ಎಲೆಕ್ಟ್ರಿಕ್‌ ಬದಲು ಪರ್ಯಾಯ ಇಂಧನವಾಗಿ 'ಹೈಡ್ರೋಜನ್‌' ಸೂಕ್ತ ಎಂದ ಮಾರುತಿ ಅಧ್ಯಕ್ಷ

ವಿಶ್ವಾದ್ಯಂತ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆ ಹೆಚ್ಚುತ್ತಿದ್ದು, ಬ್ಯಾಟರಿಗಳ ಸಲುವಾಗಿ ಲಿಥಿಯಂಗೆ ಬೇಡಿಕೆ ದಿನೇ ದಿನೆ ಹೆಚ್ಚುತ್ತಿದೆ. ಆದರೆ ಭಾರತದಲ್ಲಿ ಬೇಡಿಕೆಗೆ ತಕ್ಕಷ್ಟು ಲಿಥಿಯಂ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ಹೈಡ್ರೋಜನ್‌ ಪರ್ಯಾಯವಾಗಬಲ್ಲುದು ಎಂದು ಮಾರುತಿ ಸುಜುಕಿ ಅಧ್ಯಕ್ಷರು ಹೇಳಿದ್ದಾರೆ.

ಎಲೆಕ್ಟ್ರಿಕ್‌ ಬದಲು ಪರ್ಯಾಯ ಇಂಧನವಾಗಿ 'ಹೈಡ್ರೋಜನ್‌' ಸೂಕ್ತ ಎಂದ ಮಾರುತಿ ಅಧ್ಯಕ್ಷ
Linkup
ಹೊಸದಿಲ್ಲಿ: ಭಾರತದಲ್ಲಿ ಸಾರಿಗೆ ಇಂಧನವಾಗಿ ಭವಿಷ್ಯದಲ್ಲಿ ಹೈಡ್ರೋಜನ್‌ ಬಳಕೆ ಸೂಕ್ತ ಎಂದು ಅಧ್ಯಕ್ಷ ಆರ್‌.ಸಿ. ಭಾರ್ಗವ ತಿಳಿಸಿದ್ದಾರೆ. ವಿಶ್ವಾದ್ಯಂತ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆ ಹೆಚ್ಚುತ್ತಿದೆ. ಇದರ ಬ್ಯಾಟರಿಗಳ ತಯಾರಿಕೆಯ ಸಲುವಾಗಿ ಲಿಥಿಯಂಗೆ ಬೇಡಿಕೆ ದಿನೇ ದಿನೆ ಹೆಚ್ಚುತ್ತಿದೆ. ಆದರೆ ಭಾರತದಲ್ಲಿ ಬೇಡಿಕೆಗೆ ತಕ್ಕಷ್ಟು ಉತ್ಪಾದನೆಯಾಗುತ್ತಿಲ್ಲ. ಚಾರ್ಜಿಂಗ್‌ ಸ್ಟೇಷನ್‌ಗಳನ್ನೂ ವ್ಯಾಪಕವಾಗಿ ಅಳವಡಿಸಬೇಕಾಗಿದೆ. ಸದ್ಯಕ್ಕೆ ಲಿಥಿಯಂ ಮೇಲೆ ಚೀನಾದ ನಿಯಂತ್ರಣ ಹೆಚ್ಚು. ಈ ಎಲ್ಲ ಕಾರಣಗಳಿಂದ ಹೈಡ್ರೋಜನ್‌ ಅನ್ನು ಉತ್ಪಾದಿಸಿ ಸಾರಿಗೆ ವಾಹನಗಳಿಗೆ ಇಂಧನವಾಗಿ ಬಳಸುವುದು ಭಾರತಕ್ಕೆ ಪರ್ಯಾಯವಾಗಬಲ್ಲುದು ಎಂದು ಅವರು ಹೇಳಿದ್ದಾರೆ. ಐಐಟಿ-ಬಾಂಬೆಯ ಸಂಶೋಧನೆ ಐಐಟಿ-ಬಾಂಬೆಯಲ್ಲಿನ ಸಂಶೋಧಕರ ತಂಡವೊಂದು ಕಡಿಮೆ ವೆಚ್ಚದಲ್ಲಿ ಹೈಡ್ರೋಜನ್‌ ಉತ್ಪಾದಿಸಲು ಹೊಸ ಪ್ರಯೋಗ ನಡೆಸಿದೆ. ಅಯಸ್ಕಾಂತೀಯ ಶಕ್ತಿಯನ್ನು ಬಳಸಿಕೊಂಡು ಕಡಿಮೆ ಇಂಧನ ವೆಚ್ಚದಲ್ಲಿ ಹೈಡ್ರೋಜನ್‌ ಉತ್ಪಾದಿಸಬಹುದು ಎಂಬುದು ಈ ಸಂಶೋಧನೆಯ ತಿರುಳು. ನೀರಿನಲ್ಲಿ ಹೈಡ್ರೋಜನ್‌ ಮತ್ತು ಆಕ್ಸಿಜನ್‌ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ನೀರಿನಲ್ಲಿರುವ ಹೈಡ್ರೋಜನ್‌ ಮತ್ತು ಆಕ್ಸಿಜನ್‌ ಅನ್ನು ವಿಭಜಿಸಬಹುದು. ಆದರೆ ಈ ವಿಭಜನೆಗೇ ಹೆಚ್ಚಿನ ಇಂಧನ ಬೇಕು. ಆದ್ದರಿಂದ ಕಡಿಮೆ ವೆಚ್ಚದಲ್ಲಿ ಹೈಡ್ರೋಜನ್‌ ಉತ್ಪಾದಿಸಲು ಅಯಸ್ಕಾಂತೀಯ ಶಕ್ತಿ ಬಳಸಬಹುದು ಎಂದು ಐಐಟಿ ಬಾಂಬೆಯ ಸಂಶೋಧಕರ ತಂಡ ಹೇಳಿದೆ.