'ಯುವರತ್ನ' ನಟಿ ಸಾಯೇಷಾ ಪತಿ ಆರ್ಯ ಮೇಲೆ ಮಹಿಳೆಗೆ ಮದುವೆಯಾಗುವುದಾಗಿ 70 ಲಕ್ಷ ರೂ ವಂಚಿಸಿದ ಆರೋಪ

ತಮಿಳು ನಟ ಆರ್ಯ ಅವರು ಜರ್ಮನ್ ಮೂಲದ ಮಹಿಳೆಯೊಬ್ಬರಿಗೆ ಮದುವೆ ಆಗೋದಾಗಿ ಹೇಳಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಆ ಜರ್ಮನ್ ಮಹಿಳೆ ಆರ್ಯ ಮೇಲೆ ದೂರು ದಾಖಲಿಸಿದ್ದಾರೆ. ಏನಿದು ಘಟನೆ?

'ಯುವರತ್ನ' ನಟಿ ಸಾಯೇಷಾ ಪತಿ ಆರ್ಯ ಮೇಲೆ ಮಹಿಳೆಗೆ ಮದುವೆಯಾಗುವುದಾಗಿ 70 ಲಕ್ಷ ರೂ ವಂಚಿಸಿದ ಆರೋಪ
Linkup
ಖ್ಯಾತ ತಮಿಳು ನಟ ಆರ್ಯರಿಗೆ ಇತ್ತೀಚೆಗಷ್ಟೇ ತಂದೆ ಸ್ಥಾನಕ್ಕೆ ಬಡ್ತಿ ಪಡೆದ ಖುಷಿ ಜೊತೆಗೆ 'ಸರಪಟ್ಟ ಪರಂಬರೈ' ಸಿನಿಮಾ ಯಶಸ್ಸು ಕಂಡ ಸಂಭ್ರಮದಲ್ಲಿದ್ದಾರೆ. ಈ ಎರಡು ಖುಷಿ ವಿಷಯದ ಮಧ್ಯೆ ನಟ ಮೇಲೆ ಮಹಿಳೆಗೆ ಮದುವೆಯಾಗುವುದಾಗಿ ಹೇಳಿ 70 ಲಕ್ಷ ರೂಪಾಯಿ ವಂಚಿಸಿದ ಆರೋಪ ಕೇಳಿ ಬಂದಿದೆ. ದೂರು ದಾಖಲು ಜರ್ಮನ್ ಮೂಲದ ವಿದ್ಜಾ ಎಂಬ ಮಹಿಳೆಗೆ ಆರ್ಯ ಮದುವೆಯಾಗುವುದಾಗಿ ಹೇಳಿ 70 ಲಕ್ಷ ರೂಪಾಯಿ ವಂಚಿಸಿದ್ದಾರಂತೆ. ಈ ಕುರಿತು ಆ ಮಹಿಳೆ ಆನ್‌ಲೈನ್‌ನಲ್ಲಿ ದೂರು ದಾಖಲಿಸಿದ್ದಾರೆ. ಆರ್ಯ ಜೊತೆಗಿನ ವಾಟ್ಸಪ್‌ ಚಾಟ್ ಸ್ಕ್ರೀನ್‌ಶಾಟ್‌ನ್ನು ಕೂಡ ದೂರು ನೀಡುವ ವೇಳೆ ವಿದ್ಜಾ ಒದಗಿಸಿದ್ದಾರೆ. ಹೀಗಾಗಿ ಆರ್ಯ ಸಿನಿಮಾ ರಿಲೀಸ್‌ಗೆ ತಡೆಯೊಡ್ಡಿ, ಬ್ಯಾನ್ ಮಾಡಿ ಎಂದು ಕೂಡ ವಿದ್ಜಾ ದೂರಿನಲ್ಲಿ ಹೇಳಿದ್ದಾರೆ. ಈ ದೂರನ್ನು ಆರ್ಯ ವಿರೋಧಿಸಿಲ್ಲ ಜರ್ಮನ್ ಮೂಲದ ವಕೀಲನ ಮೂಲಕ ವಿದ್ಜಾ ದೂರು ದಾಖಲಿಸಿದ್ದಾರೆ. ಈ ಕುರಿತು ವಿಚಾರಣೆ ಕೂಡ ನಡೆದಿದ್ದು, "ಪೊಲೀಸರಿಗೆ ಅಗತ್ಯವಾದ ಮಾಹಿತಿ ಸಂಗ್ರಹ ಮಾಡಿ, ಆಗಸ್ಟ್ 17ಕ್ಕೆ ಮತ್ತೊಮ್ಮೆ ವಿಚಾರಣೆ ನಡೆಯಲಿದೆ ಎಂದಿದ್ದಾರೆ. ಈ ಕೇಸ್‌ನ್ನು ಆರ್ಯ ಆಗಲೀ, ಅವರ ತಂಡ ಆಗಲೀ ವಿರೋಧ ಮಾಡದಿರುವುದು ಆಶ್ಚರ್ಯ ಮೂಡಿಸುತ್ತಿದೆ. ಆರ್ಯ ಕೂಡ ಈ ಕೇಸ್ ಕುರಿತಾದ ಕೆಲ ಟ್ವಿಟ್ಟರ್‌ ಪೋಸ್ಟ್‌ಗಳನ್ನು ಲೈಕ್ ಮಾಡಿರೋದು ಅಭಿಮಾನಿಗಳಿಗೆ ಶಾಕ್ ಉಂಟು ಮಾಡಿದೆ. ತಂದೆಯಾಗಿರುವ ಆರ್ಯ ಇತ್ತೀಚೆಗಷ್ಟೇ ಆರ್ಯ ಹಾಗೂ ದಂಪತಿ ಹೆಣ್ಣು ಮಗುವಿನ ಪಾಲಕರಾಗಿ ಬಡ್ತಿ ಪಡೆದಿದ್ದರು. ಈ ವಿಷಯವನ್ನು ನಟ ವಿಶಾಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 'ಟೆಡ್ಡಿ', 'ಗಜನಿಕಾಂತ್', 'ಕಾಪ್ಪಾನ್' ಸಿನಿಮಾಗಳಲ್ಲಿ ಸಾಯೇಷಾ ಹಾಗೂ ಆರ್ಯ ಒಟ್ಟಾಗಿ ನಟಿಸಿದ್ದು, ಅವರಿಬ್ಬರ ಮಧ್ಯೆ ಪ್ರೀತಿಯ ಮೊಳಕೆಯೊಡೆದಿತ್ತು. ಆ ನಂತರದಲ್ಲಿ ಕುಟುಂಬದ ಒಪ್ಪಿಗೆ ಪಡೆದು ವಯಸ್ಸಿನಲ್ಲಿ 12 ವರ್ಷದ ಅಂತರ ಇದ್ದಾಗ್ಯೂ ಕೂಡ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.