ನಿರುದ್ಯೋಗ ದರ ಶೇ.8ಕ್ಕೆ ಏರಿಕೆ: ಗ್ರಾಮೀಣ ಭಾರತದಲ್ಲಿ ಕೃಷಿಯೇತರ ಉದ್ಯೋಗ ನಷ್ಟ

ಭಾರತದ ನಿರುದ್ಯೋಗ ಪ್ರಮಾಣ ಏಪ್ರಿಲ್‌ನ ಮೊದಲ 2 ವಾರಗಳಲ್ಲಿ ಶೇ.8ಕ್ಕೆ ಏರಿಕೆಯಾಗಿದೆ. ಹೊಸ ನಿರ್ಬಂಧಗಳು ನಿರುದ್ಯೋಗ ಹೆಚ್ಚಿಸುತ್ತಿದೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ) ವರದಿ ತಿಳಿಸಿದೆ.

ನಿರುದ್ಯೋಗ ದರ ಶೇ.8ಕ್ಕೆ ಏರಿಕೆ: ಗ್ರಾಮೀಣ ಭಾರತದಲ್ಲಿ ಕೃಷಿಯೇತರ ಉದ್ಯೋಗ ನಷ್ಟ
Linkup
ಹೊಸದಿಲ್ಲಿ: ಭಾರತದ ನಿರುದ್ಯೋಗ ಪ್ರಮಾಣ ಏಪ್ರಿಲ್‌ನ ಮೊದಲ 2 ವಾರಗಳಲ್ಲಿ ಶೇ.8ಕ್ಕೆ ಏರಿಕೆಯಾಗಿದೆ. ಹೊಸ ನಿರ್ಬಂಧಗಳು ನಿರುದ್ಯೋಗ ಹೆಚ್ಚಿಸುತ್ತಿದೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ) ವರದಿ ತಿಳಿಸಿದೆ. ಭಾರತದಲ್ಲಿ 2021ರ ಮಾರ್ಚ್ ವೇಳೆಗೆ ಒಟ್ಟು ಉದ್ಯೋಗಿಗಳ ಸಂಖ್ಯೆ 39.8 ಕೋಟಿ ಆಗಿದೆ. 2019-20ರಲ್ಲಿ 40.3 ಕೋಟಿ ಉದ್ಯೋಗಸ್ಥರಿದ್ದರು. ಅಸಂಘಟಿತ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಉದ್ಯೋಗ ನಷ್ಟವಾಗಿದೆ. ಮತ್ತೆ ಲಾಕ್‌ ಡೌನ್‌ ಕಾರ್ಮಿಕರ ಪಾಲಿಗೆ ಕಷ್ಟಕರ ದಿನಗಳನ್ನು ತರಬಹುದು. ಹೀಗಿದ್ದರೂ ಸರಕಾರ ಭಾಗಶಃ ಲಾಕ್‌ ಡೌನ್‌ಗಳ ಆಯ್ಕೆ ಮಾಡುತ್ತಿದೆ ಎಂದು ಸಿಎಂಐಇ ತಿಳಿಸಿದೆ. 2020-21ರಲ್ಲಿ ವೇತನದಾರ ವಲಯದಲ್ಲಿ ಅತಿ ಹೆಚ್ಚು ಉದ್ಯೋಗ ನಷ್ಟವಾಗಿದೆ. ಶೇ.58ರಷ್ಟು ವೇತನದಾರರ ಸಂಖ್ಯೆ ನಗರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿನ ವೇತನದಾರರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಅವರು ಕೃಷಿಗೆ ಮರಳಿರುವ ಸಾಧ್ಯತೆ ಇದೆ ಎಂದಿದೆ. ಗ್ರಾಮೀಣ ಭಾರತದಲ್ಲಿ ಕೃಷಿಯೇತರ ಉದ್ಯೋಗಗಳನ್ನು ಕಳೆದುಕೊಂಡವರು ಮತ್ತೆ ಕೃಷಿಗೆ ಮರಳಿದ ಪರಿಣಾಮ 2021ರ ಮಾರ್ಚ್ ವೇಳೆಗೆ ಕೃಷಿ ಉದ್ಯೋಗಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಮಹಾರಾಷ್ಟ್ರ, ಗುಜರಾತ್‌ ಮತ್ತು ದಿಲ್ಲಿಯಿಂದ ತ್ತರಪ್ರದೇಶ, ಬಿಹಾರ ಮತ್ತು ಇತರ ಪೂರ್ವ ಭಾಗದ ರಾಷ್ಟ್ರಗಳಿಗೆ ಕಾರ್ಮಿಕರ ವಲಸೆ ಮತ್ತೆ ಆರಂಭವಾಗಿದೆ ಎಂದು ತಿಳಿಸಿದೆ.