ಕ್ರಿಪ್ಟೋ ಕರೆನ್ಸಿ ಮೇಲೆ ಹೂಡಿಕೆ ಮಾಡ್ತಿದ್ದೀರಾ? ನೀವು ತಿಳಿಯಲೇಬೇಕಿರುವ ಮಾಹಿತಿ ಇಲ್ಲಿದೆ!

ಕ್ರಿಪ್ಟೋಕರೆನ್ಸಿ ಭವಿಷ್ಯದ ಹಣ ಎಂಬುದಾಗಿ ಜನರಲ್ಲಿ ಒಂದು ರೀತಿಯ ಕ್ರೇಜ್‌ ಹುಟ್ಟಿಸಿದೆ. ಆದರೆ, ಅದು ನಿಜವಾಗಿಯೂ ಹೂಡಿಕೆಗೆ ಸೂಕ್ತವಾದ ಮಾರ್ಗವೇ? ಎಲ್ಲಿವರೆಗೆ ಹೂಡಿಕೆ ಮಾಡಬಹುದು? ಈ ಕುರಿತ ಎಲ್ಲ ಮಾಹಿತಿ ಇಲ್ಲಿದೆ.

ಕ್ರಿಪ್ಟೋ ಕರೆನ್ಸಿ ಮೇಲೆ ಹೂಡಿಕೆ ಮಾಡ್ತಿದ್ದೀರಾ? ನೀವು ತಿಳಿಯಲೇಬೇಕಿರುವ ಮಾಹಿತಿ ಇಲ್ಲಿದೆ!
Linkup
ಹೊಸದಿಲ್ಲಿ: ಇತ್ತೀಚೆಗೆ ಎಲ್ಲಿ ನೋಡಿದರೂ ಕ್ರಿಪ್ಟೋಕರೆನ್ಸಿಯದ್ದೇ ಚರ್ಚೆ. ಜಾಗತಿಕವಾಗಿ ಅಷ್ಟೇ ಅಲ್ಲ ಭಾರತದಲ್ಲಿ ಕೂಡ ಈ ಕುರಿತ ಚರ್ಚೆ ವ್ಯಾಪಕವಾಗಿದೆ. ಬಿಡುಗಡೆಯಾಗಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಖ್ಯಾತ ನಟರು, ಉದ್ಯಮಿಗಳು ಎಲ್ಲರ ಬಾಯಲ್ಲೂ ಕ್ರಿಪ್ಟೋಕರೆನ್ಸಿಯದ್ದೇ ಮಾತು. ನೀವೂ ಕೂಡ ಮೇಲೆ ಮಾಡಬೇಕು ಎಂದುಕೊಂಡಿದ್ದರೆ, ಅದಕ್ಕೂ ಮೊದಲು ತಿಳಿದುಕೊಳ್ಳಲೇಬೇಕಿರುವ ಹಲವು ಸಂಗತಿಗಳು ಇಲ್ಲಿವೆ. ಪ್ರತಿಯೊಬ್ಬರೂ ಕ್ರಿಪ್ಟೋಕರೆನ್ಸಿ ಬಗ್ಗೆ ಮಾತನಾಡುವಂತಾಗಿದೆ. ಅಲ್ಲದೆ, ಇದು ಭವಿಷ್ಯದ ಹಣ ಎಂಬುದಾಗಿ ಜನರಲ್ಲಿ ಒಂದು ರೀತಿಯ ಕ್ರೇಜ್‌ ಹುಟ್ಟಿಸಿದೆ. ಆದರೆ, ಅದು ನಿಜವಾಗಿಯೂ ಹೂಡಿಕೆಗೆ ಸೂಕ್ತವಾದ ಮಾರ್ಗವೇ? ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದೇ ಆದರೆ, ಇದರಲ್ಲಿ ಎಲ್ಲಿವರೆಗೆ ಹೂಡಿಕೆ ಮಾಡಬಹುದು? ಎಂದು ಯೋಚಿಸಲೇಬೇಕು. ಪ್ರಸ್ತುತ ಕೆಲವು ಕ್ರಿಪ್ಟೋಕರೆನ್ಸಿಗಳು ಹೆಚ್ಚು ಮೌಲ್ಯ ಹೊಂದಿವೆ. ಆದರೆ, ಅವುಗಳ ಮೌಲ್ಯ ಸ್ಥಿರವಾಗಿರುತ್ತದೆ ಎಂದು ಹೇಳಲಾಗದು. ಮಾರುಕಟ್ಟೆ ಕುಸಿತದ ಜತೆಗೆ ಕ್ರಿಪ್ಟೋಕರೆನ್ಸಿ ಮೌಲ್ಯ ಕೂಡ ಕುಸಿತಕ್ಕೆ ಒಳಗಾಗುತ್ತದೆ. ಹಾಗಾದರೆ, ಒಬ್ಬ ವ್ಯಕ್ತಿ ಈ ವರ್ಚುವಲ್ ನಾಣ್ಯಗಳಲ್ಲಿ ಹೂಡಿಕೆ ಮಾಡಬೆಂದು ನಿರ್ಧರಿಸುವುದಾದರೂ ಹೇಗೆ? ಇದಕ್ಕೆ ಎಲಾನ್ ಮಸ್ಕ್‌ ಅವರು ಇದು ವಿಶ್ವದ ಭವಿಷ್ಯದ ಕರೆನ್ಸಿ ಆಗಬಹುದು ಎಂದು ಉತ್ತರಿಸಿದ್ದಾರೆ. ಪ್ರಸ್ತುತ, ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕ್ರಿಪ್ಟೋಕರೆನ್ಸಿ ಕಾನೂನುಬದ್ಧತೆ ಹೊಂದಿಲ್ಲ. ಏಕೆಂದರೆ ಕ್ರಿಪ್ಟೋಕರೆನ್ಸಿಗಳು ಖಾಸಗಿಯಾಗಿ ರಚಿಸಲ್ಪಟ್ಟಿವೆ. ಅಲ್ಲದೆ, ಈ ನಾಣ್ಯಗಳಿಂದ ಮುಂದೆ ಆಗಬಹುದಾದ ತೊಂದರೆಗಳನ್ನು ಅಂದಾಜು ಮಾಡಲಾಗದು. ಇದರಿಂದಾಗಿಯೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನದೇ ಕ್ರಿಪ್ಟೋ ನಾಣ್ಯವನ್ನು ಯೋಜಿಸುತ್ತಿದೆ. ಈ ನಾಣ್ಯವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿಯೂ ತಿಳಿಸಿದೆ. ಕ್ರಿಪ್ಟೋಕರೆನ್ಸಿಗಳು ಕಾನೂನಿನ ಮಾನ್ಯತೆ ಪಡೆದಿಲ್ಲ ಎಂದ ಮಾತ್ರಕ್ಕೆ, ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದು ಕಾನೂನುಬಾಹಿರವಲ್ಲ. ದೇಶದಲ್ಲಿ ಅನೇಕ ಆನ್‌ಲೈನ್ ಎಕ್ಸ್‌ಚೇಂಜ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. CoinDCX ಮತ್ತು WazirX ನಂತೆ - ಕ್ರಿಪ್ಟೋ ಕರೆನ್ಸಿ ವಿನಿಮಯ ಮಾಡುವ ಹಲವು ಏಜೆನ್ಸಿಗಳಿವೆ. ಕ್ರಿಪ್ಟೋಕರೆನ್ಸಿ ಲಾಭಗಳು ಕ್ರಿಪ್ಟೋಕರೆನ್ಸಿ ಕುರಿತು ಏನೇ ಚರ್ಚೆಗಳಿದ್ದರೂ., ಪ್ರಸ್ತುತ ಹೆಚ್ಚು ಲಾಭದಾಯಕ ಹೂಡಿಕೆಯ ಮಾರ್ಗ ಎನಿಸಿದೆ. ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಷೇರುಮಾರುಕಟ್ಟೆ ಚೇತರಿಕೆ ಕಂಡಾಗ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ಹಲವರು ಭಾರೀ ಪ್ರಮಾಣದ ಆದಾಯ ಗಳಿಸಿದರು. ಉದಾಹರಣೆಗೆ 2020-21 ಹಣಕಾಸು ವರ್ಷದಲ್ಲಿ ಬಿಟ್‌ಕಾಯಿನ್ ಶೇ. 800ರಷ್ಟು ಆದಾಯ ನೀಡಿದೆ. 2020ರ ಏಪ್ರಿಲ್‌ನಲ್ಲಿ ಮೌಲ್ಯ ಸುಮಾರು $ 6,640 ರಷ್ಟಿತ್ತು. ಆದರೆ ಈ ವರ್ಷದ ಏಪ್ರಿಲ್ ವೇಳೆಗೆ ಅದು $ 65,000 ಕ್ಕೆ ಸಮೀಪಿಸಿದೆ. ಇತರ ಹೆಚ್ಚಿನ ನಾಣ್ಯಗಳು ಅವುಗಳ ಬೆಲೆಯಲ್ಲಿ ಏರಿಕೆಗೆ ಸಾಕ್ಷಿಯಾಗಿದ್ದು, ಹೂಡಿಕೆದಾರರಿಗೆ ಉತ್ತಮ ಲಾಭವನ್ನು ನೀಡಿದೆ. ಕ್ರಿಪ್ಟೋಕರೆನ್ಸಿಯ ಅಪಾಯಗಳು ಕ್ರಿಪ್ಟೋಕರೆನ್ಸಿ ಮೌಲ್ಯ ಸ್ಥಿರವಾಗಿರುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಏಪ್ರಿಲ್ ಅಂತ್ಯದಲ್ಲಿ, ಕ್ರಿಪ್ಟೋ ಮಾರುಕಟ್ಟೆ ಕುಸಿದಿದೆ. ಬಹುತೇಕ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಇಳಿಕೆಯಾಗಿತ್ತು. ಬಿಟ್‌ಕಾಯಿನ್ ಮೌಲ್ಯ $30,000 ಕ್ಕಿಂತ ಕಡಿಮೆಯಾಯಿತು. ಆದರೆ, ನಂತರ ಅದು $40,000ಗೆ ಚೇತರಿಸಿಕೊಂಡಿತು. ಹೀಗಾಗಿ ಹೂಡಿಕೆದಾರರು ಹಣ ಕಳೆದುಕೊಳ್ಳುವ ಅಪಾಯವೂ ಇದೆ. ಇನ್ನೊಂದು ನ್ಯೂನತೆಯೆಂದರೆ ಕ್ರಿಪ್ಟೋಕರೆನ್ಸಿಯನ್ನು ಸರಕು ಮತ್ತು ಸೇವೆಗಳಿಗೆ ಪಾವತಿಸಲು ಭೌತಿಕ ಕರೆನ್ಸಿಯಷ್ಟು ವ್ಯಾಪಕವಾಗಿ ಬಳಸಲಾಗುವುದಿಲ್ಲ.