಾಯಿಸಿದ್ದು,ಅಗ್ನಿ ಶಾಮಕ ದಳದೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಮುಂಬಯಿನ ವಿಖ್ರೋಲಿ ಎಂಬಲ್ಲಿ ವಸತಿ ಸಮುಚ್ಚಯ ಮಳೆಯಿಂದಾಗಿ ಕುಸಿದು ಬಿದ್ದಿದ್ದು 3 ಮಂದಿ ದಾರುಣವಾಗಿ ಸಾವನಪ್ಪಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು 9 ಮಂದಿಯನ್ನು ರಕ್ಷಣೆ ಮಾಡಿದೆ.