ಕೊನೆಯುಸಿರೆಳೆಯುವ ಮುನ್ನ 'ಸುಸ್ತಾಗುತ್ತಿದೆ.. ಮಾತಾಡೋಕೆ ಆಗ್ತಿಲ್ಲ' ಎಂದು ಫೋನ್‌ನಲ್ಲಿ ತಿಳಿಸಿದ್ದ ರಾಮು

ಕೊನೆಯುಸಿರೆಳೆಯುವ ಮುನ್ನ ಆಪ್ತ ಗೋವಿಂದ ರಾಜು ಜೊತೆಗೆ ಫೋನ್‌ನಲ್ಲಿ ತೀವ್ರ ಸುಸ್ತಿನಿಂದ ನಿರ್ಮಾಪಕ ರಾಮು ಮಾತನಾಡಿದ್ದರು.

ಕೊನೆಯುಸಿರೆಳೆಯುವ ಮುನ್ನ 'ಸುಸ್ತಾಗುತ್ತಿದೆ.. ಮಾತಾಡೋಕೆ ಆಗ್ತಿಲ್ಲ' ಎಂದು ಫೋನ್‌ನಲ್ಲಿ ತಿಳಿಸಿದ್ದ ರಾಮು
Linkup
ಮಾರಣಾಂತಿಕ ಕೊರೊನಾ ವೈರಸ್‌ಗೆ ಕನ್ನಡ ಚಿತ್ರರಂಗದ 'ಕೋಟಿ' ನಿರ್ಮಾಪಕ ಬಲಿಯಾದರು. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ, ತೀವ್ರ ಅನಾರೋಗ್ಯಕ್ಕೀಡಾದ ಉಸಿರಾಟದ ಸಮಸ್ಯೆಯಿಂದ ಏಪ್ರಿಲ್ 26 ರಂದು ಸಂಜೆ ವಿಧಿವಶರಾದರು. ಫೋನ್‌ನಲ್ಲಿ ಮಾತನಾಡಿದ್ದ ರಾಮು ಕೋವಿಡ್-19 ದೃಢಪಟ್ಟ ಬಳಿಕ ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ನಿರ್ಮಾಪಕ ರಾಮು ದಾಖಲಾಗಿದ್ದರು. ಈ ವಿಷಯ ತಿಳಿದ ಆಪ್ತ ಗೋವಿಂದ ರಾಜು, ರಾಮುಗೆ ಫೋನ್ ಮಾಡಿದ್ದರು. ಈ ವೇಳೆ ''ತುಂಬಾ ಸುಸ್ತಾಗುತ್ತಿದೆ.. ಮಾತಾಡೋಕೆ ಆಗ್ತಿಲ್ಲ.. ಇಲ್ಲಿ ಯಾರನ್ನೂ ಒಳಗೆ ಬಿಡ್ತಿಲ್ಲ'' ಎಂದು ಗೋವಿಂದ ರಾಜುಗೆ ರಾಮು ತಿಳಿಸಿದ್ದರು. ಕೊನೆಯುಸಿರೆಳೆಯುವ ಮುನ್ನ ಆಪ್ತ ಗೋವಿಂದ ರಾಜು ಜೊತೆಗೆ ಫೋನ್‌ನಲ್ಲಿ ತೀವ್ರ ಸುಸ್ತಿನಿಂದಲೇ ರಾಮು ಮಾತನಾಡಿದ್ದರು. ಈ ವಿಚಾರವನ್ನು ಗೋವಿಂದ ರಾಜು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾಮು ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಿರ್ಮಾಪಕ ರಾಮು ಅವರ ಹುಟ್ಟೂರಾದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೊಡಿಗೆಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಿನ್ನೆ (ಏಪ್ರಿಲ್ 27) ಮಧ್ಯಾಹ್ನ ನಡೆಯಿತು. ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ರಾಮು ಅವರ ಪಾರ್ಥೀವ ಶರೀರವನ್ನು ಹುಟ್ಟೂರಿಗೆ ತರಲಾಯಿತು. ಸರ್ಕಾರದ ಅನುಮತಿ ಪಡೆದು, ಕೋವಿಡ್ ನಿಯಮಾವಳಿ ಅನುಸಾರ ಸ್ವಗ್ರಾಮದಲ್ಲೇ ರಾಮು ಅಂತ್ಯಕ್ರಿಯೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಪತ್ನಿ ಮಾಲಾಶ್ರೀ ಸೇರಿದಂತೆ ಕುಟುಂಬದ ಕೆಲವೇ ಕೆಲವು ಮಂದಿ ಮಾತ್ರ ಭಾಗಿಯಾಗಿದ್ದರು.