ಅಧಿಕಾರಕ್ಕೆ ಬರುತ್ತಿದ್ದಂತೆಯೇ ಟ್ವಿಟ್ಟರ್‌ಗೆ ಖಡಕ್ ಎಚ್ಚರಿಕೆ ರವಾನಿಸಿದ ಹೊಸ ಐಟಿ ಸಚಿವ

ಸ್ಥಳೀಯ ದೂರು ಸಂಪರ್ಕಾಧಿಕಾರಿಯನ್ನು ನೇಮಿಸಲು ಮುಂದಾಗದೆ ನಿಯಮಗಳನ್ನು ಪಾಲಿಸದ ಟ್ವಿಟ್ಟರ್‌ಗೆ ಹೊಸ ಐಟಿ ಸಚಿವ ಅಶ್ವಿನಿ ವೈಷ್ಣವ್ ಎಚ್ಚರಿಕೆ ನೀಡಿದ್ದಾರೆ. ಟ್ವಿಟ್ಟರ್ ನೆಲದ ಕಾನೂನನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ.

ಅಧಿಕಾರಕ್ಕೆ ಬರುತ್ತಿದ್ದಂತೆಯೇ ಟ್ವಿಟ್ಟರ್‌ಗೆ ಖಡಕ್ ಎಚ್ಚರಿಕೆ ರವಾನಿಸಿದ ಹೊಸ ಐಟಿ ಸಚಿವ
Linkup
ಹೊಸದಿಲ್ಲಿ: ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅವರ ಉತ್ತರಾಧಿಕಾರಿ , ತಮ್ಮ ಸಚಿವಾಲಯದ ಹೊಣೆಗಾರಿಕೆ ವಹಿಸಿಕೊಳ್ಳುತ್ತಿದ್ದಂತೆಯೇ ಸರಕಾರದೊಂದಿಗೆ ತಕರಾರು ಮಾಡುತ್ತಿರುವ ಟ್ವಿಟ್ಟರ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನೂತನ ಐಟಿ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿರುವ ಅವರು, ಈ ನೆಲದ ಕಾನೂನು ಪರಮೋಚ್ಚ ಎಂದು ಟ್ವಿಟ್ಟರ್‌ಗೆ ಹೇಳಿದ್ದಾರೆ. ವಿಚಾರದಲ್ಲಿ ಹಾಗೂ ಕೇಂದ್ರ ಸರಕಾರದ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. 50 ಲಕ್ಷಕ್ಕಿಂತ ಅಧಿಕ ಬಳಕೆದಾರರಿರುವ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಭಾರತೀಯ ಅಧಿಕಾರಿಯೊಬ್ಬರನ್ನು ಬಳಕೆದಾರರ ದೂರು-ಅಹವಾಲುಗಳನ್ನು ಸ್ವೀಕರಿಸಲು ನೇಮಕ ಮಾಡಬೇಕೆಂದು ಈ ನಿಯಮ ಹೇಳುತ್ತದೆ. ಆದರೆ ಐಟಿ ನಿಮಯಗಳನ್ನು ಸರಿಯಾಗಿ ಪಾಲಿಸದ ಕಾರಣ ಟ್ವಿಟ್ಟರ್, ಮೂರನೇ ವ್ಯಕ್ತಿ ಹಂಚಿಕೊಳ್ಳುವ ಪೋಸ್ಟ್‌ಗಳಿಂದ ಕಾನೂನಾತ್ಮಕ ರಕ್ಷಣೆ ಪಡೆಯುವ ಸೌಲಭ್ಯವನ್ನು ಕಳೆದುಕೊಂಡಿದೆ ಎಂದು ಸರಕಾರ ಹೇಳಿತ್ತು. ಈ ನಡುವೆ ಟ್ವಿಟ್ಟರ್ ನೇಮಕ ಮಾಡಿದ್ದ ದೂರು ಸಂಪರ್ಕ ಅಧಿಕಾರಿ ರಾಜೀನಾಮೆ ನೀಡಿದ ಬಳಿಕ ಈವರೆಗೂ ಭಾರತ ಮೂಲದ ಯಾವುದೇ ವ್ಯಕ್ತಿಯನ್ನು ಅದು ಮತ್ತೆ ನೇಮಕ ಮಾಡಿಲ್ಲ. ಭಾರತದ ನಾಗರಿಕರಾಗಿರುವ ಸಂಪರ್ಕಾಧಿಕಾರಿಯ ನೇಮಕಕ್ಕೆ ಎಂಟು ವಾರಗಳ ಕಾಲಾವಕಾಶ ಬೇಕು ಎಂದು ಟ್ವಿಟ್ಟರ್, ಗುರುವಾರ ದಿಲ್ಲಿ ಹೈಕೋರ್ಟ್‌ಗೆ ಮನವಿ ಮಾಡಿದೆ. ನಿಯಮ ಪಾಲಿಸುವಲ್ಲಿ ವಿಫಲವಾದ ಟ್ವಿಟ್ಟರ್‌ಗೆ ಕೋರ್ಟ್ ಎಚ್ಚರಿಕೆ ನೀಡಿದ ಎರಡು ದಿನಗಳ ಬಳಿಕ, ಟ್ವಿಟ್ಟರ್‌ ಪ್ರತಿಕ್ರಿಯೆ ನೀಡಿದೆ. 'ನಿಮ್ಮ ಪ್ರಕ್ರಿಯೆಗೆ ಇನ್ನೂ ಎಷ್ಟು ದಿನ ಬೇಕಾಗಲಿದೆ? ನಮ್ಮ ದೇಶದಲ್ಲಿ ಎಷ್ಟು ಬೇಕಾದರೂ ಸಮಯ ತೆಗೆದುಕೊಳ್ಳಬಹುದು ಎಂದು ಟ್ವಿಟ್ಟರ್ ಭಾವಿಸಿದ್ದರೆ, ನಾನು ಅದಕ್ಕೆ ಅವಕಾಶ ನೀಡುವುದಿಲ್ಲ' ಎಂದು ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ರೇಖಾ ಪಲ್ಲಿ ಗುರುವಾರ ಹೇಳಿದರು. ಈ ಮೊದಲು ಟ್ವಿಟ್ಟರ್, ಧರ್ಮೇಂದ್ರ ಚಾತುರ್ ಅವರನ್ನು ಅಹವಾಲು ಸಂಪರ್ಕಾಧಿಕಾರಿಯನ್ನಾಗಿ ನೇಮಿಸಿತ್ತು. ಆದರೆ ಕೆಲವು ದಿನಗಳ ಹಿಂದೆ ಅವರು ರಾಜೀನಾಮೆ ಸಲ್ಲಿಸಿದ್ದರು. ಹಿಂದಿನ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಟ್ವಿಟ್ಟರ್ ಜತೆ ಹಲವು ಬಾರಿ ಕಾದಾಟ ನಡೆಸಿದ್ದರು. ಇಲ್ಲಿ ವ್ಯವಹಾರ ನಡೆಸಿ ಸಂಪಾದನೆ ಮಾಡುವವರು ಇಲ್ಲಿನ ಕಾನೂನಿಗೆ ಬದ್ಧರಾಗಿರಬೇಕು ಎಂದು ಕಿಡಿಕಾರಿದ್ದರು. ಅಲ್ಲದೆ, ತಮ್ಮ ಟ್ವಿಟ್ಟರ್ ಖಾತೆಗೆ ಲಾಗಿನ್ ಆಗಲೂ ಅಡ್ಡಿಯಾಗಿದ್ದನ್ನು ತಿಳಿಸಿದ್ದರು.