ಹತ್ಯೆಗೆ ಸಂಚು ಆರೋಪ; ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಎಸ್. ಆರ್ ವಿಶ್ವನಾಥ್ ದೂರು

ಹತ್ಯೆಗೆ ಸಂಚು ವಿಡಿಯೋ ಬಹಿರಂಗ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧು ಯಲಹಂಕ ಬಿಜೆಪಿ ಶಾಸಕ ಎಸ್. ಆರ್ ವಿಶ್ವನಾಥ್ ದೂರು ನೀಡಿದ್ದಾರೆ. ಬುಧವಾರ ನಗರದ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ತ‌ನಿಖೆಗೆ ಅಗ್ರಹಿಸಿದ್ದಾರೆ.

ಹತ್ಯೆಗೆ ಸಂಚು ಆರೋಪ; ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಎಸ್. ಆರ್ ವಿಶ್ವನಾಥ್ ದೂರು
Linkup
ಬೆಂಗಳೂರು: ಹತ್ಯೆಗೆ ಸಂಚು ವಿಡಿಯೋ ಬಹಿರಂಗ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧು ಯಲಹಂಕ ಬಿಜೆಪಿ ಶಾಸಕ ಎಸ್. ಆರ್ ವಿಶ್ವನಾಥ್ ನೀಡಿದ್ದಾರೆ. ಬುಧವಾರ ನಗರದ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ತ‌ನಿಖೆಗೆ ಅಗ್ರಹಿಸಿದ್ದಾರೆ. ದೂರಿನ ಸಾರಾಂಶ‌ ಇಲ್ಲಿದೆ ಮತ್ತಗದಹಳ್ಳಿ ಗೋಪಾಲಕೃಷ್ಣ ಮತ್ತು ಇತರರು ನನ್ನ ವಿರುದ್ಧ ಕೊಲೆ ಸಂಚು, ಮಾನಹಾನಿ, ಅನಾವಶ್ಯಕ ವಿಷಯಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆದು ಜೀವ ಭಯ ಉಂಟು ಮಾಡಿದ್ದಾರೆ. ಸಿಂಗನಾಯಕನ ಹಳ್ಳಿಯಲ್ಲಿ ವಾಸವಿರುವ ನನಗೆ ನಿನ್ನೆ ಬಂದ ಮಾಹಿತಿಯಂತೆ ಮುತ್ತಗದಹಳ್ಳಿ ಗೋಪಾಲಕೃಷ್ಣ ಇತರರು, ದೇವರಾಜ್ ಆಲಿಯಾಸ್ ಕುಳ್ಳ ದೇವರಾಜ್ ಈತನ ಕಡೆಯಿಂದ ನಾನು ಸತತವಾಗಿ ಕ್ಷೇತ್ರದ ಶಾಸಕನಾಗಿ ಜನಸೇವೆ ಮಾಡುತ್ತಿರುವುದನ್ನು ಸಹಿಸಲಾಗದೆ,ದ್ವೇಷ ಅಸೂಯೆಗಳಿಂದ ನನ್ನನ್ನು ಕುಳ್ಳ ದೇವರಾಜ್ ಎಂಬಾತನ ಕಡೆಯಿಂದ ಮತ್ತು ಆಂಧ್ರದ ತಂಡದಿಂದ ಕೊಲೆ ಮಾಡಿಸಲು ಸಂಚು ‌ರೂಪಿಸಲಾಗಿದೆ‌ ಹಾಗೇಯೇ ಈ ಹಿಂದೆ ಯಲಹಂಕದಲ್ಲಿ ಕಡಬಗೆರೆ ಸೀನಾ ಆಲಿಯಾಸ್ ಶ್ರೀನಿವಾಸ್ ಕೊಲೆ ಯತ್ನ ಪ್ರಕರಣದಲ್ಲಿ ನನ್ನ ಮತ್ತು ನನ್ನ ಸ್ನೇಹಿತರು ಇಲ್ಲದಿದ್ದರೂ ಆತನ ಕಡೆಯಿಂದ ಹೇಳಿಕೆ ನೀಡುವ ಪ್ರಯತ್ನ ಮಾಡಿಸಿ ಅನಾವಶ್ಯಕವಾಗಿ ಅಪರಾಧ ಪ್ರಕರಣದಲ್ಲಿ ಸುಲುಕಿಸಲು ಯತ್ನಿಸಿ, ಶಾಸಕನಾದ ನನ್ನ ಮಾನಹಾನಿ ಮಾಡಿರುತ್ತಾರೆ. ಈ ಹಿಂದೆ ನನ್ನ ಮೇಲೆ ವಿಚಾರಯಾದ ಕೆಲವು ಪ್ರಕರಣಗಳಲ್ಲಿಯೂ ಈತನ ಕೈವಾಡ ಇರುವ ಬಗ್ಗೆ ಅನುಮಾನ ಇರುತ್ತದೆ.‌ ವಿಶೇಷವಾಗಿ ನಾನು ನನ್ನ ತೋಟಕ್ಕೆ ಒಂಟಿಯಾಗಿ ಬರುವ ವೇಳೆ, ವಾಕಿಂಗ್ ಮಾಡುವ ವೇಳೆ, ಕಾರ್ಯಕ್ರಮಗಳಿಗೆ ಹೋಗಿ ಬರುವ ವೇಳೆ, ನನ್ನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಬೇಕು ಎಂಬ ಆತನ ದ್ವೇಷ ಮನೋಭಾವ ಮತ್ತು ಸಂಚಿಗೆ ಪೂರಕವಾಗಿ ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನವೂ ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ. ಹೀಗೆ ನೋಡಿದರೆ ಆತನು ಚುನಾವಣಾ ದೃಷ್ಟಿಯಿಂದ ನನ್ನ ಮಾನ ಹಾನಿ ಮಾಡುವ ಕೊಲೆ ಮಾಡಲು ಸಂಚು ಮತ್ತು ಸುಪಾರಿ ನೀಡಿರುವುದು ಕಂಡು ಬಂದಿದ್ದು,ಇದರಿಂದ ನನ್ನ ಕ್ಷೇತ್ರದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ವಹಿಸಲು ಕೋರುತ್ತೇನೆ ಎಂದು ದೂರಿನಲ್ಲಿ ವಿಶ್ವನಾಥ್ ಉಲ್ಲೇಖಿಸಿದ್ದಾರೆ.