ಶಿವಮೊಗ್ಗದ ಸಕ್ರೆಬೈಲಿಗೆ ಭೇಟಿ ಕೊಟ್ಟ ಪುನೀತ್ ರಾಜ್‌ಕುಮಾರ್; ಆಶ್ಚರ್ಯ ಮೂಡಿಸಿದ ಕಾರಣ

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರು ವಮೊಗ್ಗದ ಗಾಜನೂರು ಸಮೀಪದ ಸಕ್ರೆಬೈಲು ಆನೆಬಿಡಾರದ ಕ್ರಾಲ್‌ಗೆ ಆಗಮಿಸಿದ್ದಾರೆ. ಅದಕ್ಕೆ ಕಾರಣ ಏನು? ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಶಿವಮೊಗ್ಗದ ಸಕ್ರೆಬೈಲಿಗೆ ಭೇಟಿ ಕೊಟ್ಟ ಪುನೀತ್ ರಾಜ್‌ಕುಮಾರ್; ಆಶ್ಚರ್ಯ ಮೂಡಿಸಿದ ಕಾರಣ
Linkup
'ಪವರ್‌ ಸ್ಟಾರ್‌' ನಟ ಪುನೀತ್‌ ರಾಜ್‌ಕುಮಾರ್‌ ಇಂದು ಮಧ್ಯಾಹ್ನ ಶಿವಮೊಗ್ಗದ ಗಾಜನೂರು ಸಮೀಪದ ಆನೆಬಿಡಾರದ ಕ್ರಾಲ್‌ಗೆ ಆಗಮಿಸಿದ್ದಾರೆ. ಪುನೀತ್ ಆಗಮನ ವಿಷಯ ಗೌಪ್ಯವಾಗಿದ್ದರೂ ಸಹ ಸ್ಥಳೀಯರು ಹಾಗೂ ಅಭಿಮಾನಿಗಳಿಗೆ ಮಾಹಿತಿ ಸಿಕ್ಕಿದ್ದು ಕ್ರಾಲ್‌ ಗೇಟ್‌ ಬಳಿಯೇ ಹನ್ನೆರಡು ಗಂಟೆಯಿಂದಲೂ ಕಾಯುತ್ತಿದ್ದರು. ನಾಲ್ಕು ಎಸ್‌ಯುವಿಗಳು ಕ್ರಾಲ್‌ನೊಳಗೆ ತೆರಳಿದರೂ ಸಹ ಪುನೀತ್‌ ರಾಜ್‌ಕುಮಾರ್‍ ಕಾರನಲ್ಲಿದ್ದರಾ ಎಂಬ ಸುಳಿವು ಸಿಗಲಿಲ್ಲ. ಕಾರಿನೊಳಗಿದ್ದವರು ಯಾರೂ ಕಾಣಲಿಲ್ಲ. ಒಂದು ಗಂಟೆಯವರೆಗೆ ಮಾಧ್ಯಮ ಪ್ರತಿನಿಧಿಗಳೂ ಸಹ ಅಲ್ಲೇ ಕಾಯುತ್ತಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಗೇಟ್‌ ಬಳಿಯೇ ಮೊಕ್ಕಾಂ ಹೂಡಿದ್ದರು. ಯಾರನ್ನೂ ಸಹ ಒಳಗೆ ಬಿಡುತ್ತಿರಲಿಲ್ಲ. ಸ್ವಲ್ಪ ಸಮಯದ ನಂತರ ಗೇಟ್‌ ಬಳಿ ಆಗಮಿಸಿದ ಪುನೀತ್ ರಾಜ್‌ ಕುಮಾರ್‌ ನೆರೆದಿದ್ದವರನ್ನ ಮಾತನಾಡಿಸಿ ಕೊರೊನಾ ಇರುವ ಕಾರಣ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮನವಿ ಮಾಡಿದರು. ಮಾಧ್ಯಮಗಳೂ ಸಹ ವಿಡಿಯೋ ಚಿತ್ರೀಕರಣ ನಡೆಸದಂತೆ ಪುನೀತ್ ಜೊತೆಗೆ ಬಂದವರು ಕೇಳಿಕೊಂಡರು. ಏನನ್ನೂ ಮಾತನಾಡದೇ ಪುನೀತ್ ರಾಜ್‌ ಕುಮಾರ್‌ ವಾಪಸ್‌ ಕ್ರಾಲ್‌ ಕಡೆ ಹೆಜ್ಜೆ ಹಾಕಿದರು. ಪುನೀತ್‌ ರಾಜ್‌ ಕುಮಾರ್ ಸಕ್ರೆಬೈಲ್ ಆನೆ ಬಿಡಾರಕ್ಕೆ ಚಿತ್ರೀಕರಣಕ್ಕೆ ಬಂದಿರುವುದಂತೂ ಪಕ್ಕಾ ಆದರೆ ಅವರ ಶೂಟಿಂಗ್‌ ಗೆ ಇರಬಹುದಾ ಎಂದು ಅನುಮಾನ ಮೂಡಿದೆ. ಆದರೆ ಅಧಿಕಾರಿಗಳು ಮಾತ್ರ ಇಲಾಖೆಯೆ ಡಾಕ್ಯುಮೆಂಟರಿ ಚಿತ್ರೀಕರಣಕ್ಕೆ ಪುನೀತ್ ಬಂದಿರುವುದಾಗಿ ಹೇಳುತ್ತಾರೆ. ಈ ಹಿಂದೆ ಶಿವರಾಜ್‌ ಕುಮಾರ್‌ ಸಹ ಚಿತ್ರೀಕರಣ ನಿಷೇಧ ಪ್ರದೇಶ ಸಕ್ರೆಬೈಲು ಆನೆ ಬಿಡಾರಕ್ಕೆ ಬಂದಿದ್ದಾಗ ಕೂಡ ಸಿನಿಮಾ ಶೂಟಿಂಗ್‌ ಎಂದು ಪರಿಸರವಾದಿಗಳು ತಕರಾರು ತೆಗೆದಿದ್ದರು. ಒಟ್ಟಿನಲ್ಲಿ ಪುನೀತ್‌ ರಾಜ್‌ ಕುಮಾರ್‍ ಇಂದು ನಾಳೆ ಇಲ್ಲೇ ಇರುವುದಂತೂ ಪಕ್ಕಾ ಆಗಿದೆ. ಆದರೆ ಕ್ರಾಲ್ ಒಳಗೆ ಏನು ನಡೀತಿದೆ, ಯಾವ ತರಹದ ಸಾಕ್ಷ್ಯಚಿತ್ರ ಎಂಬುದನ್ನ ಮಾತ್ರ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. 'ಪವರ್ ಸ್ಟಾರ್' ಮತ್ತು 'ಯು-ಟರ್ನ್‌' ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್ ಕಾಂಬಿನೇಷನ್‌ನಲ್ಲಿ 'ದ್ವಿತ್ವ' ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ತ್ರಿಷಾ ಕೃಷ್ಣನ್ ಈ ಸಿನಿಮಾದ ನಾಯಕಿ. ಇದೇ ಮೊದಲ ಬಾರಿಗೆ ಪುನೀತ್-ತ್ರಿಷಾ ನಟಿಸುತ್ತಿಲ್ಲ. ಈ ಹಿಂದೆ ಕೂಡ ಈ ಜೋಡಿ 'ಪವರ್' ಎಂಬ ಸಿನಿಮಾದಲ್ಲಿ ನಟಿಸಿದ್ದರು. 2019ರಲ್ಲಿಯೇ ಈ ಸಿನಿಮಾದ ಸ್ಕ್ರಿಪ್ಟ್ ಕೆಲಸ ನಡೆದಿತ್ತು. ಆದರೆ ಈಗ ಅನುಷ್ಠಾನ ಹಂತಕ್ಕೆ ಬಂದಿದೆ. 'ದ್ವಿತ್ವ'ಗೆ ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದಾರೆ. 'ಬಹದ್ದೂರ್' ಸಿನಿಮಾ ಖ್ಯಾತಿಯ ಚೇತನ್ ಜೊತೆಗೆ ಪುನೀತ್ ಅವರು 'ಜೇಮ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೆಲಸ ಕೂಡ ನಡೆಯುತ್ತಿದೆ. ಪರಭಾಷಾ ನಟರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.