Fake Loan Case: 'ಸಿನಿಮಾ ಮಾಡಿಯೇ ನಮ್ಮ ಜೀವನ ನಡೆಸಬೇಕಿಲ್ಲ'- ನಿರ್ಮಾಪಕ ಉಮಾಪತಿ

ನಟ ದರ್ಶನ್ ಹೆಸರಿನಲ್ಲಿ 25 ಕೋಟಿ ರೂ. ವಂಚನೆಗೆ ಯತ್ನಿಸಿದ ಪ್ರಕರಣ ಈಗ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಹೆಸರೂ ಕೂಡ ಕೇಳಿಬಂದಿದೆ. ಆದರೆ, ತಮ್ಮ ಮೇಲಿನ ಆರೋಪಗಳಿಗೆ ಉಮಾಪತಿ ಉತ್ತರ ನೀಡಿದ್ದಾರೆ.

Fake Loan Case: 'ಸಿನಿಮಾ ಮಾಡಿಯೇ ನಮ್ಮ ಜೀವನ ನಡೆಸಬೇಕಿಲ್ಲ'- ನಿರ್ಮಾಪಕ ಉಮಾಪತಿ
Linkup
ನಟ ದರ್ಶನ್‌ ಅವರ ಹೆಸರಿನಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ 'ರಾಬರ್ಟ್' ನಿರ್ಮಾಪಕ ಅವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ, ಅವರು ಕೂಡ ಪತ್ರಿಕಾಗೋಷ್ಠಿ ನಡೆಸಿದ್ದಾರೆ. 'ನಿರ್ಮಾಪಕರೇ ನೀವು ಹೇಗೇ ಹೇಳ್ತಾರೋ ಹಾಗೇ ಹೋಗೋಣ ಅಂತ ಅವರೇ ಹೇಳಿದ್ರು. ಆದರೆ, ಆರೋಪ ಬಂದಿದೆ, ಮುಂದುವರೆಯೋಣ ಅಂತ ನಮ್ಮ ಕುಟುಂಬದವರು ಹೇಳಿದ್ದಾರೆ. ನಾವೇನ್ ಸಿನಿಮಾ ಮಾಡಿಯೇ ನಮ್ಮ ಜೀವನ ನಡೆಸಬೇಕಿಲ್ಲ. ಒಬ್ಬರು ನಮ್ಮನ್ನು ಕಳೆದುಕೊಳ್ಳೋಕೆ ಅವರು ರೆಡಿ ಇದ್ದಮೇಲೆ, ನಾವು ಕಳೆದುಕೊಳ್ಳೋಕೆ ರೆಡಿ ಇರ್ತೀವಿ' ಎಂದು ಉಮಾಪತಿ ಹೇಳಿದ್ದಾರೆ. ಆರೋಪ ಬಂದಿದೆ. ಅದು ಸಾಬೀತಾಗಲಿ 'ಇದೇನು ತಲೆ ಹೋಗುವಂತಹ ಕೆಲಸ ಅಲ್ಲ. ಆರೋಪ ಬಂದಿದೆ, ಅದು ಸಾಬೀತಾಗಲಿ. ನಾನು ತಪ್ಪಿತಸ್ಥನೋ, ಇಲ್ಲ ಅವರು ತಪ್ಪಿತಸ್ಥರೋ ಗೊತ್ತಾಗುತ್ತದೆ. ನನ್ನ ಪ್ರಕಾರ, ಅವರು ಮಾಡಿಲ್ಲ, ನಾನು ಮಾಡಿಲ್ಲ. ಯಾರೋ ಮಧ್ಯದವರು ಮಾಡಿರಬಹುದು. ಆದರೆ, ಅವರ ಪ್ರಕಾರ, ನಾನೊಬ್ಬನೇ ಮಾಡಿರೋದು. ಐದು ಜನ ಇದ್ದ ಮಾತ್ರಕ್ಕೆ ಅವರು ಮಾಡಿಲ್ಲ ಅಂತಲ್ಲ, ಒಬ್ನೇ ಇದೀನಿ ಅಂದಮಾತ್ರಕ್ಕೆ ನಾನು ಮಾಡಿದ್ದೇನೆ ಎಂದರ್ಥವಲ್ಲ' ಎಂದು ಉಮಾಪತಿ ಗುಡುಗಿದ್ದಾರೆ. ದರ್ಶನ್‌ ನನ್ನನ್ನು ಬಿಟ್ಟುಕೊಟ್ಟಿಲ್ಲ! 'ನಾನು ಜಯನಗರ ಸ್ಟೇಷನ್‌ನಲ್ಲಿ ಜೂನ್ 17ಕ್ಕೆ ದೂರು ನೀಡಿದ್ದೇನೆ. ಆದ್ರೆ, ದರ್ಶನ್ ಅವರ ಸ್ನೇಹಿತರು ಹೇಳ್ತಾರೆ, 'ನಮಗೆ ಬೆಂಗಳೂರು ಪೊಲೀಸ್ ಮೇಲೆ ನಂಬಿಕೆ ಇಲ್ಲ' ಅಂತ. ಯಾಕೆ ಬೆಂಗಳೂರು ಪೊಲೀಸರನ್ನು ನಾವು ನೇಮಕ ಮಾಡಿದ್ವಾ? ಅಥವಾ ಮೈಸೂರು ಪೊಲೀಸರನ್ನು ಅವರು ನೇಮಕ ಮಾಡಿದ್ದಾರಾ? ದರ್ಶನ್‌ ಅವರು ನನ್ನನ್ನು ಎಲ್ಲಿಯೂ ಬಿಟ್ಟುಕೊಡದೇ ಮಾತಾಡಿದ್ರು' ಎಂದು ಉಮಾಪತಿ ತಿಳಿಸಿದ್ದಾರೆ. ನಾನು ಬರೀ ನಿರ್ಮಾಪಕನಾಗಿ ಇರಬೇಕಾಗಿತ್ತು!'ನಾನು ತಿಂದು ಹೆಚ್ಚಾಗಿ ಮಾಡಿಕೊಂಡಿದ್ದು ಇದೆಲ್ಲ. ಒಬ್ಬ ನಿರ್ಮಾಪಕನಾಗಿ ಇರಬೇಕಾಗಿತ್ತು. ಹಾಗೇ ನಾನು ಮಾಡಲಿಲ್ಲ. ಅದು ನಾನು ಮಾಡಿದ ಮೊದಲ ತಪ್ಪು. ದರ್ಶನ್ ಅವರ ಜೊತೆಗೆ ತುಂಬ ಚೆನ್ನಾಗಿದ್ದೇವೆ. ಅವರು ನನ್ನನ್ನು ಬಿಟ್ಟುಕೊಡೋ ಥರ ಎಲ್ಲಿಯೂ ಮಾತಾಡಿಲ್ಲ. ನಾನು ಕೂಡ ಅವರನ್ನು ಕಳೆದುಕೊಳ್ಳೋಕೆ ರೆಡಿ ಇಲ್ಲ. ದರ್ಶನ್ ಅವರ ಹೆಸರು ಮತ್ತು ನನ್ನ ಹೆಸರು ಬಂದಿದ್ದಕ್ಕೆ ಇದು ಇಲ್ಲಿವರೆಗೂ ಬಂದಿದೆ' ಎಂದಿದ್ದಾರೆ ಉಮಾಪತಿ. ಆರೋಪಕ್ಕೆ ನಾನು ಉತ್ತರ ಕೊಡ್ತಿನಿ!'ನಾನು ಕ್ರಿಮಿನಲ್ ಹಿನ್ನೆಲೆಯವನಾಗಿದ್ದರೆ, ಆ ಥರವೇ ಯೋಚನೆ ಮಾಡ್ತಾ ಇದ್ದೆ. ಈ ವಿಚಾರದಲ್ಲಿ ದರ್ಶನ್ ಅವರನ್ನು ಉಳಿಸೋದಕ್ಕೆ ಅಂತ ನಾನು ಬಂದಿದ್ದು ಬಿಟ್ಟರೆ ಬೇರೇನೂ ಇಲ್ಲ. ನನ್ನ ಮೇಲೆ ದರ್ಶನ್ ಅವರು ಎಲ್ಲಿಯೂ ಆರೋಪ ಮಾಡಿಲ್ಲ. ಅವರ ಸ್ನೇಹಿತರು ಆರೋಪ ಮಾಡಿದ್ದಾರೆ. ನಾನು ಉತ್ತರ ಕೊಡ್ತಿನಿ. ಅವರು ಆರೋಪ ಮಾಡಿದಂಗೆ ನಾನು ಮಾಡಬಹುದು. ಏಪ್ರಿಲ್‌ನಿಂದ ಚಾಟ್‌ ಹಿಸ್ಟರಿ ಸಿಕ್ಕಿದೆ. ಅದರಲ್ಲಿ ಏನಾದ್ರೂ ಡ್ಯಾಮೇಜಿಂಗ್ ಆದಂತಹ ಮಾತುಕತೆ ಆಗಿದೆಯೇ? ಇಲ್ಲ. ಇನ್ನು, ಮೈಸೂರಿನಲ್ಲಿ ಜುಲೈ 3ರಂದು ನೀಡಿದ ದೂರಿನಲ್ಲಿ ಹರ್ಷ ಮೆಲಂಟ ಯಾಕೆ ದೂರಿನ ಕಾಪಿಯಲ್ಲಿ ರಾಂಗ್ ನಂಬರ್ ಕೊಟ್ಟಿದ್ದಾರೆ' ಎಂದು ಪ್ರಶ್ನೆ ಮಾಡಿದ್ದಾರೆ ಉಮಾಪತಿ.