15 ದಿನಗಳ ನಂತರ ಮತ್ತೆ ಇಂಧನ ಬೆಲೆ ಇಳಿಕೆ: ಪೆಟ್ರೋಲ್, ಡೀಸಲ್ ಹೊಸ ದರ ಎಷ್ಟು?

15 ದಿನಗಳ ನಂತರ ಮತ್ತೆ ಇಂಧನಗಳ ಬೆಲೆಯಲ್ಲಿ ಇಳಿಕೆ ಕಂಡಿದೆ. ಪೆಟ್ರೋಲ್ ಬೆಲೆಯದಲ್ಲಿ 16 ಪೈಸೆ ಇಳಿಕೆ ಕಂಡಿದ್ದರೆ, ಡೀಸೆಲ್‌ ಬೆಲೆಯಲ್ಲಿ 14 ಪೈಸೆಯಷ್ಟು ಇಳಿಕೆಯಾಗಿದೆ. ಬೆಂಗಳೂರಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 93.43 ರೂ.ಇದೆ.

15 ದಿನಗಳ ನಂತರ ಮತ್ತೆ ಇಂಧನ ಬೆಲೆ ಇಳಿಕೆ: ಪೆಟ್ರೋಲ್, ಡೀಸಲ್ ಹೊಸ ದರ ಎಷ್ಟು?
Linkup
ಹೊಸದಿಲ್ಲಿ: 15 ದಿನಗಳ ನಂತರ ಮತ್ತೆ ಇಂಧನಗಳ ಬೆಲೆಯಲ್ಲಿ ಇಳಿಕೆ ಕಂಡಿದೆ. ಪೆಟ್ರೋಲ್ ಬೆಲೆಯದಲ್ಲಿ 16 ಪೈಸೆ ಇಳಿಕೆ ಕಂಡಿದ್ದರೆ, ಡೀಸೆಲ್‌ ಬೆಲೆಯಲ್ಲಿ 14 ಪೈಸೆಯಷ್ಟು ಇಳಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ತೈಲೋತ್ಪನ್ನಗಳ ಬೆಲೆ ಇಳಿಕೆಯಾಗಿರುವ ಪರಿಣಾಮ ಭಾರತದಲ್ಲೂ ಇಂಧನ ಬೆಲೆ ಇಳಿಕೆಗೆ ಕಾರಣವಾಗಿದೆ. ದೇಶದ ತೈಲೋತ್ಪನ್ನ ಕಂಪನಿಗಳು ಪೆಟ್ರೋಲ್ ಮತ್ತು ದರ ಕಡಿತ ಮಾಡಿವೆ. ಪರಿಷ್ಕೃತ ದರಗಳ ಅನ್ವಯ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.40 ರೂ. ಗೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 80.73 ರೂಪಾಯಿಗೆ ಇಳಿಕೆಯಾಗಿದೆ. ಇನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 65 ಡಾಲರ್‌ಗಿಂತಲೂ ಕಡಿಮೆಗೆ ಕುಸಿದಿದೆ. ಕಳೆದ ಹದಿನೈದು ದಿನಗಳಿಂದ ಕಚ್ಚಾ ತೈಲ ಬೇಡಿಕೆ ಗಣನೀಯವಾಗಿ ಕುಸಿದಿದೆ. ಇದು ತೈಲ ದರ ಬದಲಾವಣೆಗೆ ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕೆ ತೈಲ ಕಂಪನಿಗಳು ದರ ಪರಿಷ್ಕರಣೆಗೆ ಮುಂದಾಗಿವೆ. 15 ದಿನಗಳ ಹಿಂದೆ ಅಂದರೆ, ಮಾರ್ಚ್ 30 ರಂದು ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಯಲ್ಲಿ 22 ಪೈಸೆ ಇಳಿಕೆಯಾಗಿತ್ತು. ಡೀಸೆಲ್ ಬೆಲೆಯಲ್ಲಿ 23 ಪೈಸೆ ಇಳಿಕೆಯಾಗಿತ್ತು. ಆದರೂ, ಮುಂಬೈ ಮತ್ತು ದೇಶದ ಹಲವು ನಗರಗಳಲ್ಲಿ ಪೆಟ್ರೋಲ್‌ ಬೆಲೆ ₹100ರ ಗಡಿಯಲ್ಲೇ ಇತ್ತು. 2021ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶೇ.26 ರಷ್ಟು ಹೆಚ್ಚಾಗಿದ್ದು, ಪೆಟ್ರೋಲ್ ದರ 7.46 ರೂ ಮತ್ತು ಡೀಸೆಲ್ ದರದಲ್ಲಿ 7.60 ರೂ. ಏರಿಕೆಯಾಗಿದೆ. ಪೆಟ್ರೋಲ್‌ ದರ ಎಲ್ಲಿ ಎಷ್ಟು ಬೆಂಗಳೂರು: 93.43 ರೂ. ದಿಲ್ಲಿ: 90.40 ರೂ. ಮುಂಬಯಿ: 96.83 ಕೋಲ್ಕೊತಾ: 90.62 ಚೆನ್ನೈ: 92.43