ಸುದ್ದಿಗೋಷ್ಠಿಯಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತ ಕೆಜಿಎಫ್ ಬಾಬು! ಕಾರಣ ಏನು..?

ಕಾಂಗ್ರೆಸ್‌ ವಿಧಾನ ಪರಿಷತ್‌ ಅಭ್ಯರ್ಥಿ ಕೆಜಿಎಫ್‌ ಬಾಬು ಸುದ್ದಿಗೋಷ್ಠಿಯಲ್ಲಿಯೇ ಬಿಕ್ಕಿ ಬಿಕ್ಕಿ ಹತ್ತಿದ್ದಾರೆ. ಸಚಿವ ಎಸ್‌ಟಿ ಸೋಮಶೇಖರ್‌ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪತ್ನಿಯರೊಂದಿಗೆ ಕೆಜಿಎಫ್‌ ಬಾಬು ಕಣ್ಣೀರಿಟ್ಟರು.

ಸುದ್ದಿಗೋಷ್ಠಿಯಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತ ಕೆಜಿಎಫ್ ಬಾಬು! ಕಾರಣ ಏನು..?
Linkup
ಅತ್ಯಾಚಾರ ದೂರಿನ ಕುರಿತಾದ ಹಳೇ ವಿಚಾರವನ್ನು ಕೆದಕಿ ನನ್ನ ಮಾನ ಹರಾಜು ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಭಾವುಕರಾಗಿ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಗೋಳೋ ಎಂದು ಕಣ್ಣೀರು ಹಾಕಿದರು. ಬುಧವಾರ ತಮ್ಮ ಕುಟುಂಬದ ಸದಸ್ಯರಾದ ಇಬ್ಬರು ಪತ್ನಿಯರು(ರೂಕ್ಸಾನಾ ಮತ್ತು ಶಾಸಿಯ) ಮಗಳು ಉಂಮ್ರಾ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ವೈಯಕ್ತಿಕ ವಿಚಾರ ರಾಜಕೀಯಕ್ಕೆ ಯಾಕೆ ತರುತ್ತೀರಾ ಈಗ ಎಲ್ಲಾ ಸರಿ ಹೋಗಿದೆ ಎಂದು ಭಾವುಕರಾಗಿ ಮಾತನಾಡಿದರು. ನಾನು ಸುದ್ದಿಗೊಷ್ಠಿಯಲ್ಲಿ ಬೇರೆ ಏನು ಮಾತನಾಡಲ್ಲ, ಹೆಂಡತಿ, ಮಗಳು ನನಗೆ ಪ್ರಾಣ. ನವೀದ್ ಅಂತ ಸ್ನೇಹಿತ ಜೆಡಿಗೆ ಆಸ್ತಿ ತೆಗೆದುಕೊಂಡಿದ್ದ. ಇನ್ನೂರು ಮೂನ್ನೂರು ಕೋಟಿ‌ ಪ್ರಾಪರ್ಟಿ ವ್ಯವಹಾರದಲ್ಲಿ ಅವನು ಮೋಸ ಮಾಡಿದ. ಈ ಸಂದರ್ಭದಲ್ಲಿ ಎರಡನೇ ಹೆಂಡತಿ ನನ್ನ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದರು. ನಾವಿಬ್ಬರು ಒಪ್ಪಿ ಮದುವೆ ಆಗಿದ್ದೇವೆ. ಆದರೆ, ಮೊದಲನೇ ಹೆಂಡತಿಗೆ ಮದುವೆ ವಿಚಾರ ಗೊತ್ತಿರಲಿಲ್ಲ. ಹೀಗಾಗಿ ನನ್ನ ಮೊದಲನೇ ಹೆಂಡತಿಯನ್ನು ನನ್ನ ವಿರುದ್ಧ ಎತ್ತಿ ಕಟ್ಟಿ ಮಾಡಿದ ಕುತಂತ್ರ ಇದು ಎಂದರು. ನನ್ನ ಹೆಂಡತಿ ಮೂಲಕ ನನ್ನ ವಿರುದ್ಧ ಕೇಸ್ ಹಾಕಲಾಗಿತ್ತು.ನನ್ನ ಸಹೋದರರು ಹೆಂಡತಿ ಬಿಡಲು ಹೇಳಿದರು. ಮೊದಲ ಹೆಂಡತಿ ನನ್ನ ಕಷ್ಟ ಕಾಲದಲ್ಲಿ ಊಟ ಹಾಕಿದ್ದಾಳೆ. ಆದ್ರಿಂದ ಅವಳನ್ನು ಬಿಡುವ ಕೆಲಸ ಮಾಡಲಿಲ್ಲ. ಕೋರ್ಟ್‌ನಲ್ಲಿ ಮೊದಲ ಪತ್ನಿ ರೂಕ್ಸಾನಾ ಒಂದು ಸಾವಿರ ಕೋಟಿ‌ ರೂಪಾಯಿ ಪರಿಹಾರಕ್ಕೆ ಕೇಸ್ ಹಾಕಿದ್ರು.‌ ಆದರೆ, ಬಳಿಕ ಹೆಂಡತಿ ಒಪ್ಪಿ ನನ್ನ ಜೊತೆಗೆ ಬಂದಳು ಎಂದರು. ನಂತರ ಮಾತನಾಡಿದ ಮೊದಲ ಪತ್ನಿ ರುಕ್ಸಾನಾ, ನವೀದ್ ಬಂದು ನಿನ್ನ ಗಂಡನ ಹತ್ತಿರ ದುಡ್ಡಿದೆ. ಸಾವಿರ ಕೋಟಿ ದುಡ್ಡಿದೆ. ಕೇಸ್ ಹಾಕೋಣ ಎಂದರು. ನನ್ನ ತೆಲೆ ಕೆಡಿಸಿ ಕೇಸ್ ಹಾಕಿದ್ರು. ನನ್ನ ಗಂಡ ದೇವರ ಸಮಾನ, ನನ್ನನ್ನು ತುಂಬಾ ಚೆನ್ನಾಗಿ ನೋಡಿಕೋಳ್ತಾ ಇದ್ದಾರೆ. ಬಳಿಕ ಇಬ್ಬರು ಮಾತುಕತೆ ಮಾಡಿ‌ ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ. ನಾವು ಈಗ ಸುಖವಾಗಿ ಬಾಳುತ್ತಿದ್ದೇವೆ.ನಮ್ಮನೆ ಹಾಳು ಮಾಡಬೇಡಿ, ಮಗಳ ಸಂಸಾರ ಹಾಳು ಮಾಡಬೇಡಿ. ಹಿಂದೆ ಹಾಕಿದ ಕೇಸ್‌ ವಾಪಸ್ಸು ಪಡೆದಿದ್ದೇವೆ.‌ ಈಗ ರಾಜಕೀಯಕ್ಕೆ ಬಂದ್ರು ಅಂತ ಈಗ ಸುಳ್ಳು ಆರೋಪ ಬೇಡ ಎಂದು ಮನವಿ ಮಾಡಿದರು. ಎಸ್‌ಟಿ ಸೋಮಶೇಖರ್‌ ಆರೋಪ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಸಚಿವ ಎಸ್‌ಟಿ ಸೋಮಶೇಖರ್ ಸೋಮವಾರ ಗಂಭೀರ ಆರೋಪ ಮಾಡಿದ್ದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ್ದ ಅವರು, ಹೆಂಡತಿ, ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಾಬು ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಠಾಣೆಯೊಂದರಲ್ಲಿ ಎಫ್‍ಐಆರ್ ದಾಖಲಾಗಿದೆ. ಇಂತಹವರಿಗೆ ಕಾಂಗ್ರೆಸ್‍ನವರು ಟಿಕೆಟ್ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇಂತಹ ಪ್ರಕರಣಗಳನ್ನು ನೋಡಿ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ಅತ್ಯಾಚಾರ ಮಾಡಿದ್ದಾರೆ ಎಂಬುವುದಕ್ಕೆ ಎಫ್‍ಐಆರ್ ದಾಖಲಾಗಿರುವುದು ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.