ಒಡಹುಟ್ಟಿದ ತಂಗಿಯ ಮೇಲೆ ನಿರಂತರ 6 ವರ್ಷ ಅತ್ಯಾಚಾರ!; ಕಾಮುಕ ಸೋದರರಿಬ್ಬರ ಬಂಧನ

‘ಪೊಲೀಸರ ಬಳಿಗೆ ದೂರು ತೆಗೆದುಕೊಂಡು ಹೋಗುವ ಮೊದಲು ನಾನು ನನ್ನ ಗೋಳನ್ನು ಅಮ್ಮನ ಬಳಿ ಹೇಳಿಕೊಂಡಿದ್ದೆ. ಅಜ್ಜಿ ಮುಂದೆ ಗೋಗರೆದಿದ್ದೆ. ಸೋದರ ಮಾವನಿಗೂ ತಿಳಿಸಿದ್ದೆ. ಆದರೆ ಅವರಾರೂ ನನ್ನ ಮಾತನ್ನು ನಂಬಲಿಲ್ಲ. ಇದರಿಂದ ನಾನು ಇನ್ನಷ್ಟು ಹಿಂಸೆಗೆ ತುತ್ತಾದೆ. ಸೋದರರು ನನ್ನನ್ನು ಬೈದು, ಹೊಡೆದು ರಂಪಾಟ ಮಾಡಿದರು’ ಎಂದು ಬಾಲಕಿ ನೋವು ತೋಡಿಕೊಂಡಿದ್ದಾರೆ.

ಒಡಹುಟ್ಟಿದ ತಂಗಿಯ ಮೇಲೆ ನಿರಂತರ 6 ವರ್ಷ ಅತ್ಯಾಚಾರ!; ಕಾಮುಕ ಸೋದರರಿಬ್ಬರ ಬಂಧನ
Linkup
ಮುಂಬಯಿ: ಒಡ ಹುಟ್ಟಿದ ಸೋದರಿ ಮೇಲೆ ನಿರಂತರ ಆರು ವರ್ಷಗಳ ಕಾಲ ಅತ್ಯಾಚಾರ ಎಸಗಿದ ಪಾತಕಿ ಸೋದರರಿಬ್ಬರಿಗೆ ಮುಂಬಯಿನ ದಿಂಡೋಶಿ ಸೆಷನ್ಸ್‌ ಕೋರ್ಟ್‌, ಗುರುವಾರ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಂಬಂಧದ ಬೆಲೆ ತಿಳಿಯದೇ ಪಶುಗಳ ರೀತಿ ವರ್ತಿಸಿದ ಸೋದರರಿಗೆ ಕ್ರಮವಾಗಿ ಈಗ 28 ಮತ್ತು 31 ವರ್ಷ ವಯಸ್ಸಾಗಿದ್ದು, ಇಬ್ಬರನ್ನೂ ಜೈಲಿಗೆ ಅಟ್ಟಲಾಗಿದೆ. ಸೋದರಿಗೆ 11 ವರ್ಷ ತುಂಬಿದಾಗ ಈ ಪಾತಕಿಗಳು ಆಕೆಯ ಮೇಲೆ ದೌರ್ಜನ್ಯ ಶುರು ಮಾಡಿದ್ದರು. ನಿರಂತರ ಆರು ವರ್ಷ ಅತ್ಯಾಚಾರ ಎಸಗಿದ್ದರು. 2016ರ ಮಾರ್ಚ್‌ನಲ್ಲಿ ಬಾಲಕಿಗೆ 16 ವರ್ಷ ತುಂಬಿದ್ದಾಗ ಪೊಲೀಸರ ಮೊರೆ ಹೋಗಿದ್ದಳು. ಕೋರ್ಟ್‌ ಕಳೆದ ವರ್ಷ ಪ್ರಕರಣದ ಸಾಕ್ಷ್ಯ ವಿಚಾರಣೆ ಪೂರ್ಣಗೊಳಿಸುವ ವೇಳೆಗೆ ಬಾಲಕಿಗೆ 17 ವರ್ಷ ವಯಸ್ಸಾಗಿತ್ತು. ‘ಪೊಲೀಸರ ಬಳಿಗೆ ದೂರು ತೆಗೆದುಕೊಂಡು ಹೋಗುವ ಮೊದಲು ನಾನು ನನ್ನ ಗೋಳನ್ನು ಅಮ್ಮನ ಬಳಿ ಹೇಳಿಕೊಂಡಿದ್ದೆ. ಅಜ್ಜಿ ಮುಂದೆ ಗೋಗರೆದಿದ್ದೆ. ಸೋದರ ಮಾವನಿಗೂ ತಿಳಿಸಿದ್ದೆ. ಆದರೆ ಅವರಾರೂ ನನ್ನ ಮಾತನ್ನು ನಂಬಲಿಲ್ಲ. ಇದರಿಂದ ನಾನು ಇನ್ನಷ್ಟು ಹಿಂಸೆಗೆ ತುತ್ತಾದೆ. ಸೋದರರು ನನ್ನನ್ನು ಬೈದು, ಹೊಡೆದು ರಂಪಾಟ ಮಾಡಿದರು’ ಎಂದು ಬಾಲಕಿ ನೋವು ತೋಡಿಕೊಂಡಿದ್ದಾರೆ. ಸಂತ್ರಸ್ತ ಬಾಲಕಿಯ ತಂದೆ ಮದ್ಯ ವ್ಯಸನಿಯಾಗಿದ್ದು, ಮನೆಯ ಆಗು ಹೋಗುಗಳಿಗೆ ಕಿವುಡಾಗಿದ್ದಾನೆ. ಬಾಲಕಿ ಮೇಲೆ ಅತ್ಯಾಚಾರ, ಇಬ್ಬರ ಬಂಧನ ಹರಪನಹಳ್ಳಿ: ಬಾಲಕಿಯನ್ನು ಪುಸಲಾಯಿಸಿ ಬಾಲ್ಯ ವಿವಾಹ ಮಾಡಿಕೊಂಡು ಅತ್ಯಾಚಾರ ಮಾಡಿದ್ದ ಇಬ್ಬರನ್ನು ಬುಧವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಗ್ರಾಮವೊಂದರ ಸಾಸಲವಾಡ ನಿಂಗರಾಜ್‌, ಸಾಸಲವಾಡ ದೇವರಾಜ್‌ ಬಂಧಿತರು. ತಾಲೂಕಿನ ಗ್ರಾಮವೊಂದರ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಇದೇ ಗ್ರಾಮದ ನಿಂಗರಾಜ್‌, ದೇವರಾಜ್‌ ಅವರು ಹರಿಹರ ತಾಲೂಕಿನ ಸಾರಥಿ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಪುಸಲಾಯಿಸಿ ಬಾಲ್ಯ ವಿವಾಹ ಮಾಡಿಕೊಂಡು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಬಾಲಕಿಯ ತಂದೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಡಿವೈಎಸ್ಪಿ ವಿಎಸ್‌ ಹಾಲಮೂರ್ತಿ ರಾವ್‌ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಹರಪನಹಳ್ಳಿ ವೃತ್ತದ ಸಿಪಿಐ ನಾಗರಾಜ್‌ ಎಂ. ಕಮ್ಮಾರ್‌, ಹಲುವಾಗಲು ಠಾಣೆ ಪಿಎಸ್‌ಐ ಪ್ರಶಾಂತ್‌, ಕೆ.ಗುರುರಾಜ್‌, ಅರುಣ್‌ ಕುಮಾರ್‌, ಸಿಬ್ಬಂದಿಯೊಂದಿಗೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೋಕ್ಸೊ ಕಾಯಿದೆಯಡಿ ಹಲುವಾಗಲು ಠಾಣೆಯಲ್ಲಿ ದೂರು ದಾಖಲಾಗಿದೆ.