ಮೈಸೂರಿಗೆ ಬರಲಿದ್ದಾರೆ 'ಅಕ್ಕಿನೇನಿ' ಫ್ಯಾಮಿಲಿಯ ನಾಗಾರ್ಜುನ-ನಾಗ ಚೈತನ್ಯ! ಕಾರಣವೇನು?

ಅಕ್ಕಿನೇನಿ ಕುಟುಂಬವು ಈಚೆಗೆ ಕೆಲ ನೆಗೆಟಿವ್ ವಿಚಾರಗಳಿಗ ಸುದ್ದಿಯಾಗುತ್ತಿದೆ. ಆದರೆ, ಈ ಬಗ್ಗೆ ಎಲ್ಲಿಯೂ ಕುಟುಂಬದ ಯಾರೊಬ್ಬರೂ ಕೂಡ ಪ್ರತಿಕ್ರಿಯೆ ನೀಡಿಲ್ಲ. ಈ ಮಧ್ಯೆ ಅಕ್ಕಿನೇನಿ ನಾಗಾರ್ಜುನ ಮತ್ತು ನಾಗ ಚೈತನ್ಯ ಮೈಸೂರಿಗೆ ಎಂಟ್ರಿ ನೀಡಲಿದ್ದಾರೆ.

ಮೈಸೂರಿಗೆ ಬರಲಿದ್ದಾರೆ 'ಅಕ್ಕಿನೇನಿ' ಫ್ಯಾಮಿಲಿಯ ನಾಗಾರ್ಜುನ-ನಾಗ ಚೈತನ್ಯ! ಕಾರಣವೇನು?
Linkup
ಅಕ್ಕಿನೇನಿ ಫ್ಯಾಮಿಲಿ ಈಚೆಗೆ ಒಂದಷ್ಟು ನೆಗೆಟಿವ್ ವಿಚಾರಗಳಿಗೆ ಸುದ್ದಿಯಾಗುತ್ತಿದೆ. ಆದರೆ, ಅದರ ಮಧ್ಯೆಯೂ ಒಂದಷ್ಟು ಒಳ್ಳೆಯ ವಿಚಾರಗಳು ಕೂಡ ಈ ಫ್ಯಾಮಿಲಿಯೊಳಗೆ ಕೇಳಿಬಂದಿವೆ. ಕೆಲ ದಿನಗಳ ಹಿಂದಷ್ಟೇ ಅವರ ಹುಟ್ಟುಹಬ್ಬ ನಡೆಯಿತು. ಅಂದು ಅವರ ಎರಡು ಹೊಸ ಸಿನಿಮಾಗಳು ಘೋಷಣೆಯಾದವು. ಒಂದು 'ಬಂಗಾರರಾಜು', ಮತ್ತೊಂದು 'ಘೋಸ್ಟ್‌'. ಇದೀಗ ನಾಗಾರ್ಜುನ ಮತ್ತು ಅವರ ಪುತ್ರ ನಾಗಚೈತನ್ಯ ಮೈಸೂರಿಗೆ ಆಗಮಿಸುವ ಕುರಿತು ಸುದ್ದಿಯೊಂದು ಕೇಳಿಬಂದಿದೆ. ಅದಕ್ಕೆ ಕಾರಣವೇನು? ಮುಂದೆ ಓದಿ. ಮೈಸೂರಿನಲ್ಲಿ 'ಬಂಗಾರರಾಜು' ಶೂಟಿಂಗ್ನಾಗಾರ್ಜುನ ಈಗ ಶುರು ಮಾಡಿರುವ 'ಬಂಗಾರರಾಜು' ಸಿನಿಮಾವು 2016ರಲ್ಲಿ ತೆರೆಕಂಡ 'ಸೊಗ್ಗಾಡೆ ಚಿನ್ನಿನಾಯನಾ' ಸಿನಿಮಾದ ಸಿಕ್ವೇಲ್ ಆಗಿದೆ. ಅಂದು 'ಸೊಗ್ಗಾಡೆ ಚಿನ್ನಿನಾಯನಾ' ಸಿನಿಮಾವನ್ನು ಮೈಸೂರು, ಮಂಡ್ಯ ಸುತ್ತಮುತ್ತ ಶೂಟಿಂಗ್ ಮಾಡಲಾಗಿತ್ತು. ಮಂಡ್ಯದ ಕೆರೆ ತೊಣ್ಣೂರಿನ ಐತಿಹಾಸಿಕ ವಿಷ್ಣು ದೇವಾಲಯದಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡಲಾಗಿತ್ತು. 'ಬಂಗಾರರಾಜು' ಸಿನಿಮಾವು 'ಸೊಗ್ಗಾಡೆ ಚಿನ್ನಿನಾಯನಾ' ಸಿಕ್ವೇಲ್‌ ಆಗಿರುವುದರಿಂದ, ಮತ್ತೊಮ್ಮೆ ಶೂಟಿಂಗ್‌ಗೆ ಇಲ್ಲಿಗೆ ಬರುವುದಕ್ಕೆ ಸಜ್ಜಾಗಿದೆ ಅಕ್ಕಿನೇನಿ ಕುಟುಂಬ. ನಾಗಾರ್ಜುನ ನಿರ್ಮಿಸಿ, ನಟಿಸಿದ್ದ 'ಸೊಗ್ಗಾಡೆ ಚಿನ್ನಿನಾಯನಾ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ರಮ್ಯಾ ಕೃಷ್ಣ, ಲಾವಣ್ಯಾ ತ್ರಿಪಾಠಿ, ಸಂಪತ್ ರಾಜ್, ನಾಗೇಂದ್ರ ಬಾಬು ಮುಂತಾದವರು ನಟಿಸಿದ್ದರು. ಅತಿಥಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಇದೀಗ ಅದರ ಮುಂದುವರಿದ ಭಾಗದಲ್ಲಿ ನಾಗಾರ್ಜುನ ಜೊತೆಗೆ ಅವರ ಪುತ್ರ ಕೂಡ ಸೇರ್ಪಡೆಗೊಂಡಿದ್ದಾರೆ. ಆಗಸ್ಟ್ 2ರಂದು ಶೂಟಿಂಗ್ ಶುರುವಾಗಿದ್ದು, ಹೈದರಾಬಾದ್‌ನಲ್ಲಿ ಮೊದಲ ಹಂತದ ಶೂಟಿಂಗ್ ಮುಕ್ತಾಯಗೊಂಡಿದೆ. ಇದೀಗ ಬಹುಮುಖ್ಯವಾದ ದೃಶ್ಯಗಳ ಶೂಟಿಂಗ್‌ಗಾಗಿ ಮೈಸೂರಿಗೆ ಬರಲಿದ್ದಾರೆ ನಾಗಾರ್ಜುನ ಮತ್ತು ಅವರ ಪುತ್ರ. ಇನ್ನು, ಈ ಸಿನಿಮಾದಲ್ಲಿ ರಮ್ಯಾ ಕೃಷ್ಣ ಕೂಡ ಕಾಣಿಸಿಕೊಳ್ಳಲಿದ್ದಾರೆ. 'ಉಪ್ಪೆನ' ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ನಟಿ ಕೃತಿ ಶೆಟ್ಟಿ, ನಾಗ ಚೈತನ್ಯಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಸೊಗ್ಗಾಡೆ ಚಿನ್ನಿನಾಯನಾ' ನಿರ್ದೇಶಿಸಿದ್ದ ಕಲ್ಯಾಣ್ ಕೃಷ್ಣ ಅವರೇ ಈ ಸಿನಿಮಾಗೂ ನಿರ್ದೇಶನ ಮಾಡಲಿದ್ದಾರೆ. ದರ್ಶನಾ ಬನೀಕ್, ಅಕ್ಷತಾ ಸೋನವಾನೆ ಅವರು ಚಿತ್ರದಲ್ಲಿದ್ದಾರೆ. ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಜೀ ಸ್ಟುಡಿಯೋಸ್‌ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿವೆ.