ಸ್ವಿಮ್ಮಿಂಗ್‌ನಲ್ಲಿ ಮಹೇಶ್ ಬಾಬು ಪುತ್ರನ ಸಾಧನೆ: ಹೆಮ್ಮೆ ಪಟ್ಟ ನಮ್ರತಾ ಶಿರೋಡ್ಕರ್

ಸ್ವಿಮ್ಮಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಮಹೇಶ್ ಬಾಬು-ನಮ್ರತಾ ಶಿರೋಡ್ಕರ್ ದಂಪತಿಯ ಪುತ್ರ ಗೌತಮ್ ಇದೀಗ ಹೊಸ ಸಾಧನೆ ಮಾಡಿದ್ದಾರೆ. ತೆಲಂಗಾಣ ರಾಜ್ಯದ ಟಾಪ್ 8 ಸ್ಪರ್ಧಾತ್ಮಕ ಸ್ವಿಮ್ಮರ್‌ಗಳ ಪಟ್ಟಿಯಲ್ಲಿ ಗೌತಮ್ ಸ್ಥಾನ ಪಡೆದಿದ್ದಾರೆ.

ಸ್ವಿಮ್ಮಿಂಗ್‌ನಲ್ಲಿ ಮಹೇಶ್ ಬಾಬು ಪುತ್ರನ ಸಾಧನೆ: ಹೆಮ್ಮೆ ಪಟ್ಟ ನಮ್ರತಾ ಶಿರೋಡ್ಕರ್
Linkup
ಖ್ಯಾತ ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರುವುದು ವಾಡಿಕೆ. ತಂದೆ-ತಾಯಿಯ ಹಾದಿಯಲ್ಲೇ ಸಾಗಲು ನಿರ್ಧರಿಸಿ ಬಣ್ಣದ ಬದುಕಿಗೆ ಕಾಲಿಟ್ಟಿರುವ ಅನೇಕ ತಾರೆಯರ ಮಕ್ಕಳ ನಿದರ್ಶನ ಕಣ್ಣ ಮುಂದಿದೆ. ಆದರೆ, ಟಾಲಿವುಡ್ ಪ್ರಿನ್ಸ್ ಪುತ್ರ ಮಾತ್ರ ಕೊಂಚ ವಿಭಿನ್ನ. ಸ್ವಿಮ್ಮಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಮಹೇಶ್ ಬಾಬು-ನಮ್ರತಾ ಶಿರೋಡ್ಕರ್ ದಂಪತಿಯ ಪುತ್ರ ಗೌತಮ್ ಇದೀಗ ಹೊಸ ಸಾಧನೆ ಮಾಡಿದ್ದಾರೆ. ತೆಲಂಗಾಣ ರಾಜ್ಯದ ಟಾಪ್ 8 ಸ್ಪರ್ಧಾತ್ಮಕ ಸ್ವಿಮ್ಮರ್‌ಗಳ ಪಟ್ಟಿಯಲ್ಲಿ ಗೌತಮ್ ಸ್ಥಾನ ಪಡೆದಿದ್ದಾರೆ. 2018ರಿಂದ ಗೌತಮ್ ವೃತ್ತಿಪರ ಸ್ವಿಮ್ಮಿಂಗ್ ಕಲಿಯುತ್ತಿದ್ದಾರೆ. ಮೂರು ವರ್ಷಗಳಲ್ಲಿ ತೆಲಂಗಾಣದ 14 ವರ್ಷ ವಯಸ್ಸಿನ ಟಾಪ್ 8 ಸ್ಪರ್ಧಾತ್ಮಕ ಸ್ವಿಮ್ಮರ್‌ಗಳ ಪಟ್ಟಿಯಲ್ಲಿ ಗೌತಮ್ ಸ್ಥಾನ ಗಿಟ್ಟಿಸಿದ್ದಾರೆ. ಪುತ್ರನ ಈ ಸಾಧನೆ ಬಗ್ಗೆ ಮಹೇಶ್ ಬಾಬು ಪತ್ನಿ ಹೆಮ್ಮೆ ಪಟ್ಟಿದ್ದಾರೆ. ಮಗನ ಸಾಧನೆ ಬಗ್ಗೆ ನಮ್ರತಾ ಶಿರೋಡ್ಕರ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ನಮ್ರತಾ ಶಿರೋಡ್ಕರ್ ಇನ್ಸ್ಟಾಗ್ರಾಮ್ ಪೋಸ್ಟ್ ''ಗೌತಮ್ ಬಗ್ಗೆ ತುಂಬಾ ಹೆಮ್ಮೆ ಆಗುತ್ತಿದೆ. 2018 ರಿಂದ ಗೌತಮ್ ವೃತ್ತಿಪರ ಸ್ವಿಮ್ಮಿಂಗ್ ಕಲಿಯುತ್ತಿದ್ದಾನೆ. ಇದೀಗ ತೆಲಂಗಾಣ ರಾಜ್ಯದಲ್ಲಿ ಅವನ ವಯಸ್ಸಿನ ಟಾಪ್ 8 ಸ್ಪರ್ಧಾತ್ಮಕ ಸ್ವಿಮ್ಮರ್‌ಗಳ ಪಟ್ಟಿಯಲ್ಲಿ ಸರಾಗವಾಗಿ ಸ್ಥಾನ ಗಿಟ್ಟಿಸಿದ್ದಾನೆ. ಸ್ವಿಮ್ಮಿಂಗ್‌ನಲ್ಲಿ ಬಟರ್‌ಫ್ಲೈ ಬ್ಯಾಕ್‌ಸ್ಟ್ರೋಕ್, ಬ್ರೆಸ್ಟ್ ಸ್ಟ್ರೋಕ್ ಮತ್ತು ಫ್ರೀ ಸ್ಟೈಲ್‌ಗಳನ್ನ ಸುಲಭವಾಗಿ ಗೌತಮ್ ಮಾಡುತ್ತಾನೆ. ಅವನ ನೆಚ್ಚಿನ ಫ್ರೀ ಸ್ಟೈಲ್‌ನಲ್ಲಿ 5 ಕಿಲೋಮೀಟರ್ ದೂರವನ್ನು ಮೂರು ಗಂಟೆಯೊಳಗೆ ಗೌತಮ್ ಸ್ವಿಮ್ ಮಾಡುತ್ತಾನೆ'' ಎಂದು ಇನ್ಸ್ಟಾಗ್ರಾಮ್‌ನಲ್ಲಿ ನಮ್ರತಾ ಶಿರೋಡ್ಕರ್ ಬರೆದುಕೊಂಡಿದ್ದಾರೆ. ಜೊತೆಗೆ ಪುತ್ರ ಗೌತಮ್ ಸ್ವಿಮ್ಮಿಂಗ್ ಮಾಡುತ್ತಿರುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.