ಶಿಮ್ಲಾದಲ್ಲಿ 22 ಜನ ಪವಾಡ ಸದೃಶ ಪಾರು: ಚಾಲಕನ ಸಮಯಪ್ರಜ್ಞೆಯಿಂದ ಕಂದಕಕ್ಕೆ ಉರುಳುತ್ತಿದ್ದ ಬಸ್‌ ಆಗಿದ್ದೇನು?

ಬಸ್‌ ಒಂದು ರೀತಿಯಲ್ಲಿ ವೇಗವಾಗಿ ಬರುತ್ತಿತ್ತು. ಆದರೆ ಏಕಾಏಕಿ ಅದರ ಟಯರ್‌ ಸ್ಪೋಟಗೊಂಡು ಬಸ್‌ ಕಂದಕದತ್ತ ವಾಲಿದೆ. ಈ ವೇಳೆ ಬಸ್‌ನಲ್ಲಿದ್ದ ಪ್ರತೀ ಪ್ರಯಾಣಿಕನಿಗೂ ಒಮ್ಮೆ ಸಾವಿನ ಲೋಕಕ್ಕೆ ಹೋಗಿ ಬಂದಂತೆ ಆಗಿತ್ತು. ಆದರೆ ನಿಪುಣ ಚಾಲಕನ ಚಮತ್ಕಾರಕ್ಕೆ ಎಲ್ಲರ ಪ್ರಾಣವೂ ಉಳಿದಿದೆ. ಈ ಬಗ್ಗೆ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

ಶಿಮ್ಲಾದಲ್ಲಿ 22 ಜನ ಪವಾಡ ಸದೃಶ ಪಾರು: ಚಾಲಕನ ಸಮಯಪ್ರಜ್ಞೆಯಿಂದ ಕಂದಕಕ್ಕೆ ಉರುಳುತ್ತಿದ್ದ ಬಸ್‌ ಆಗಿದ್ದೇನು?
Linkup
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಖಾಸಗಿ ಚಾಲಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದ್ದು, 22 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿರ್ಮೌರ್‌ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 707ರಲ್ಲಿಸಂಚರಿಸುತ್ತಿದ್ದ ಬಸ್ಸಿನ ಟೈರ್‌ ಏಕಾಏಕಿಯಾಗಿ ಸ್ಫೋಟಿಸಿ ಬಸ್‌ ಕಣಿವೆಯತ್ತ ವಾಲಿದೆ. ಅನುಭವಿ ಸಮಯ ಪ್ರಜ್ಞೆ ಮೆರೆದಿದ್ದು, ಆಗಾಗ ಬ್ರೇಕ್‌ ಹಾಕುವ ಮೂಲಕ ಬಸ್ಸಿನಲ್ಲಿದ್ದ ಎಲ್ಲ 22 ಜನ ಇಳಿಯುವ ತನಕ ಬಸ್‌ ಸಮತೋಲನದಿಂದ ಇರುವಂತೆ ನೋಡಿಕೊಂಡಿದ್ದಾನೆ. ಬಳಿಕ ಪ್ರಯಾಣಿಕರು ಚಾಲಕನನ್ನು ರಕ್ಷಿಸಿದರು. ಕೆಲವೇ ಕ್ಷಣದಲ್ಲಿ ಕಣಿವೆಗೆ ಉರುಳಲಿದೆ ಎಂಬಂತೆ ಭಾಸವಾಗುವ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಚಾಲಕನ ಸಮಯಪ್ರಜ್ಞೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ವಾರವಷ್ಟೇ ಸಿರ್ಮೌರ್‌ನಲ್ಲಿ ಭಾರಿ ಮಳೆಯಿಂದ ಭೂಕುಸಿತದಿಂದ ಬೃಹತ್‌ ಕಲ್ಲುಗಳು ರಸ್ತೆಗೆ ಉರುಳಿವೆ.