'ಬೆಂಗಳೂರು ಡೇಸ್' ಸಿನಿಮಾ ನಟ ಫಹಾದ್ ಫಾಸಿಲ್‌ಗೆ ಶೂಟಿಂಗ್ ವೇಳೆ ಅಪಘಾತ; ವೈದ್ಯರು ಏನು ಹೇಳಿದ್ರು?

ಮಲಯಾಳಂ ಚಿತ್ರರಂಗದ ಖ್ಯಾತ ನಟ ಫಹಾದ್ ಫಾಸಿಲ್ ಅವರಿಗೆ ಕಳೆದ ಮಾರ್ಚ್ ತಿಂಗಳಿನಲ್ಲಿ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾಗ ಅಪಘಾತ ಆಗಿತ್ತು. ಅದರಿಂದ ಹೇಗೆ ಬಚಾವ್ ಆದರು ಎಂಬ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

'ಬೆಂಗಳೂರು ಡೇಸ್' ಸಿನಿಮಾ ನಟ ಫಹಾದ್ ಫಾಸಿಲ್‌ಗೆ ಶೂಟಿಂಗ್ ವೇಳೆ ಅಪಘಾತ; ವೈದ್ಯರು ಏನು ಹೇಳಿದ್ರು?
Linkup
ಮಲಯಾಳಂ ಚಿತ್ರರಂಗದ 'ಬೆಂಗಳೂರ್ ಡೇಸ್' ಸಿನಿಮಾ ಖ್ಯಾತಿಯ ನಟ ಅವರಿಗೆ ಕಳೆದ ಮಾರ್ಚ್ ತಿಂಗಳಲ್ಲಿ 'ಮಲಯಾಂಕುಂಜು' ಸಿನಿಮಾ ಶೂಟಿಂಗ್ ವೇಳೆ ಅಪಘಾತ ಆಗಿತ್ತು. ಇಷ್ಟುದಿನಗಳ ಈ ಬಗ್ಗೆ ಗಪ್‌ಚುಪ್ ಆಗಿದ್ದ ಫಹಾದ್ ಈಗ ಮೌನ ಮುರಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘವಾದ ಪತ್ರವನ್ನು ಪೋಸ್ಟ್ ಮಾಡಿ ಮಹಿತಿ ಹಂಚಿಕೊಂಡಿದ್ದಾರೆ. ಫಹಾದ್ ಫಾಸಿಲ್ ಹೇಳಿದ್ದೇನು? ಕೊರೊನಾ ಟೈಮ್‌ನಲ್ಲಿ ನಾನು ಈ ವಿಷಯ ಹೇಳೋದು ಸರಿಯಲ್ಲದ ವಿಷಯ ಆಗಿರಬಹುದು. ನಮ್ಮ ಹತ್ತಿರ ಎಷ್ಟು ಸಾಧ್ಯವೋ ಅಷ್ಟು ನಾವು ಭರವಸೆಯೊಂದಿಗೆ ಹೋರಾಡುತ್ತಿದ್ದೇವೆ ಎಂದುಕೊಳ್ಳುವೆ. 'ಮಲಯಾಂಕುಂಜು' ಸಿನಿಮಾ ಶೂಟಿಂಗ್‌ ಟೈಮ್‌ನಲ್ಲಿ ನಡೆದ ಅಪಘಾತದಿಂದ ನಾನು ಕೂಡ ಚೇತರಿಸಿಕೊಳ್ಳುತ್ತಿದ್ದೇನೆ. ಮಾರ್ಚ್ 2ರಿಂದ ನನ್ನ ಕ್ಯಾಲೆಂಡರ್‌ನಲ್ಲಿ ಲಾಕ್‌ಡೌನ್ ಶುರುವಾಗಿತ್ತು. ನನ್ನ ವೈದ್ಯರು ಹೇಳುವ ಪ್ರಕಾರ ನಾನು ತುಂಬ ಹತ್ತಿರಕ್ಕೆ ಹೋಗಿದ್ದೆ. ಭೂಮಿಗೆ ತಾಕುವ ಮುನ್ನ ಅನೇಕರು ಕೈಗಳನ್ನು ಮುಖಕ್ಕಿಂತ ಮುಂಚೆ ಮುಂದೆ ಮಾಡೋದಿಲ್ಲ. ಈ ರೀತಿ ಮಾಡಲು 80% ಜನರು ಸೋಲುತ್ತಾರೆ. ಆದರೆ ನಾನು ಮಾತ್ರ ಹಾಗೆ ಮಾಡಲಿಲ್ಲ. ಹೀಗಾಗಿ ಬಚಾವ್ ಆದೆ. ಇನ್ನು ಮುಂಬರುವ ನನ್ನ 'ಮಾಲಿಕ್' ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಎಲ್ಲರೂ ನೋಡಲಿ ಎಂಬ ಮನವಿ ಮೇರೆಗೆ ಓಟಿಟಿಯಲ್ಲಿ ರಿಲೀಸ್ ಮಾಡಲಾಗುತ್ತಿದೆ. ಓಟಿಟಿಯಲ್ಲಿ 'ಮಾಲಿಕ್' ಇನ್ನು ಫಹಾದ್ ಅವರು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಫಸ್ಟ್‌ಲುಕ್‌ನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಮಾಲಿಕ್' ಸಿನಿಮಾವನ್ನು ಮಹೇಶ್ ನಾರಾಯಣನ್ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಥಿಯೇಟರ್‌ನಲ್ಲಿ ಈ ಚಿತ್ರವನ್ನು ರಿಲೀಸ್ ಮಾಡಬೇಕು ಎಂದುಕೊಳ್ಳಲಾಗಿತ್ತು. ಆದರೆ ಕೊರೊನಾ ಕಾರಣಕ್ಕಾಗಿ ಚಿತ್ರತಂಡ ಓಟಿಟಿಯಲ್ಲಿ ರಿಲೀಸ್ ಮಾಡುತ್ತಿದೆ. ಆದರೆ ಯಾವಾಗ ಓಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಹೇಳಿಲ್ಲ.