ವ್ಯವಸ್ಥೆ ಎಚ್ಚರಗೊಳ್ಳುವ ಮೊದಲು ಇನ್ನೆಷ್ಟು ದುರಂತ ಸಂಭವಿಸಬೇಕು? ಚಾಮರಾಜನಗರ ದುರಂತಕ್ಕೆ ರಾಹುಲ್‌ ಕಿಡಿ

ಚಾಮರಾಜನಗರದಲ್ಲಿ ಆಮ್ಲಜನಕ ಸಿಗದೆ 24 ರೋಗಿಗಳು ಸಾವನ್ನಪ್ಪಿದ ಘಟನೆ ಸಂಬಂಧ ಟ್ಟೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, "ರೋಗಿಗಳು ಸತ್ತಿದ್ದಾ ಅಥವಾ ಕೊಂದಿದ್ದಾ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ವ್ಯವಸ್ಥೆ ಎಚ್ಚರಗೊಳ್ಳುವ ಮೊದಲು ಇನ್ನೆಷ್ಟು ದುರಂತ ಸಂಭವಿಸಬೇಕು? ಚಾಮರಾಜನಗರ ದುರಂತಕ್ಕೆ ರಾಹುಲ್‌ ಕಿಡಿ
Linkup
ಬೆಂಗಳೂರು: ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿದ ವಿಚಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಆಕ್ಸಿಜನ್‌ ಇದೆ ಎಂದೇ ಹೇಳುತ್ತಿರುವಾಗಲೇ ಈ ಘಟನೆ ಸಂಭವಿಸಿದ್ದು, ರಾಜ್ಯ ತಲೆ ತಗ್ಗಿಸುವಂತಾಗಿದೆ. ಈ ಸಂಬಂಧ ಟ್ಟೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, "ರೋಗಿಗಳು ಸತ್ತಿದ್ದಾ ಅಥವಾ ಕೊಂದಿದ್ದಾ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಸಾವಿಗೀಡಾದ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಹೇಳಿರುವ ರಾಹುಲ್‌ ಗಾಂಧಿ, "ವ್ಯವಸ್ಥೆ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ದುರಂತಗಳು ಸಂಭವಿಸಬೇಕು?" ಎಂದು ಪ್ರಶ್ನಿಸಿದ್ದಾರೆ. ಘಟನೆ ಬಳಿಕ ಕಾಂಗ್ರೆಸ್‌ ನಾಯಕರು ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ. “ಕ್ರಿಮಿನಲ್ ನಿರ್ಲಕ್ಷ್ಯವು ಕರ್ನಾಟಕದಲ್ಲಿ ಈ 24 ಸಾವುಗಳಿಗೆ ಕಾರಣವಾಗಿದೆ. ಸಾಕಷ್ಟು ಆಮ್ಲಜನಕವಿದೆ ಎಂದು ಯಾಕೆ ಪ್ರತಿದಿನ ಸುಳ್ಳು ಹೇಳುತ್ತೀರಿ?” ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ಸಚಿವ ಕೆ. ಸುಧಾಕರ್‌ ಅವರನ್ನು ಪ್ರಶ್ನಿಸಿದ್ದಾರೆ. "ಇದಕ್ಕೆ ಯಾವುದೇ ಹೊಣೆಗಾರಿಕೆ ಇಲ್ಲವೇ?" ಎಂದು ಕೇಳಿರುವ ಅವರು, "ಸರಕಾರಕ್ಕೆ ಆಮ್ಲಜನಕವನ್ನು ಪೂರೈಸಲು ಸಾಧ್ಯವಾಗದ ಕಾರಣಕ್ಕೆ ಇನ್ನೂ ಎಷ್ಟು ಜನರನ್ನು ಕೊಲ್ಲುತ್ತೀರಿ?" ಎಂದು ಹರಿಹಾಯ್ದಿದ್ದಾರೆ. “ಇದು ಅತ್ಯಂತ ಗಂಭೀರ ಹಾಗೂ ಅಮಾನವೀಯ ಪ್ರಕರಣ. ರಾಜ್ಯದಲ್ಲಿ ಆಡಳಿತಯಂತ್ರ ಕುಸಿದುಬಿದ್ದಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?” ಎಂದು ಹೇಳಿರುವ ಸಿದ್ದರಾಮಯ್ಯ, “ಕರ್ನಾಟಕ ಬಿಜೆಪಿಯ ಅಧಿಕಾರದ ಲಾಲಸೆಗೆ ಇನ್ನಷ್ಟು ಅಮಾಯಕ ಜನರು ಬಲಿಯಾಗುವುದು ಬೇಡ. ಜನರ ಜೀವ ರಕ್ಷಿಸಲಾಗದ ಇಂಥಾ ಸರಕಾರ ಇರುವುದಕ್ಕಿಂತ ತೊಲಗುವುದೇ ಲೇಸು,” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.