ಅನಿಲ್ ದೇಶ್‌ಮುಖ್‌ಗೆ ಸೇರಿದ 4.20 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು: ಇ.ಡಿ ಕ್ರಮ

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಮತ್ತು ಅವರ ಕುಟುಂಬಕ್ಕೆ ಸೇರಿದ 4.20 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ.

ಅನಿಲ್ ದೇಶ್‌ಮುಖ್‌ಗೆ ಸೇರಿದ 4.20 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು: ಇ.ಡಿ ಕ್ರಮ
Linkup
ಮುಂಬಯಿ: ಮತ್ತು ಲಂಚ ಪ್ರಕರಣದಲ್ಲಿ ಸಿಲುಕಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಮತ್ತು ಎನ್‌ಸಿಪಿ ಮುಖಂಡ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಅನಿಲ್ ದೇಶ್‌ಮುಖ್ ಹಾಗೂ ಅವರ ಕುಟುಂಬದವರಿಗೆ ಸೇರಿದ 4.20 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ () ಅಡಿಯಲ್ಲಿ ಅನಿಲ್ ದೇಶ್‌ಮುಖ್ ಅವರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ದೇಶ್‌ಮುಖ್ ಅವರ ಪತ್ನಿ ಆರತಿ ಅವರಿಗೆ ಜಾರಿ ನಿರ್ದೇಶನಾಲಯ () ಬುಧವಾರ ಸಮನ್ಸ್ ನೀಡಿತ್ತು. 'ಆರತಿ ಅವರು ಗೃಹಿಣಿಯಾಗಿದ್ದು, ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಜಾರಿ ನಿರ್ದೇಶನಾಲಯದ ಪ್ರಕರಣವು ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಹೇಳಿಕೆಯನ್ನು ಆಧಾರಿಸಿದೆ. ಆಯೋಗದ ಮುಂದೆ ಹೇಳಿಕೆ ನೀಡುವಾಗ ವಾಜೆ ಬೇರೆಯದೇ ಮಾಹಿತಿ ನೀಡಿದ್ದರು. ಸಿಬಿಐ ಹಾಗೂ ಇ.ಡಿ ಮುಂದೆ ನೀಡಿರುವ ಹೇಳಿಕೆಯೂ ಅವರು ಅಫಿಡವಿಟ್‌ನಲ್ಲಿ ಸಲ್ಲಿಸಿದ ವಿವರಕ್ಕೂ ವ್ಯತ್ಯಾಸವಿದೆ. ಅನಿಲ್ ದೇಶ್‌ಮುಖ್ ಅವರಾಗಲೀ, ಅವರ ಸಹಾಯಕ ಕುಂದನ್ ಶಿಂಧೆ ಅವರಿಗಾಗಲೀ ಹಣ ನೀಡಿರುವ ಬಗ್ಗೆ ಅವುಗಳಲ್ಲಿ ಯಾವ ಉಲ್ಲೇಖವೂ ಇಲ್ಲ' ಎಂದು ಅನಿಲ್ ದೇಶ್‌ಮುಖ್ ಪರ ವಕೀಲರು ಹೇಳಿದ್ದಾರೆ. 'ಈ ತನಿಖೆ ನ್ಯಾಯಯುತವಾಗಿಲ್ಲ ಎಂದು ಅನಿಲ್ ದೇಶ್‌ಮುಖ್ ಅವರಿಗೆ ಅನಿಸಿದೆ. ಹೀಗಾಗಿ ಅವರು ತನಿಖೆಗೆ ಸೇರಿಕೊಳ್ಳುತ್ತಿರಲಿಲ್ಲ. ಈ ತನಿಖೆಯು ಆರೋಪಗಳ ಆಧಾರವಾಗಿ ನಡೆಯುತ್ತಿದೆಯಷ್ಟೇ. ಕೇಳಿದಾಗಲೆಲ್ಲಾ ನಾವು ದಾಖಲೆಗಳನ್ನು ನೀಡುತ್ತಿದ್ದೇವೆ. ಪರಮ್ ಬೀರ್ ಸಿಂಗ್ ಮಾಡಿದ್ದ ಆರೋಪಗಳು ನಿರಾಧಾರ. ಹೈಕೋರ್ಟ್ ಕೂಡ ಅವರನ್ನು ಇಷ್ಟು ಸಮಯ ಮೌನವಾಗಿದ್ದು ಏಕೆ ಎಂದು ಪ್ರಶ್ನಿಸಿದೆ' ಎಂದು ಅವರು ತಿಳಿಸಿದ್ದಾರೆ.