ಕೋವಿಡ್‌ನಿಂದ ಡಾರ್ಲಿಂಗ್ ಕೃಷ್ಣ, ಪತ್ನಿ ಮಿಲನಾ ನಾಗರಾಜ್ ಗುಣಮುಖ

ಕೊರೊನಾ ವೈರಸ್ ಸೋಂಕಿನಿಂದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಕೋವಿಡ್‌ನಿಂದ ಡಾರ್ಲಿಂಗ್ ಕೃಷ್ಣ, ಪತ್ನಿ ಮಿಲನಾ ನಾಗರಾಜ್ ಗುಣಮುಖ
Linkup
'ಲವ್ ಮಾಕ್ಟೇಲ್' ಜೋಡಿ ಹಾಗೂ ಮಿಲನಾ ನಾಗರಾಜ್‌ಗೆ ಸೋಂಕು ತಗುಲಿತ್ತು. ಚಿತ್ರೀಕರಣದಿಂದ ವಾಪಸ್ ಆಗುತ್ತಿದ್ದಂತೆಯೇ ಕೃಷ್ಣ ಹಾಗೂ ಪತ್ನಿ ಮಿಲನಾಗೆ ಪಾಸಿಟಿವ್ ದೃಢಪಟ್ಟಿತ್ತು. ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ದಂಪತಿ ಇದೀಗ ಕೊರೊನಾ ವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ತಾವು ಚೇತರಿಸಿಕೊಂಡಿರುವ ಬಗ್ಗೆ ಡಾರ್ಲಿಂಗ್ ಕೃಷ್ಣ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ತಮಗೆ ಜ್ವರ ಹಾಗೂ ಬಾಡಿ ಪೇನ್ ಬಾಧಿಸಿತ್ತು ಎಂಬುದನ್ನೂ ತಮ್ಮ ಪೋಸ್ಟ್‌ನಲ್ಲಿ ಡಾರ್ಲಿಂಗ್ ಕೃಷ್ಣ ಉಲ್ಲೇಖಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಇನ್ಸ್ಟಾಗ್ರಾಮ್ ಪೋಸ್ಟ್ ''ನಮಗೆ ಈಗಷ್ಟೇ ಕೋವಿಡ್ ರಿಪೋರ್ಟ್ ಸಿಕ್ತು. ನಮಗೆ ನೆಗೆಟಿವ್ ಕಂಡುಬಂದಿದೆ. ನಮಗೆ ಮೂರು ದಿನಗಳ ಕಾಲ ಜ್ವರ ಹಾಗೂ ಬಾಡಿ ಪೇನ್ ಬಾಧಿಸಿತ್ತು. ನಂತರ ನಾವು ಸುಧಾರಿಸಿಕೊಂಡ್ವಿ. ನಮ್ಮನ್ನ ಪ್ರೀತಿಸುವವರು ಜೊತೆಯಲ್ಲಿದ್ದು, ಒಬ್ಬರಿಗೊಬ್ಬರು ಚೆನ್ನಾಗಿ ನೋಡಿಕೊಂಡರೆ, ಅದೇ ಉತ್ತಮ ಔಷಧಿ. ಸುರಕ್ಷಿತವಾಗಿರಿ, ಮನೆಯಲ್ಲೇ ಇರಿ, ಕುಟುಂಬದ ಜೊತೆಗೆ ಕಾಲ ಕಳೆಯಿರಿ'' ಎಂದು ಡಾರ್ಲಿಂಗ್ ಕೃಷ್ಣ ಬರೆದುಕೊಂಡಿದ್ದಾರೆ. ಮಿಲನಾ ನಾಗರಾಜ್ ಇನ್ಸ್ಟಾಗ್ರಾಮ್ ಪೋಸ್ಟ್ ''ಜೊತೆಯಾಗಿ ಹೋರಾಡಿ ಗೆದ್ವಿ. ಕೋವಿಡ್ ನೆಗೆಟಿವ್ ಕಂಡುಬಂದಿದೆ. ನಿಮ್ಮೆಲ್ಲರ ಆಶೀರ್ವಾದಕ್ಕೆ ಧನ್ಯವಾದಗಳು. ನಮಗೆ ಬೆಂಬಲವಾಗಿ ನಿಂತ ನನ್ನ ತಂದೆ-ತಾಯಿ ಹಾಗೂ ಸಹೋದರನಿಗೆ ನಾನು ಆಭಾರಿ'' ಎಂದು ಮಿಲನಾ ನಾಗರಾಜ್ ಬರೆದುಕೊಂಡಿದ್ದಾರೆ. ಫೆಬ್ರವರಿ 14 ರಂದು ಹಸೆಮಣೆ ಏರಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಹನಿಮೂನ್‌ಗೆಂದು ಮಾಲ್ದೀವ್ಸ್‌ಗೆ ಹಾರಿದ್ದರು. ಅಲ್ಲಿಂದ ವಾಪಸ್ ಬಂದ್ಮೇಲೆ ಸಿನಿಮಾಗಳ ಚಿತ್ರೀಕರಣಗಳಲ್ಲಿ ತೊಡಗಿದ್ದರು. 'ಲವ್ ಮಾಕ್ಟೇಲ್' ಚಿತ್ರದಲ್ಲಿ ಕಮಾಲ್ ಮಾಡಿದ್ದ ಈ ಜೋಡಿ ಇದೀಗ 'ಲವ್ ಮಾಕ್ಟೇಲ್ 2' ಚಿತ್ರದ ತಯಾರಿಯಲ್ಲಿ ತೊಡಗಿದ್ದಾರೆ. (ಚಿತ್ರಕೃಪೆ: ಮಿಲನಾ ನಾಗರಾಜ್ ಇನ್ಸ್ಟಾಗ್ರಾಮ್ ಪ್ರೊಫೈಲ್)