ಲಾಕ್‌ಡೌನ್ ಅವಧಿಯಲ್ಲಿ ಮುಚ್ಚಿದ್ದ ಕಟ್ಟಡಗಳಿಂದ ತೆರಿಗೆ ವಸೂಲಿ: ಬಿಬಿಎಂಪಿ, ಸರಕಾರದಿಂದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿದ್ದಾಗ ಮುಚ್ಚಿದ್ದ/ ಬಳಕೆಯಲ್ಲಿಲ್ಲದ ಕಟ್ಟಡಗಳ ಮೇಲೆ ಆಸ್ತಿ ತೆರಿಗೆ ವಿಧಿಸಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಮತ್ತು ಬಿಬಿಎಂಪಿಯಿಂದ ಪ್ರತಿಕ್ರಿಯೆ ಕೇಳಿದೆ.

ಲಾಕ್‌ಡೌನ್ ಅವಧಿಯಲ್ಲಿ ಮುಚ್ಚಿದ್ದ ಕಟ್ಟಡಗಳಿಂದ ತೆರಿಗೆ ವಸೂಲಿ: ಬಿಬಿಎಂಪಿ, ಸರಕಾರದಿಂದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್
Linkup
ಬೆಂಗಳೂರು: ಕೋವಿಡ್ 19 ಅವಧಿಯಲ್ಲಿ ಬಳಕೆಯಲ್ಲಿಲ್ಲದ ಹಾಗೂ ಮುಚ್ಚಿದ ಕಟ್ಟಡಗಳಿಗೂ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹಾಗೂ ಕಡೆಯಿಂದ ವಿವರಣೆ ಕೇಳಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ಬಿಬಿಎಂಪಿ ಯಾವುದೇ ಕಠಿಣ ಕ್ರಮ ಕೈಗೊಂಡಿದ್ದರೆ, ಅರ್ಜಿದಾರರ ಪರ ವಕೀಲರು ಅದರ ವಿರುದ್ಧ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದ್ದಾರೆ. ಕೊರೊನಾ ವೈರಸ್ ಕಾರಣದಿಂದ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದಾಗ ಕಟ್ಟಡಗಳು ಹಾಗೂ ಭೂಮಿಯ ಮೇಲೆ ಅವುಗಳ ಬಳಕೆ ತೆರಿಗೆ ವಿಧಿಸುವುದು ಸರಿಯಲ್ಲ ಎಂದು ಅರ್ಜಿದಾರ ಸಂಸ್ಥೆ ಜಿಟಿ ಸಿನಿಮಾಸ್ ಪ್ರೈ.ಲಿ. ವಾದಿಸಿತ್ತು. ಬೆಂಗಳೂರಿನಲ್ಲಿ ಹೊಂದಿರುವ ಜಿಟಿ ಸಿನಿಮಾಸ್, 2019-20, 2020-21, 2021-22ರ ಹಣಕಾಸು ವರ್ಷಗಳಲ್ಲಿ ಅನೇಕ ದಿನಗಳ ಕಾಲ ತಮ್ಮ ಶಾಪಿಂಗ್ ಮಾಲ್ ಮುಚ್ಚಿತ್ತು. ಲಾಕ್‌ಡೌನ್ ವಿಸ್ತರಿಸಿದ್ದರಿಂದ ಆಹಾರ ಮಳಿಗೆಗಳು ಮತ್ತು ಚಿತ್ರಮಂದಿರಗಳಲ್ಲಿ ಜನರು ಇರಲಿಲ್ಲ. ಲಾಕ್‌ಡೌನ್ ವೇಳೆ ಶಾಪಿಂಗ್ ಮಾಲ್ ಮುಚ್ಚಿದ್ದರೂ, ಅದರ ನಿರ್ವಹಣೆಗೆ ಅನೇಕ ವೆಚ್ಚಗಳನ್ನು ಭರಿಸಬೇಕಿತ್ತು. ಹೀಗಿರುವಾಗ ಬಳಕೆಯಲ್ಲಿಲ್ಲದ ಮತ್ತು ಆದಾಯವಿಲ್ಲದ ಕಟ್ಟಡಕ್ಕೆ ತೆರಿಗೆ ವಿಧಿಸುವುದು ಸರಿಯಲ್ಲ ಎಂದು ಅದು ವಾದಿಸಿದೆ. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಭೂಮಿ ಮತ್ತು ಕಟ್ಟಡದ ಮೇಲೆ ತೆರಿಗೆ ವಿಧಿಸಿರುವುದು 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 27ಕ್ಕೆ ನಿಗದಿಪಡಿಸಲಾಗಿದೆ.