ರಾಜಕೀಯ ಒತ್ತಡ ತಾಳಲಾರದೇ 30 ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾದ 1 ರೂ. ಕ್ಲಿನಿಕ್ ವೈದ್ಯ!

1 ರೂ. ಕ್ಲಿನಿಕ್ ಹೆಸರಿನಲ್ಲಿ ದೇಶಾದ್ಯಂತ ಮನೆ ಮಾತಾಗಿದ್ದ ಖ್ಯಾತ ವೈದ್ಯ ಡಾ. ರಾಹುಲ್ ಗುಲೆ, ರಾಜಕೀಯ ಒತ್ತಡ ತಾಳಲಾರದೇ ಸುಮಾರು 30 ಮಾತ್ರೆಗಳನ್ನು ಏಕಕಾಲದಲ್ಲಿ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಜಕೀಯ ಒತ್ತಡ ತಾಳಲಾರದೇ 30 ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾದ 1 ರೂ. ಕ್ಲಿನಿಕ್ ವೈದ್ಯ!
Linkup
ಮುಂಬಯಿ: ಹೆಸರಿನಲ್ಲಿ ದೇಶಾದ್ಯಂತ ಮನೆ ಮಾತಾಗಿದ್ದ ಖ್ಯಾತ ವೈದ್ಯ ಡಾ. , ರಾಜಕೀಯ ಒತ್ತಡ ತಾಳಲಾರದೇ ಸುಮಾರು 30 ಮಾತ್ರೆಗಳನ್ನು ಏಕಕಾಲದಲ್ಲಿ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಖುದ್ದು ಟ್ವೀಟ್ ಮೂಲಕ ಮಾಹಿತಿ ನೀಡಿರುವ ರಾಹುಲ್ ಗುಲೆ, ತೀವ್ರ ರಾಜಕೀಯ ಒತ್ತಡಗಳನ್ನು ಸಹಿಸದೇ 30 ಮಾತ್ರೆಗಳನ್ನು ಏಕಕಾಲದಲ್ಲಿ ಸೇವಿಸಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಇತ್ತೀಚಿಗೆ ರಾಹುಲ್ ಗುಲೆ ತಮಗೆ ಜೀವ ಬೆದರಿಕೆ ಇದೆ ಎದೂ ಆರೋಪಿಸಿದ್ದರು. ಕೆಲವು ಸ್ಥಳೀಯ ರಾಜಕೀಯ ಪ್ರಭಾವಿ ವ್ಯಕ್ತಿಗಳು ತಮ್ಮಿಂದ 29 ಲಕ್ಷ ರೂ. ಪಡೆದಿದ್ದು, 'ಆಪ್ಲಾ ದವಾಖಾನಾ'ದಲ್ಲಿ ಒಂದು ಕೋಟಿ ರೂ. ಹೂಡಿಕೆ ಮಾಡುವಂತೆ ತಮ್ಮನ್ನು ಒತ್ತಾಯಿಸುತ್ತಿದ್ದಾರೆ ಎಂದು ರಾಹುಲ್ ಗುಲೆ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೇಲೆ ನಿರಂತರವಾಗಿ ರಾಜಕೀಯ ಒತ್ತಡ ಹಾಕಲಾಗುತ್ತಿದ್ದು, ಈ ಒತ್ತಡ ತಾಳಲಾರದೇ ಆತ್ಮಹತ್ಯೆ ಕುರಿತು ಚಿಂತಿಸಿದ್ದಾಗಿ ರಾಹುಲ್ ಗುಲೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕಷ್ಟಪಟ್ಟು ದುಡಿದಿರುವ ಹಣ ಹೀಗೆ ರಾಜಕೀಯ ಕಾರಣಕ್ಕೆ ಪೋಲಾಗುತ್ತಿದ್ದು, ನನಗೂ ಮತ್ತು ನನ್ನ ಕುಟುಂಬಕ್ಕೂ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಈ ಒತ್ತಡ ನನ್ನಿಂದ ಸಹಿಸಲು ಆಗುತ್ತಿಲ್ಲ ಎಂದು ರಾಹುಲ್ ಗುಲೆ ಹೇಳಿದ್ದಾರೆ. ಸೆಂಟ್ರಲ್ ರೈಲ್ವೇ ಸುಪರ್ದಿಯಲ್ಲಿ ಬರುವ ರೈಲು ನಿಲ್ದಾಣಗಳಲ್ಲಿ 1 ರೂ. ಕ್ಲಿನಿಕ್‌ಗಳನ್ನು ಸ್ಥಾಪಿಸಿದ್ದ ರಾಹುಲ್ ಗುಲೆ, ರೈಲ್ವೆ ಪ್ರಯಾಣಿಕರು ಮತ್ತು ಸಾಮಾನ್ಯ ನಾಗರಿಕರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ದೇಶಾದ್ಯಂತ ಮನೆಮಾತಾಗಿರುವ ವೈದ್ಯರು ಎಂಬುದು ಇಲ್ಲಿ ಗಮನಾರ್ಹ. ಕೋವಿಡ್ ಸಂಕಷ್ಟ ಕಾಲದಲ್ಲೂ ಅತಿ ಕಡಿಮೆ ದರಕ್ಕೆ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನೋರ್ವ, ರಾಜಕೀಯ ಒತ್ತಡಕ ತಾಳಲಾರದೇ ಮಾತ್ರೆಗಳನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವುದು ವಿಪರ್ಯಾಸವೇ ಸರಿ.