ಏರ್ ಇಂಡಿಯಾ ಮೇಲೆ 1.2 ಬಿಲಿಯನ್ ಡಾಲರ್ ತೂಗುಗತ್ತಿ: ಕೇರ್ನ್ ಎನರ್ಜಿಯಿಂದ ಮತ್ತೆ ಮೊಕದ್ದಮೆ

ಬ್ರಿಟನ್ ಮೂಲದ ಕೇರ್ನ್ ಎನರ್ಜಿ ಸಂಸ್ಥೆಯು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ನ್ಯಾಯ ನಿರ್ಣಯ ಮಂಡಳಿಯ ತೀರ್ಪಿನಂತೆ 1.2 ಬಿಲಿಯನ್ ಡಾಲರ್ ಪಾವತಿಸುವ ಕಾರ್ಯವನ್ನು ಆರಂಭಿಸುವ ಸಲುವಾಗಿ ಅದು ಕಾನೂನು ಸಮರ ನಡೆಸಿದೆ.

ಏರ್ ಇಂಡಿಯಾ ಮೇಲೆ 1.2 ಬಿಲಿಯನ್ ಡಾಲರ್ ತೂಗುಗತ್ತಿ: ಕೇರ್ನ್ ಎನರ್ಜಿಯಿಂದ ಮತ್ತೆ ಮೊಕದ್ದಮೆ
Linkup
ಮುಂಬಯಿ: ಭಾರತದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಮೇಲೆ ಬ್ರಿಟನ್ ಮೂಲದ ಕೇರ್ನ್ ಎನರ್ಜಿ ಸಂಸ್ಥೆ 1.2 ಬಿಲಿಯನ್ ಡಾಲರ್ ಮೌಲ್ಯದ ಹೂಡಿದೆ. ಈ ಪ್ರಕರಣದಲ್ಲಿ ಅದು ನ್ಯಾಯ ಪಂಚಾಯ್ತಿ ಮಂಡಳಿಯಲ್ಲಿ ತೆರಿಗೆ ವಿವಾದದ ಪ್ರಕರಣದಲ್ಲಿ ಜಯ ಕಂಡಿತ್ತು. ಕಳೆದ ಡಿಸೆಂಬರ್‌ನಲ್ಲಿ ನ್ಯಾಯ ನಿರ್ಣಯ ಮಂಡಳಿಯು ಬ್ರಿಟಿಷ್ ಸಂಸ್ಥೆ ಕೇರ್ನಸ್ ಎನರ್ಜಿ ಪರ ತೀರ್ಪು ನೀಡಿತ್ತು. ಸರ್ಕಾರ ಈಗ 1.2 ಬಿಲಿಯನ್ ಡಾಲರ್ ಪರಿಹಾರದ ಜತೆಗೆ ಬಡ್ಡಿ ಹಾಗೂ ವೆಚ್ಚವನ್ನು ಪಾವತಿಸುವ ಒತ್ತಡಕ್ಕೆ ಸಿಲುಕಿದೆ. ಭಾರತವು ಬ್ರಿಟನ್ ಜತೆಗಿನ ಹೂಡಿಕೆ ಒಪ್ಪಂದವನ್ನು ಉಲ್ಲಂಘಿಸಿದ್ದು, ಇದಕ್ಕಾಗಿ ಭಾರತ ಹಣ ಪಾವತಿ ಮಾಡಬೇಕಿದೆ ಎಂದು ನ್ಯಾಯಮಂಡಳಿ ತೀರ್ಪು ನೀಡಿತ್ತು. ಕೇರ್ನ್ ಎನರ್ಜಿ ಸಂಸ್ಥೆಯ ಅಮೆರಿಕದ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯವೊಂದರಲ್ಲಿ ದಾವೆ ಹೂಡಿದ್ದು, ತನ್ನ ಪರವಾಗಿ ಹೊರಬಿದ್ದಿದ್ದ ತೀರ್ಪಿನ ಅನ್ವಯ ಏರ್ ಇಂಡಿಯಾವನ್ನು ಬಾಧ್ಯಸ್ಥನನ್ನಾಗಿಸುವಂತೆ ಕೋರಿದೆ. 'ಭಾರತ ಹಾಗೂ ಏರ್ ಇಂಡಿಯಾ ನಡುವೆ ಅತ್ಯಲ್ಪ ಅಸ್ಪಷ್ಟ ಅಂತರವಿರುವುದು ಕಲ್ಪನೆಯಾಗಿದೆ ಮತ್ತು ಕೇರ್ನ್‌ನಂತಹ ಸಾಲದಾರರಿಂದ ತನ್ನ ಆಸ್ತಿಯನ್ನು ರಕ್ಷಿಸಿಕೊಳ್ಳಲು ಅಸಮರ್ಪಕವಾಗಿ ಪ್ರಯತ್ನಿಸುತ್ತಿದೆ' ಎಂದು ಕೇರ್ನ್ ವಾದಿಸಿದೆ. ಈ ಬಗ್ಗೆ ಏರ್ ಇಂಡಿಯಾ ಪ್ರತಿಕ್ರಿಯೆ ನೀಡಿಲ್ಲ. ಅಂತಹ ಮೊಕದ್ದಮೆ ಬಗ್ಗೆ ಈವರೆಗೂ ಸರ್ಕಾರ ಮತ್ತು ಏರ್ ಇಂಡಿಯಾಕ್ಕೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇರ್ನ್‌ನ ಮೊಕದ್ದಮೆಯು, ಈ ವರ್ಷದ ಅಂತ್ಯದೊಳಗೆ ಏರ್ ಇಂಡಿಯಾದಿಂದ ತನ್ನ ಎಲ್ಲ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುವ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯುಂಟುಮಾಡಿದೆ. ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಭಾರತ ಈಗಾಗಲೇ ಮೇಲ್ಮನವಿ ಸಲ್ಲಿಸಿದೆ. ಇನ್ನೊಂದೆಡೆ ಕೇರ್ನ್ ಎನರ್ಜಿ ಸಂಸ್ಥೆಯು ವಿದೇಶಗಳಲ್ಲಿನ ವಿಮಾನಗಳು, ಬ್ಯಾಂಕ್ ಖಾತೆಗಳು ಹಾಗೂ ಹಡಗುಗಳು ಸೇರಿದಂತೆ ಈ ತೀರ್ಪನ್ನು ಅನ್ವಯಿಸಲು ಭಾರತದ ಆಸ್ತಿಗಳನ್ನು ಗುರುತಿಸುವುದನ್ನು ಜನವರಿಯಲ್ಲಿ ಆರಂಭಿಸಿತ್ತು. ಜತೆಗೆ , ಬ್ರಿಟನ್, ನೆದರ್ಲ್ಯಾಂಡ್ಸ್ ಮತ್ತು ಕೆನಡಾಗಳಲ್ಲಿನ ಕೋರ್ಟ್‌ಗಳಲ್ಲಿ ಭಾರತದ ವಿರುದ್ಧ ದಾವೆಗಳನ್ನು ಹೂಡಲು ಆರಂಭಿಸಿದೆ.