18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ: ಭಾರತಕ್ಕೆ ಬೇಕಿದೆ ಬರೋಬ್ಬರಿ 188 ಕೋಟಿ ಡೋಸ್‌..!

ಒಂದು ವೇಳೆ ಭವಿಷ್ಯದಲ್ಲಿ ಸಿಂಗಲ್‌ ಡೋಸ್‌ ಲಸಿಕೆಗಳಿಗೆ ಅಗತ್ಯ ಮಾನ್ಯತೆ ಸಿಕ್ಕಲ್ಲಿ, 188 ಕೋಟಿಗಿಂತಲೂ ಕಡಿಮೆ ಡೋಸ್‌ಗಳು ಸಾಕಾಗಬಹುದು. ಸದ್ಯ ಅಗತ್ಯ ಪ್ರಮಾಣದ ಡೋಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಔಷಧ ತಯಾರಿಕಾ ಕಂಪನಿಗಳು ಹೊಂದಿವೆ.

18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ: ಭಾರತಕ್ಕೆ ಬೇಕಿದೆ ಬರೋಬ್ಬರಿ 188 ಕೋಟಿ ಡೋಸ್‌..!
Linkup
: ದೇಶದಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ನಿರೋಧಕ ನೀಡಲು ಸದ್ಯ 188 ಕೋಟಿ ಡೋಸ್‌ಗಳು ಬೇಕಿದೆ. ಸುಮಾರು 94 ಕೋಟಿ ಮಂದಿ ಈ ವಯೋಮಾನದವರಾಗಿದ್ದಾರೆ ಎಂದು ಕೇಂದ್ರ ಸರಕಾರವು ರಾಜ್ಯಸಭೆಗೆ ತಿಳಿಸಿದೆ. 'ಒಂದು ವೇಳೆ ಭವಿಷ್ಯದಲ್ಲಿ ಸಿಂಗಲ್‌ ಡೋಸ್‌ ಲಸಿಕೆಗಳಿಗೆ ಅಗತ್ಯ ಮಾನ್ಯತೆ ಸಿಕ್ಕಲ್ಲಿ, 188 ಕೋಟಿಗಿಂತಲೂ ಕಡಿಮೆ ಡೋಸ್‌ಗಳು ಸಾಕಾಗಬಹುದು. ಸದ್ಯ ಅಗತ್ಯ ಪ್ರಮಾಣದ ಡೋಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಔಷಧ ತಯಾರಿಕಾ ಕಂಪನಿಗಳು ಹೊಂದಿವೆ. ಡಿಸೆಂಬರ್‌ ಅಂತ್ಯಕ್ಕೆ 187 ಕೋಟಿ ಡೋಸ್‌ಗಳು ಲಭ್ಯವಾಗುವ ವಿಶ್ವಾಸವಿದೆ' ಎಂದು ಆರೋಗ್ಯ ಖಾತೆ ಸಹಾಯಕ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 'ಸರಕಾದ ಕೋವಿಡ್‌-19 ಲಸಿಕಾ ಕೇಂದ್ರಗಳಲ್ಲಿ (ಸಿವಿಸಿ) ಮಾತ್ರವೇ ಡೋಸ್‌ಗಳನ್ನು ಅರ್ಹರಿಗೆ ಉಚಿತವಾಗಿ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಗರಿಷ್ಠ ಸೇವಾ ಶುಲ್ಕವನ್ನು ಪ್ರತಿ ಡೋಸ್‌ಗೆ 150 ರೂ. ನಿಗದಿಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್‌ ಅನ್ನು ಡೋಸ್‌ಗೆ 600 ರೂ., ಕೊವ್ಯಾಕ್ಸಿನ್‌ ಅನ್ನು 1200 ರೂ., ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಸ್ಪುಟ್ನಿಕ್‌ ವಿ ಲಸಿಕೆಗೆ 948 ರೂ. ದರ ನಿಗದಿಪಡಿಸಲಾಗಿದೆ' ಎಂದೂ ಸಚಿವೆ ಮಾಹಿತಿ ನೀಡಿದ್ದಾರೆ. ಭಾರತಕ್ಕೆ 75 ಲಕ್ಷ ಡೋಸ್‌: ಜಾಗತಿಕ ಲಸಿಕೆ ಹಂಚಿಕೆ ವ್ಯವಸ್ಥೆ 'ಕೊವ್ಯಾಕ್ಸ್‌' ಮೂಲಕ ಭಾರತಕ್ಕೆ 75 ಲಕ್ಷ ಡೋಸ್‌ ಲಸಿಕೆ ಪೂರೈಸಲು ಸಿದ್ಧ ಎಂದು ಅಮೆರಿಕ ಔಷಧ ತಯಾರಿಕ ಕಂಪನಿ ಮಾಡೆರ್ನಾ ತಿಳಿಸಿದೆ. ಆದರೆ, ದೇಶದಲ್ಲಿ ಮಾಡೆರ್ನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿರುವ ಭಾರತವು ಲಸಿಕೆಗೆ ನಷ್ಟ ಪರಿಹಾರ (ಇಂಡೆಮ್ನಿಟಿ) ಕಾಯಿದೆಯಿಂದ ವಿನಾಯಿತಿ ನೀಡುವ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಲಸಿಕೆ ಯಾವಾಗ ಲಭ್ಯವಾಗಲಿದೆ ಎನ್ನುವುದು ಖಚಿತಪಟ್ಟಿಲ್ಲ.