'ದೇಹಕ್ಕೆ ಸಾವಿದೆ, ಆತ್ಮ ಅಮರ..' ಕಣ್ಣೀರು ತರಿಸುತ್ತೆ ಮುಂಬೈ ವೈದ್ಯೆಯ ಕೊನೇ ಫೇಸ್‌ಬುಕ್ ಪೋಸ್ಟ್‌

ಈ ಪೈಕಿ ಕಳೆದ ಮಾರ್ಚ್‌ನಲ್ಲಿ ಮಹಾರಾಷ್ಟ್ರ ಒಂದರಲ್ಲೇ 168 ಮಂದಿ ಜೀವಬಿಟ್ಟಿದ್ದಾರೆ. ಈ ಪಟ್ಟಿಗೆ ಇದೀಗ ಮನೀಷಾ ಅವರೂ ಸೇರ್ಪಡೆಯಾಗಿದ್ದಾರೆ. ಮನೀಷಾ ಅವರ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಮುಂಬೈನ ವೈದ್ಯಕೀಯ ಲೋಕ ಹೇಳುತ್ತಿದೆ.

'ದೇಹಕ್ಕೆ ಸಾವಿದೆ, ಆತ್ಮ ಅಮರ..' ಕಣ್ಣೀರು ತರಿಸುತ್ತೆ ಮುಂಬೈ ವೈದ್ಯೆಯ ಕೊನೇ ಫೇಸ್‌ಬುಕ್ ಪೋಸ್ಟ್‌
Linkup
: ಇಲ್ಲಿನ ಟಿಬಿ ಆಸ್ಪತ್ರೆಯೊಂದರ ವೈದ್ಯಾಧಿಕಾರಿ ಕೊರೊನಾಗೆ ಬಲಿಯಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. 51 ವರ್ಷ ವಯಸ್ಸಿನ ಡಾ. ಮನೀಷಾ ಜಾಧವ್ ಎಂಬ ಹಿರಿಯ ವೈದ್ಯಾಧಿಕಾರಿ ಕೋವಿಡ್‌ಗೆ ಬಲಿಯಾಗುವ ಮುನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಈ ಪೋಸ್ಟ್‌ ಇದೀಗ ಭಾರೀ ಸುದ್ದಿಯಲ್ಲಿದೆ. ಮನೀಷಾ ಅವರು ಪೋಸ್ಟ್‌ ಹಾಕಿದ 36 ಗಂಟೆಗಳ ಬಳಿಕ ಅವರು ಕೊರೊನಾಗೆ ಬಲಿಯಾಗಿದ್ದಾರೆ. ಐಎಂಎ ಪ್ರಕಾರ ದೇಶದಲ್ಲಿ 18 ಸಾವಿರ ವೈದ್ಯರು ಕೊರೊನಾ ವೈರಸ್‌ ಸೋಂಕಿತರಾಗಿದ್ದಾರೆ. ಈ ಪೈಕಿ ಕಳೆದ ಮಾರ್ಚ್‌ನಲ್ಲಿ ಮಹಾರಾಷ್ಟ್ರ ಒಂದರಲ್ಲೇ 168 ಮಂದಿ ಜೀವಬಿಟ್ಟಿದ್ದಾರೆ. ಈ ಪಟ್ಟಿಗೆ ಇದೀಗ ಮನೀಷಾ ಅವರೂ ಸೇರ್ಪಡೆಯಾಗಿದ್ದಾರೆ. ಮನೀಷಾ ಅವರ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಮುಂಬೈನ ವೈದ್ಯಕೀಯ ಲೋಕ ಹೇಳುತ್ತಿದೆ. ಅದರಲ್ಲೂ ಮನೀಷಾ ಅವರು ಹಾಕಿದ ಕೊನೆಯ ಫೇಸ್‌ಬುಕ್ ಪೋಸ್ಟ್‌ ಮನಮುಟ್ಟುವಂತಿದೆ. ‘ಬಹುಶಃ ಇದು ನನ್ನ ಕೊನೆಯ ಶುಭ ದಿನ. ಈ ವೇದಿಕೆಯಲ್ಲಿ ನಾನು ನಿಮ್ಮನ್ನು ಮತ್ತೆ ಭೇಟಿ ಮಾಡಲಾರೆ ಎನಿಸುತ್ತಿದೆ. ಎಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿ. ದೇಹ ಸಾಯುತ್ತೆ. ಆದ್ರೆ, ಆತ್ಮ ಸಾಯೋದಿಲ್ಲ. ಆತ್ಮ ಎಂದೆಂದಿಗೂ ಅಮರ’ ಮುಂಬೈನಲ್ಲಿ ನಿಯಂತ್ರಣಕ್ಕೆ ಬಾರದಂತಾಗಿದೆ. ಆರೋಗ್ಯ ಸೇವಾ ರಂಗವಂತೂ ಭಾರೀ ಒತ್ತಡಕ್ಕೆ ಸಿಲುಕಿದೆ. ಕೊರೊನಾದಿಂದ ಜನರನ್ನು ಕಾಪಾಡುವ ವೈದ್ಯರೇ ಸಾವಿನ ದವಡೆಗೆ ಸಿಲುಕುತ್ತಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.