ಸಂಸತ್‌ ಭವನದಲ್ಲಿ ವಾಜಪೇಯಿ, ಅಡ್ವಾಣಿ ಬಳಸುತ್ತಿದ್ದ ಕೊಠಡಿ ಈಗ ನಡ್ಡಾಗೆ

ಸಂಸತ್ ಭವನದ ನೆಲ ಮಹಡಿಯಲ್ಲಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಬಿಜೆಪಿ ಹಿರಿಯ ನಾಯಕರ ಎಲ್‌ಕೆ ಅಡ್ವಾಣಿ ಅವರು ಬಳಸುತ್ತಿದ್ದ ಕೊಠಡಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ನೀಡಲಾಗಿದೆ.

ಸಂಸತ್‌ ಭವನದಲ್ಲಿ ವಾಜಪೇಯಿ, ಅಡ್ವಾಣಿ ಬಳಸುತ್ತಿದ್ದ ಕೊಠಡಿ ಈಗ ನಡ್ಡಾಗೆ
Linkup
ಹೊಸದಿಲ್ಲಿ: ಸಂಸತ್‌ ಭವನದ ನೆಲ ಮಹಡಿಯಲ್ಲಿರುವ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ಹಾಗೂ ಹಿರಿಯ ನಾಯಕ ಅವರು ಬಳಸಿದ್ದ 4ನೇ ಸಂಖ್ಯೆಯ ಕೊಠಡಿಯನ್ನು ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅವರಿಗೆ ನೀಡಲಾಗಿದೆ. ಹಾಗಾಗಿ, ಮಂಗಳವಾರ ವಾಜಪೇಯಿ ಹಾಗೂ ಅಡ್ವಾಣಿಯವರ ನಾಮಫಲಕ ತೆರವುಗೊಳಿಸಲಾಗಿದೆ. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಅಧ್ಯಕ್ಷರಾಗಿದ್ದ ವಾಜಪೇಯಿ ಅವರಿಗೆ ಈ ಕೊಠಡಿಯನ್ನು 2004ರಲ್ಲಿ ನೀಡಲಾಗಿತ್ತು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ವಾಜಪೇಯಿ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು. ನಂತರ ಅವರು ಈ ಕೊಠಡಿ ಬಳಸುತ್ತಿರಲಿಲ್ಲ. ನಂತರ ಎನ್‌ಡಿಎ ಅಧ್ಯಕ್ಷರಾಗಿದ್ದ ಎಲ್‌ಕೆ ಅಡ್ವಾಣಿ ಅವರು ಇದೇ ಕೊಠಡಿಯನ್ನು ಬಳಸುತ್ತಿದ್ದರು. ಆದರೂ ಅವರು ವಾಜಪೇಯಿ ಹೆಸರಿನ ನಾಮಫಲಕ ತೆರವುಗೊಳಿಸದೇ, ತಮ್ಮ ನಾಮಫಲಕವನ್ನೂ ಅಳವಡಿಸಿಕೊಂಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿಅಡ್ವಾಣಿ ಸ್ಪರ್ಧಿಸದ ಕಾರಣ ಮೂರು ವರ್ಷದಿಂದ ಇದು ಖಾಲಿಯೇ ಇತ್ತು. ಈ ಕೊಠಡಿಯನ್ನು ಈಗ ರಾಜ್ಯಸಭೆ ಸದಸ್ಯರೂ ಆಗಿರುವ ನಡ್ಡಾ ಅವರಿಗೆ ನೀಡಲಾಗಿದೆ. 2009ರಲ್ಲಿ ತಮ್ಮ ನೇತೃತ್ವದ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಅಡ್ವಾಣಿ ಅವರು ಲೋಕಸಭೆಯ ವಿರೋಧಪಕ್ಷದ ನಾಯಕನ ಸ್ಥಾನವನ್ನು ತ್ಯಜಿಸಿದ್ದರು. ಅದರ ನಂತರ ಅವರು ಆಗಾಗ್ಗೆ ಕೊಠಡಿಯನ್ನು ಬಳಸುತ್ತಿದ್ದರು. 2009-2014ರ ಅವಧಿಯಲ್ಲಿ ಬಿಜೆಪಿ ವಿರೋಧಪಕ್ಷದಲ್ಲಿದ್ದಾಗ ಈ ಕೊಠಡಿಯು ವ್ಯಾಪಕ ರಾಜಕೀಯ ಚಟುವಟಿಕೆಗಳಿಗೆ ಬಳಕೆಯಾಗಿತ್ತು. ಈ ಕೊಠಡಿಯಲ್ಲಿದ್ದ ವಾಜಪೇಯಿ ಮತ್ತು ಎಲ್‌ಕೆ ಅಡ್ವಾಣಿ ಅವರ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ. ಬಿಜೆಪಿ ಸಂಸದೀಯ ಪಕ್ಷದ ಕಚೇರಿ ಎಂಬ ಮತ್ತೊಂದು ನಾಮಫಲಕವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಈ ಕೊಠಡಿಯನ್ನು ಮೊದಲು ಬಿಜೆಪಿ ಮೈತ್ರಿ ಪಕ್ಷ ಜೆಡಿಯುಗೆ ನೀಡಲಾಗಿತ್ತು. ವಾಜಪೇಯಿ ಅವರು ಪ್ರಧಾನಿ ಹುದ್ದೆಯಿಂದ ಇಳಿದ ಬಳಿಕ ಅದನ್ನು ಎನ್‌ಡಿಎ ಅಧ್ಯಕ್ಷರ ಕೊಠಡಿಯನ್ನು ಬದಲಿಸಲಾಯಿತು. ಯುಪಿಎ ಅಧ್ಯಕ್ಷರಿಗೂ ಸಂಸತ್‌ನಲ್ಲಿ ಪ್ರತ್ಯೇಕ ಕೊಠಡಿಯನ್ನು ಮೀಸಲಿಡಲಾಗಿದೆ.