'ಡವ್ ಮಾಸ್ಟರ್'ನಲ್ಲಿ ತಬಲಾ ನಾಣಿ & ಶಕೀಲಾ; ಇದು ಶ್ವಾನಕ್ಕೆ ಮದುವೆ ಮಾಡಿಸೋ ಕಥೆ!

ಈ ಹಿಂದೆ ತೆರೆಕಂಡ 'ನಾನು ಮತ್ತು ಗುಂಡ' ಸಿನಿಮಾದಲ್ಲಿ ಮನುಷ್ಯ ಮತ್ತು ಶ್ವಾನದ ನಡುವಿನ ಬಗ್ಗೆ ಹೇಳಲಾಗಿತ್ತು. ಇದೀಗ ಮತ್ತೊಂದು ಸಿನಿಮಾ ತಯಾರಾಗುತ್ತಿದ್ದು, ತಬಲಾ ನಾಣಿ, ಶಕೀಲಾ ಮುಂತಾದವರು ನಟಿಸುತ್ತಿದ್ದಾರೆ.

'ಡವ್ ಮಾಸ್ಟರ್'ನಲ್ಲಿ ತಬಲಾ ನಾಣಿ & ಶಕೀಲಾ; ಇದು ಶ್ವಾನಕ್ಕೆ ಮದುವೆ ಮಾಡಿಸೋ ಕಥೆ!
Linkup
ತಮ್ಮ ಮಕ್ಕಳಷ್ಟೇ ಪ್ರೀತಿ-ವಾತ್ಸಲ್ಯದಿಂದ ಕೆಲವರು ಸಾಕುಪ್ರಾಣಿಗಳನ್ನು ಸಾಕಿರುತ್ತಾರೆ. ಆ ಪ್ರಾಣಿಗಳಿಗೂ ತನ್ನ ಯಜಮಾನನೇ ಸರ್ವಸ್ವ. ಅದರಲ್ಲೂ ಶ್ವಾನಪ್ರೇಮ ಕೊಂಚ ಜಾಸ್ತಿ ಇರುತ್ತದೆ. ನಿಯತ್ತಿಗೆ ಮತ್ತೊಂದು ಹೆಸರು ನಾಯಿ ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಅಂತೆಯೇ, ಇಲ್ಲೊಂದು ತಂಡ '' ಶೀರ್ಷಿಕೆಯನ್ನು ಇಟ್ಟುಕೊಂಡು ಹೊಸ ಸಿನಿಮಾ ಶುರು ಮಾಡಿದೆ. ಇಲ್ಲಿ ಶ್ವಾನಕ್ಕೆ ಮದುವೆ ಮಾಡಿಸುವ ಕಥೆ ಇದೆಯಂತೆ. ಆರ್ಯ ಇದರ ನಿರ್ದೇಶಕರು. ಮುಖ್ಯ ಪಾತ್ರದಲ್ಲಿ 'ತಬಲಾ' ನಾಣಿ, , ಸುಂದರ್ ವೀಣಾ, ನವೀನ್ ಪಡೀಲ್‌ ಮುಂತಾದವರು ಇದ್ಧಾರೆ. ರಾಕಿ ನಮ್ಮ ಸಿನಿಮಾದ ಹೀರೋಚಿತ್ರದ ಬಗ್ಗೆ ಮಾತನಾಡುವ ನಾಣಿ, 'ನಿರ್ದೇಶಕ ಆರ್ಯ ಹೇಳಿದ ಕಥೆ ಇಷ್ಟವಾಯಿತು. ಈ ಚಿತ್ರಕ್ಕೆ ಕಥೆಯೇ ಹೀರೋ. ಎರಡನೇ ಹೀರೋ ನಮ್ಮ ರಾಕಿ. ನಾನು‌ ನಾಯಿಯನ್ನು ಪ್ರೀತಿಯಿಂದ ಮಗನಂತೆ ಸಾಕಿರುತ್ತೇನೆ. ಕೊನೆಗೆ ಆ ನಾಯಿಯಿಂದ ನಿಮಗೆ ಕೆಡಕಾಗುತ್ತದೆ ಎಂದು ತಿಳಿದಾಗ, ನಾನು ಏನು ಮಾಡುತ್ತೇನೆ ಎಂಬುದನ್ನು ನೀವು ಚಿತ್ರದಲ್ಲಿ ನೋಡಬೇಕು. ಎಲ್ಲರೂ ಗಂಡಿಗೆ ಹೆಣ್ಣು ಹುಡುಕಲು ಹೋಗುತ್ತಾರೆ. ನಾವು ಇದರಲ್ಲಿ ನಮ್ಮ ರಾಕಿಗೆ ಕನ್ಯಾನ್ವೇಷಣೆ ಮಾಡುತ್ತೇವೆ. ಉತ್ತಮ ಕಥೆಯ ಈ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ' ಎನ್ನುತ್ತಾರೆ. ಕಾಕ್ರೋಚ್ ಸುಧೀ ಡ್ಯಾನ್ಸ್ 'ತುಂಬಾ ದಿನಗಳ ನಂತರ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಹಿಂದೆ ನಟಿಸಿರುವ ಚಿತ್ರಗಳಿಗಿಂತ ಭಿನ್ನ ಪಾತ್ರ ಎನ್ನಬಹುದು' ಎನ್ನುತ್ತಾರೆ ನಟಿ ಶಕೀಲಾ. ಇನ್ನು, 'ಕಾಕ್ರೋಚ್' ಸುಧೀ ಅವರು ಈ ಸಿನಿಮಾದ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ನಾನು ನಿರ್ದೇಶಕ ಆರ್ಯ ಬಹು ದಿನಗಳ ಸ್ನೇಹಿತರು. ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಬೇಕು ಅವರು ಹೇಳಿದರು. ನನಗೆ ಡ್ಯಾನ್ಸ್ ಮಾಡುವುದು ತುಂಬಾ ಕಷ್ಟ ಅಂದೆ. ಆದರೂ ಕೂಡ ಇಲ್ಲ ನೀವೇ ಮಾಡಬೇಕು ಅಂದರು. ಈ ಚಿತ್ರದ ಹಾಡೊಂದಕ್ಕೆ ನೃತ್ಯ ಮಾಡುತ್ತಿದ್ದೇನೆ. ಅದಕ್ಕಾಗಿ ತಯಾರಿ ತೆಗೆದುಕೊಳ್ಳುತ್ತೇನೆ' ಎಂದರು ಕಾಕ್ರೋಚ್ ಸುಧೀ. 'ನಾನು ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಚೊಚ್ಚಲ ಚಿತ್ರ. ನಿರ್ಮಾಪಕರ ಬಳಿ ಕಥೆ ಬಗ್ಗೆ ಹೇಳಿದ ತಕ್ಷಣ ಒಪ್ಪಿಕೊಂಡರು. ಮನುಷ್ಯ ಹಾಗೂ ಪ್ರಾಣಿ ನಡುವಿನ ಸಂಬಂಧದ ಮೌಲ್ಯ ತಿಳಿಸುವ ಕಥೆ. ನಾನೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. , ನವೀನ್ ಪಡೀಲ್, ಸುಂದರ್ ವೀಣಾ, ಕುರಿ ಪ್ರತಾಪ್, ಮಿತ್ರ, ಕಾಕ್ರೋಚ್ ಸುಧೀ, ಗಿರೀಶ್ ಜತ್ತಿ, ಗೋವಿಂದೇ ಗೌಡ, ಸ್ವಪ್ನ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಾಕಿ (ನಾಯಿ) ಪ್ರಮುಖ ಪಾತ್ರ ನಿರ್ವಹಿಸುತ್ತಿದೆ' ಎಂದು ನಿರ್ದೇಶಕ ಆರ್ಯ ಹೇಳಿಕೊಂಡರು. ಈ ಸಿನಿಮಾಕ್ಕೆ ರೋಷನ್ ಪಾಷಾ ಬಂಡವಾಳ ಹೂಡುತ್ತಿದ್ದಾರೆ. ಸಂಗೀತ ನಿರ್ದೇಶಕ ಶಕೀಲ್ ಅಹ್ಮದ್ ಹಾಡುಗಳಿಗ ರಾಗ ಸಂಯೋಜನೆ ಮಾಡುತ್ತಿದ್ದಾರೆ. ಛಾಯಾಗ್ರಹಣದ ಹೊಣೆ ಕಿರಣ್ ಅವರದ್ದು.