ಕೋವಿಡ್‌ ವಿರುದ್ಧ ಹೋರಾಟದಲ್ಲಿ ‘ಬಿಲಿಯನ್‌ ಡೋಸ್‌ ಕ್ಲಬ್‌’ ಸೇರಿದ ಭಾರತ; ದೇಶಾದ್ಯಂತ ರಂಗೇರಿದ ಸಂಭ್ರಮ

ಗುರುವಾರ ಬೆಳಗ್ಗೆ 9:47ಕ್ಕೆ ಕೋವಿನ್‌ ಪೋರ್ಟಲ್‌ನಲ್ಲಿ 100 ಕೋಟಿ ಲಸಿಕೆ ಡೋಸ್‌ ಸಂಪನ್ನವಾಯಿತು. ಇದರ ಬೆನ್ನಲ್ಲೇ ದೇಶದ ವಿವಿಧ ಆಸ್ಪತ್ರೆಗಳು, ಆರೋಗ್ಯ ಸಚಿವಾಲಯದ ಕಚೇರಿಗಳಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತು. ಹರ್ಷೋದ್ಗಾರ ಮೊಳಗಿತು. ಹಲವೆಡೆ ರಾಷ್ಟ್ರ ಧ್ವಜ ಹಾರಿಸಿ ಸಂಭ್ರಮಿಸಲಾಯಿತು. ಜ.16ರಿಂದ ಭಾರತದ ಕೋವಿಡ್‌ ಲಸಿಕಾ ಅಭಿಯಾನ ಆರಂಭವಾಗಿತ್ತು. ಒಂಬತ್ತು ತಿಂಗಳ ನಂತರ 100 ಕೋಟಿ ಮೊದಲ ಡೋಸ್‌ ಹೆಗ್ಗುರುತನ್ನು ಭಾರತ ದಾಖಲಿಸಿದೆ.

ಕೋವಿಡ್‌ ವಿರುದ್ಧ ಹೋರಾಟದಲ್ಲಿ ‘ಬಿಲಿಯನ್‌ ಡೋಸ್‌ ಕ್ಲಬ್‌’ ಸೇರಿದ ಭಾರತ; ದೇಶಾದ್ಯಂತ ರಂಗೇರಿದ ಸಂಭ್ರಮ
Linkup
ಹೊಸದಿಲ್ಲಿ: ವಿಶ್ವದ ಅತಿದೊಡ್ಡ ಮತ್ತು ಅತಿ ವೇಗದ ಕೋವಿಡ್‌ ಲಸಿಕಾ ಅಭಿಯಾನ ಆರಂಭಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಭಾರತ ಈಗ 100 ಶತಕೋಟಿ ಡೋಸ್‌ಗಳ ಮೈಲುಗಲ್ಲಿನೊಂದಿಗೆ ಇತಿಹಾಸ ಸೃಷ್ಟಿಸಿದೆ. ಜ.16ರಿಂದ ಭಾರತದ ಕೋವಿಡ್‌ ಲಸಿಕಾ ಅಭಿಯಾನ ಆರಂಭವಾಗಿತ್ತು. ಒಂಬತ್ತು ತಿಂಗಳ ನಂತರ 100 ಕೋಟಿ ಮೊದಲ ಡೋಸ್‌ ಹೆಗ್ಗುರುತನ್ನು ಭಾರತ ದಾಖಲಿಸಿದೆ. ಗುರುವಾರ ಬೆಳಗ್ಗೆ 9:47ಕ್ಕೆ ಕೋವಿನ್‌ ಪೋರ್ಟಲ್‌ನಲ್ಲಿ 100 ಕೋಟಿ ಲಸಿಕೆ ಡೋಸ್‌ ಸಂಪನ್ನವಾಯಿತು. ಇದರ ಬೆನ್ನಲ್ಲೇ ದೇಶದ ವಿವಿಧ ಆಸ್ಪತ್ರೆಗಳು, ಆರೋಗ್ಯ ಸಚಿವಾಲಯದ ಕಚೇರಿಗಳಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತು. ಹರ್ಷೋದ್ಗಾರ ಮೊಳಗಿತು. ಹಲವೆಡೆ ರಾಷ್ಟ್ರ ಧ್ವಜ ಹಾರಿಸಿ ಸಂಭ್ರಮಿಸಲಾಯಿತು. ಈ ಸಾಧನೆಯೊಂದಿಗೆ ಚೀನಾ ಬಳಿಕ 'ಶತಕೋಟಿ ಲಸಿಕೆ ಕ್ಲಬ್‌'ಗೆ ಸೇರಿದ ವಿಶ್ವದ ಎರಡನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಈ ಐತಿಹಾಸಿಕ ಹೆಗ್ಗುರುತಿಗೆ ವಿಶ್ವ ಆರೋಗ್ಯ ಸಂಸ್ಥೆ, ಯೂನಿಸೆಫ್‌ ಸೇರಿದಂತೆ ಜಾಗತಿಕ ಸಂಸ್ಥೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇಸ್ರೇಲ್‌ ಸೇರಿದಂತೆ ಹಲವು ದೇಶಗಳ ಮುಖಂಡರು ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಆರೋಗ್ಯ ಸಚಿವ ಮನ್ಸುಕ್‌ ಮಂಡಾವೀಯ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲವು ಗಣ್ಯರು ಈ ಸಾಧನೆಗಾಗಿ ವೈದ್ಯರು, ದಾದಿಯರು ಸೇರಿದಂತೆ ಕೋವಿಡ್‌ ಯೋಧರನ್ನು ಅಭಿನಂದಿಸಿದ್ದಾರೆ. ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ದೇಶದ 75ರಷ್ಟು ಅರ್ಹ ಜನರು ಮೊದಲ ಡೋಸ್‌ ಪಡೆದುಕೊಂಡಿದ್ದಾರೆ. 31% ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. 100 ಸ್ಮಾರಕಗಳಿಗೆ ತಿರಂಗ ಜಗಮಗ100 ಕೋಟಿ ಲಸಿಕೆ ಹೆಗ್ಗುರುತಿನ ಸಂಕೇತವಾಗಿ ಕೇಂದ್ರ ಸರಕಾರ ದೇಶಾದ್ಯಂತ ಸಂಭ್ರಮಾಚರಣೆ ಆಯೋಜಿಸಲಾಗಿದೆ. ಹಂಪಿ ಸೇರಿದಂತೆ ದೇಶದ 100 ಸ್ಮಾರಕಗಳ ಮೇಲೆ ರಾಷ್ಟ್ರಧ್ವಜ ಹಾರಿಸುವುದರ ಜೊತೆಗೆ ಸ್ಮಾರಕಗಳಿಗೆ ತಿರಂಗ ದೀಪಾಲಂಕಾರ ಮಾಡಲಾಗಿದೆ. ಸಂಭ್ರಮ ಹಂಚಿಕೊಂಡ ಪ್ರಧಾನಿ100 ಕೋಟಿ ಲಸಿಕೆ ದಾಖಲೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದಿಲ್ಲಿಯ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿನ ವೈದ್ಯರು, ನರ್ಸ್‌ಗಳು ಮತ್ತು ಕೋವಿಡ್‌ ಲಸಿಕೆ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಿದರು. ಈ ವೇಳೆ ಲಸಿಕೆ ಪಡೆದ ವಿಶೇಷ ಚೇತನ ಯುವತಿಯೊಬ್ಬರು 'ಏ ಮೇರೆ ವತನ್‌' ಗೀತೆ ಹಾಡುವ ಮೂಲಕ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದರು. ಯುವತಿಯನ್ನು ಪ್ರಧಾನಿ ಅಭಿನಂದಿಸುತ್ತಿರುವ ಚಿತ್ರ ವೈರಲ್‌ ಆಗಿದೆ. ಭಾರತದ ವ್ಯಾಕ್ಸಿನ್‌ ಟ್ರ್ಯಾಕರ್‌ (ಗುರುವಾರ ರಾತ್ರಿ 8 ಗಂಟೆವರೆಗೆ)
  • 1,00,59,99,286: ಒಟ್ಟು ಡೋಸ್‌ಗಳು
  • 71,08,36,154: ಮೊದಲ ಡೋಸ್‌
  • 29,51,63,132: ಎರಡನೇ ಡೋಸ್‌
ರಾಜ್ಯದಲ್ಲಿ ಲಸಿಕೆ ಸಾಧನೆ
  • 6,21,60,855: ಒಟ್ಟು ಡೋಸ್‌
  • 4,15,13,767: ಮೊದಲ ಡೋಸ್‌
  • 2,06,47,088: ಎರಡನೇ ಡೋಸ್‌
ಗರಿಷ್ಠ ಲಸಿಕೆ: ಟಾಪ್‌ 5 ರಾಜ್ಯಗಳು
  • ಉತ್ತರ ಪ್ರದೇಶ
  • ಮಹಾರಾಷ್ಟ್ರ
  • ಪಶ್ಚಿಮ ಬಂಗಾಳ
  • ಗುಜರಾತ್‌
  • ಮಧ್ಯ ಪ್ರದೇಶ
ಲಸಿಕೆ ಅಭಿಯಾನದ ಹಾದಿ 2021ರ ಜನವರಿ 16ರಂದು ಭಾರತದಲ್ಲಿ ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜ.16, 2021ರಂದು ಮೊದಲ ಹಂತವಾಗಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್‌ ನೀಡಲಾಯಿತು. ಮಾ.1ರಿಂದ 60 ವರ್ಷ ಮೀರಿದವರು ಮತ್ತು 45 ವರ್ಷ ದಾಟಿದ ಕೋಮಾರ್ಬಿಡ್‌ ರೋಗಿಗಳಿಗೆ ಜನರಿಗೆ ಲಸಿಕೆ ನೀಡಿಕೆ ಆರಂಭಿಸಲಾಯಿತು. ಮೇ 1ರಿಂದ ಮೂರನೇ ಹಂತದಲ್ಲಿ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ನೀಡಿಕೆ ಆರಂಭಿಸಲಾಯಿತು. ಸವಾಲು ಇನ್ನೂ ಇದೆಮೊದಲ ಡೋಸ್‌ 100 ಕೋಟಿ ಗಡಿ ದಾಟಿದ್ದರೂ, ಉಳಿದ 20% ಜನರನ್ನು ಲಸಿಕೆ ಪಡೆಯುವಂತೆ ಮನವೊಲಿಸುವುದು ದೊಡ್ಡ ಸವಾಲು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ಕೇವಲ ಮೊದಲ ಡೋಸ್‌ ಪಡೆದರೆ ಪೂರ್ಣ ಸುರಕ್ಷತೆ ದೊರೆಯದು. ಲಸಿಕೆ ಅಭಿಯಾನ ಸಫಲವಾಗಬೇಕಾದರೆ ಎರಡೂ ಡೋಸ್‌ ಪಡೆಯಬೇಕು. ಈಗ ಕೋವಿಡ್‌ ಸೋಂಕು ಕಡಿಮೆಯಾಗಿರುವುದರಿಂದ ಲಸಿಕೆ ಬಗ್ಗೆ ಜನರ ಅಲಕ್ಷ್ಯ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.