'ಸಲಾರ್' ಚಿತ್ರದಲ್ಲಿನ ವಿಲನ್‌ಗಾಗಿ ತಲೆಯೆತ್ತುತ್ತಿದೆ ಬೃಹತ್ ಮನೆಯ ಸೆಟ್! ಅಸಲಿಗೆ ಖಳನಾಯಕ ಯಾರು?

'ಸಲಾರ್' ಚಿತ್ರದಲ್ಲಿ ವಿಲನ್ ಯಾರು ಎಂಬ ಗುಟ್ಟನ್ನು ಇನ್ನೂ ಪ್ರಶಾಂತ್ ನೀಲ್ ಬಿಟ್ಟುಕೊಟ್ಟಿಲ್ಲ. ಆದರೆ, 'ಸಲಾರ್' ಚಿತ್ರದಲ್ಲಿನ ವಿಲನ್‌ಗಾಗಿ ಬೃಹತ್ ಮನೆಯ ಸೆಟ್ ತಲೆಯೆತ್ತುತ್ತಿದೆ.

'ಸಲಾರ್' ಚಿತ್ರದಲ್ಲಿನ ವಿಲನ್‌ಗಾಗಿ ತಲೆಯೆತ್ತುತ್ತಿದೆ ಬೃಹತ್ ಮನೆಯ ಸೆಟ್! ಅಸಲಿಗೆ ಖಳನಾಯಕ ಯಾರು?
Linkup
'ಸಾಹೋ' ಮತ್ತು 'ರಾಧೆ ಶ್ಯಾಮ್' ಚಿತ್ರಗಳ ಬಳಿಕ ಟಾಲಿವುಡ್‌ನ ಯಂಗ್ ರೆಬೆಲ್ ಸ್ಟಾರ್ ಅಭಿನಯಿಸುತ್ತಿರುವ ಚಿತ್ರ ''. ಅತ್ತ 'ಕೆಜಿಎಫ್' ಸರಣಿ ಬಳಿಕ ನಿರ್ದೇಶಕ ಕೈಗೆತ್ತಿಕೊಂಡಿರುವ ಸಿನಿಮಾ 'ಸಲಾರ್'. ಹೀಗಾಗಿ 'ಸಲಾರ್' ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. 'ಸಲಾರ್' ಸಿನಿಮಾದಲ್ಲಿ ಪ್ರಭಾಸ್, ಶ್ರುತಿ ಹಾಸನ್ ಅಭಿನಯಿಸುತ್ತಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ 'ಸಲಾರ್' ಚಿತ್ರದಲ್ಲಿ ಖಳನಾಯಕನಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಪ್ರಭಾಸ್ ಮುಂದೆ ತೊಡೆತಟ್ಟಿ ನಿಲ್ಲುವವರು ಯಾರು ಎಂಬ ಗುಟ್ಟನ್ನು ಇನ್ನೂ ಪ್ರಶಾಂತ್ ನೀಲ್ ಬಿಟ್ಟುಕೊಟ್ಟಿಲ್ಲ. ಆದರೆ, 'ಸಲಾರ್' ಚಿತ್ರದಲ್ಲಿನ ವಿಲನ್‌ಗಾಗಿ ಬೃಹತ್ ಸೆಟ್ ತಲೆಯೆತ್ತುತ್ತಿದೆ. ಹೌದು, 'ಸಲಾರ್' ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಅದರದ್ದೇ ಆದ ಖದರ್ ಇದೆ. ಹೀಗಾಗಿ, ವಿಲನ್ ಪಾತ್ರಕ್ಕಾಗಿ ವಿಶೇಷವಾಗಿ ಬೃಹತ್ ಮನೆಯ ಸೆಟ್‌ಅನ್ನು ನಿರ್ಮಿಸಲಾಗುತ್ತಿದೆ. ಇದೇ ಸೆಟ್‌ನಲ್ಲೇ ವಿಲನ್ ಭಾಗದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದೆ. ಈ ಬೃಹತ್ ಮನೆಯ ಸೆಟ್‌ಗಾಗಿ ಭಾರೀ ಹಣವನ್ನು ಖರ್ಚು ಮಾಡಲಾಗುತ್ತಿದೆ. ವಿಲನ್‌ಗಾಗಿ ಇಷ್ಟೆಲ್ಲಾ ಮಾಡುತ್ತಿರುವುದರಿಂದ 'ಸಲಾರ್' ಚಿತ್ರದಲ್ಲಿ ವಿಲನ್ ಆಗಿ ಯಾರು ಅಭಿನಯಿಸುತ್ತಾರೆ ಎಂಬ ಕುತೂಹಲ ಸದ್ಯ ಸಿನಿ ಪ್ರಿಯರಲ್ಲಿ ಕಾಡುತ್ತಿದೆ. ಅಂದ್ಹಾಗೆ, 'ಸಲಾರ್' ಚಿತ್ರದಲ್ಲಿ ಪ್ರಭಾಸ್ ತಂದೆ ಹಾಗೂ ಮಗನಾಗಿ ಡಬಲ್ ಆಕ್ಟಿಂಗ್ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ. 'ಸಲಾರ್' ಸಿನಿಮಾ ಭೂಗತಲೋಕದ ದ್ವೇಷದ ಕಥೆ ಹೊಂದಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ರವಿ ಬಸ್ರೂರ್ ಸಂಗೀತ, ಭುವನ್ ಗೌಡ ಛಾಯಾಗ್ರಹಣವಿರುವ 'ಸಲಾರ್' ಸಿನಿಮಾ ಸದ್ಯ ಶೂಟಿಂಗ್ ಹಂತದಲ್ಲಿದೆ.