ಕೊರೊನಾ ವೈರಸ್ ಸೋಂಕು: ಹೋಮ್ ಐಸೊಲೇಷನ್‌ನಲ್ಲಿ ನಟ ರೋಹಿತ್

ಆರ್‌ಜೆ, ನಟ, ಫಿಲ್ಮ್ ಮೇಕರ್ ರೋಹಿತ್‌ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಪರಿಣಾಮ, ಮನೆಯಲ್ಲೇ ಅವರು ಐಸೊಲೇಟ್ ಆಗಿದ್ದಾರೆ.

ಕೊರೊನಾ ವೈರಸ್ ಸೋಂಕು: ಹೋಮ್ ಐಸೊಲೇಷನ್‌ನಲ್ಲಿ ನಟ ರೋಹಿತ್
Linkup
ಭಾರತದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಂತೂ ಮಹಾಮಾರಿ ಕೊರೊನಾ ಅಕ್ಷರಶಃ ಆರ್ಭಟಿಸುತ್ತಿದೆ. ಕೋವಿಡ್-19 ಎರಡನೇ ಅಲೆ ಎದ್ದಿದ್ದು, ಪಾಸಿಟಿವ್ ಕೇಸ್‌ಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ನಟ ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿ ಚಂದ್ರನ್, ನಟಿ ಶ್ವೇತಾ ಚೆಂಗಪ್ಪ, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಮುಂತಾದ ತಾರೆಯರಿಗೆ ಈ ಬಾರಿ ಕೊರೊನಾ ವೈರಸ್ ಸೋಂಕು ತಗುಲಿದೆ. ಆರ್‌ಜೆ ಹಾಗೂ ನಟ ಕೂಡ ಈಗ ಇದೇ ಸಾಲಿಗೆ ಸೇರಿದ್ದಾರೆ. ಹೌದು, ಆರ್‌ಜೆ, ನಟ, ಫಿಲ್ಮ್ ಮೇಕರ್ ರೋಹಿತ್‌ಗೆ ದೃಢಪಟ್ಟಿದೆ. ಪರಿಣಾಮ, ಮನೆಯಲ್ಲೇ ಅವರು ಐಸೊಲೇಟ್ ಆಗಿದ್ದಾರೆ. ತಮಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಬಗ್ಗೆ ಸ್ವತಃ ರೋಹಿತ್ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ''ಡಾರ್ಲಿಂಗ್ಸ್... ನನಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಕಳೆದ 15 ದಿನಗಳಲ್ಲಿ ನನ್ನ ಜೊತೆಗೆ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಉಳಿದವರು ನನಗೆ ಪ್ರೀತಿ ಕೊಡಿ'' ಎಂದು ರೋಹಿತ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಅಂದ್ಹಾಗೆ, 'ಕರ್ವ', 'ಬಕಾಸುರ', 'ರುಸ್ತುಂ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದ ರೋಹಿತ್ ಇದೀಗ 'ರೌಡಿ ಫೆಲೊ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. 'ರೌಡಿ ಫೆಲೊ' ಚಿತ್ರದಲ್ಲಿ ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ ರೋಹಿತ್. ಈ ಚಿತ್ರದಲ್ಲಿ ವಿದ್ಯಾ ಪ್ರದೀಪ್, ಊರ್ವಶಿ, ನೆನಪಿರಲಿ ಪ್ರೇಮ್, ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾಬಳಗವಿದೆ.