2020-21ರಲ್ಲಿ ಕೇರಳಕ್ಕೆ ನಬಾರ್ಡ್‌ನಿಂದ ಭರ್ಜರಿ 13,425 ಕೋಟಿ ಆರ್ಥಿಕ ಸಹಾಯಧನ

ನಬಾರ್ಡ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಕೇರಳ ರಾಜ್ಯಕ್ಕೆ ಅತ್ಯಧಿಕ ಆರ್ಥಿಕ ಸಹಾಯಧನವನ್ನು 2020-21ರಲ್ಲಿ ನೀಡಲಾಗಿದ್ದು, ಕೇರಳಕ್ಕೆ ಪುನರ್‌ ಸಾಲ ಹಾಗೂ ನೇರವು ಸಾಲದ ರೂಪದಲ್ಲಿ 13,425 ಕೋಟಿ ರೂ. ವಿತರಿಸಿದೆ.

2020-21ರಲ್ಲಿ ಕೇರಳಕ್ಕೆ ನಬಾರ್ಡ್‌ನಿಂದ ಭರ್ಜರಿ 13,425 ಕೋಟಿ ಆರ್ಥಿಕ ಸಹಾಯಧನ
Linkup
ಕಾಸರಗೋಡು: ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಜ್ಯಕ್ಕೆ ಅತ್ಯಧಿಕ 2020-21ರಲ್ಲಿ ಲಭಿಸಿದೆ. ಕೇರಳಕ್ಕೆ ಪುನರ್‌ ಸಾಲ ಹಾಗೂ ನೇರವು ಸಾಲ ರೂಪದಲ್ಲಿ ನಬಾರ್ಡ್‌ 13,425 ಕೋಟಿ ರೂ. ವಿತರಿಸಿದೆ. 2019-20ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು ಶೇ.26ರಷ್ಟು ಅಧಿಕವಾಗಿದೆ. 13,425 ಕೋಟಿ ರೂ. ನಲ್ಲಿ12,847 ಕೋಟಿ ರೂ. ಪುನರ್‌ ಸಾಲ ರೂಪದಲ್ಲಿ, ಕೇರಳ ರಾಜ್ಯ ಸಹಕಾರಿ ಬ್ಯಾಂಕ್‌, ಕೇರಳ ಗ್ರಾಮೀಣ ಬ್ಯಾಂಕ್‌, ಕೇರಳ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಸಹಿತ ಸಂಸ್ಥೆಗಳಿಗೆ ಆದ್ಯತೆ ವಲಯದ ಸಾಲಗಳಿಗಾಗಿ ನೀಡಲಾಗಿದೆ. ಇದರಲ್ಲಿ9,252 ಕೋಟಿ ರೂ. ಕೃಷಿ ವಲಯದ ಬೆಳೆ ಸಾಲ, ಎಂಎಸ್‌ಎಂಇ ವಲಯದಲ್ಲಿ ಚಟುವಟಿಕೆಗಳಿಗೆ ಮೂಲ ಬಂಡವಾಳ ಇತ್ಯಾದಿ ಅಗತ್ಯಗಳಿಗೆ ಕಿರು ಅವಧಿಯ ಸಾಲರೂಪದಲ್ಲಿ ನೀಡಲಾಗಿದೆ. 3,595 ಕೋಟಿ ರೂ. ದೀರ್ಘ ಅವಧಿಯ ಸಾಲದ ರೂಪದಲ್ಲಿ ಕೃಷಿ, ಕೃಷಿಯೇತರ ತತ್ಸಂಬಂಧಿ ವಲಯಕ್ಕೆ, ಎಂಎಸ್‌ಎಂಇ ವಲಯಕ್ಕೆ ಮಂಜೂರು ಮಾಡಲಾಗಿದೆ. ಆರ್ಥಿಕ ಸಹಾಯ ರೂಪದಲ್ಲಿ ಬ್ಯಾಂಕ್‌ಗಳಿಗೆ, ಸರಕಾರೇತರ ಸ್ವಯಂಸೇವಾ ಸಂಘಟನೆಗಳಿಗೆ, ರಾಜ್ಯ ಕುಟುಂಬಶ್ರೀ ಮಿಷನ್‌ ಮುಖಾಂತರ ನಬಾರ್ಡ್‌ 30 ಕೋಟಿ ರೂ.ಗಳನ್ನು ವಿವಿಧ ವಲಯಗಳ ಅಭಿವೃದ್ಧಿ ಚಟುವಟಿಕೆಗಳಿಗೆ ವಿತರಿಸಿದೆ. ಕಾಸರಗೋಡು, ಪಾಲಕ್ಕಾಡ್‌, ವಯನಾಡು ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳಿಗಾಗಿ 12 ಕೋಟಿ ರೂ. ನೀಡಲಾಗಿದೆ. ಫೈನಾನ್ಶಿಯಲ್‌ ಇನ್‌ಕ್ಯೂಷನ್‌ ಫಂಡ್‌ನಿಂದ ಕೇರಳ ಸಹಕಾರಿ ಬ್ಯಾಂಕ್‌, ಕೇರಳ ಗ್ರಾಮೀಣ ಬ್ಯಾಂಕ್‌ ಇತ್ಯಾದಿಗಳಿಗೆ ಮೊಬೈಲ್‌ ವ್ಯಾನ್‌ಗಳಿಗೆ, ಮೈಕ್ರೋ ಎಟಿಎಂಗಳಿಗೆ ನೀಡಲಾದ 4 ಕೋಟಿ ರೂ. ಆರ್ಥಿಕ ಸಹಾಯ ಕೂಡ ಇದರಲ್ಲಿ ಒಳಗೊಂಡಿದೆ. ಜತೆಗೆ ಪರಿಶಿಷ್ಟ ಪಂಗಡ ಅಭಿವೃದ್ಧಿ ಯೋಜನೆಗಳಿಗೆ, ಮೈಕ್ರೋ ಕ್ರೆಡಿಟ್‌ ವಲಯದ ಅಭಿವೃದ್ಧಿ ಯೋಜನೆಗಳಿಗಾಗಿ ತಲಾ 3 ಕೋಟಿ ರೂ. ಸಹಾಯ ಮಂಜೂರು ಮಾಡಲಾಗಿದೆ. ಕೈಮಗ್ಗ ವಲಯದ ಬೆಂಬಲಕ್ಕಾಗಿ 2 ಎಕ್ಸಿಬಿಷನ್‌ಗಳು, ಕೃಷಿಕ ಉತ್ಪನ್ನಗಳ ಅಭಿವೃದ್ಧಿಗೆ, ಸ್ವಾವಲಂಬಿತನಕ್ಕೆ ನೀಡಲಾಗುವ ಧನ ಸಹಾಯ, ಸಹಕಾರಿ ವಲಯದ ಸಿಬ್ಬಂದಿಗೆ ತರಬೇತಿ ನೀಡಲು ಕೋ-ಆಪರೇಟಿವ್‌ ಟ್ರೈನಿಂಗ್‌ ಸಂಸ್ಥೆಗಳಿಗೆ ನಿಧಿ ಸಹಾಯ ಇತ್ಯಾದಿ ನಬಾರ್ಡ್‌ ಚಟುವಟಿಕೆಗಳಾಗಿವೆ.