'ಮಗಳ ಪಾತ್ರ ಮಾಡಿದ ನಟಿ ಜೊತೆ ರೊಮ್ಯಾನ್ಸ್ ಮಾಡಲಾರೆ'- ನಟ ವಿಜಯ್ ಸೇತುಪತಿ! ಯಾರು ಆ ನಟಿ?

ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ ವಿಜಯ್ ಸೇತುಪತಿ, ಈಗ ಹಿಂದಿ ಚಿತ್ರರಂಗಕ್ಕೂ ಎಂಟ್ರಿ ನೀಡಿದ್ದಾರೆ. ಈ ಮಧ್ಯೆ ಅವರ ಒಂದು ಹೇಳಿಕೆ ಭಾರಿ ಸಂಚಲನ ಉಂಟು ಮಾಡಿದೆ. ಆ ಕುರಿತು ಇಲ್ಲಿದೆ ಮಾಹಿತಿ.

'ಮಗಳ ಪಾತ್ರ ಮಾಡಿದ ನಟಿ ಜೊತೆ ರೊಮ್ಯಾನ್ಸ್ ಮಾಡಲಾರೆ'- ನಟ ವಿಜಯ್ ಸೇತುಪತಿ! ಯಾರು ಆ ನಟಿ?
Linkup
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟರಲ್ಲಿ ಕೂಡ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ಅವರು ಸದಾ ಬ್ಯುಸಿ ಇರುತ್ತಾರೆ ಕೂಡ. ತಮಿಳು ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಅವರು ಆಗಾಗ ಕಾಣಿಸಿಕೊಳ್ಳುತ್ತಾರೆ. ಸದ್ಯ ಹಿಂದಿಯತ್ತಲೂ ಅವರು ಮುಖ ಮಾಡಿದ್ದಾರೆ. ಇದೀಗ ಅವರ ಒಂದು ಹೇಳಿಕೆ ಸಖತ್ ವೈರಲ್ ಆಗಿದೆ. ಅದೇನೆಂದರೆ, 'ಮಗಳ ಪಾತ್ರ ಮಾಡಿದ ನಟಿ ಜೊತೆ ರೊಮ್ಯಾನ್ಸ್ ಮಾಡಲಾರೆ' ಎಂಬುದು. ಅಷ್ಟಕ್ಕೂ ಅವರು ಹೀಗೇಕೆ ಹೇಳಿದ್ರು? ಆ ನಟಿ ಯಾರು? ಮುಂದೆ ಓದಿ. ಜೊತೆ ಸಿನಿಮಾ ಮಾಡಿದ್ದ ವಿಜಯ್ ಸೇತುಪತಿ ತೆಲುಗಿನ 'ಉಪ್ಪೆನ' ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿ. ಅದು ಅವರ ಮೊದಲ ಸಿನಿಮಾ ಕೂಡ ಆಗಿತ್ತು. ಅದೇ ಥರ ವೈಷ್ಣವ್ ತೇಜ್‌ಗೂ ಅದು ಚೊಚ್ಚಲ ಸಿನಿಮಾ. 'ಉಪ್ಪೆನ'ದಲ್ಲಿ ಕೃತಿ ಶೆಟ್ಟಿಯ ತಂದೆಯ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು. ಸಖತ್ ರಗಡ್‌ ಶೈಲಿಯ ಪಾತ್ರವದು. ತಂದೆ-ಮಗಳ ದೃಶ್ಯಗಳು ಸಖತ್ ಹೈಲೈಟ್ ಆಗಿದ್ದವು. ಆದರೆ, ಈಚೆಗೆ ಇವರಿಬ್ಬರನ್ನು ನಾಯಕ-ನಾಯಕಿಯನ್ನಾಗಿಸಿ ತಮಿಳು ಸಿನಿಮಾವೊಂದನ್ನು ಮಾಡುವುದಕ್ಕೆ ನಿರ್ಮಾಪಕರೊಬ್ಬರು ಮನಸ್ಸು ಮಾಡಿದ್ದರಂತೆ. ಆದರೆ, ಅದನ್ನು ನಿರಾಕರಿಸಿದ್ದಾರೆ ವಿಜಯ್‌. ತೆಲುಗಿನಲ್ಲಿ ಬ್ಯುಸಿ ಇರುವ ಕೃತಿಯನ್ನು ವಿಜಯ್ ಸೇತುಪತಿ ಹೀರೋ ಆಗಿರುವ ತಮಿಳು ಸಿನಿಮಾದಲ್ಲಿ ನಾಯಕಿಯನ್ನಾಗಿ ಪರಿಚಯಿಸಬೇಕು ಎಂಬುದು ನಿರ್ಮಾಪಕರ ಉದ್ದೇಶವಾಗಿತ್ತು. ಈ ಬಗ್ಗೆ ಮಾತನಾಡಿರುವ ವಿಜಯ್ ಸೇತುಪತಿ, 'ನಾನು ಮತ್ತು ಕೃತಿ ತಂದೆ-ಮಗಳಾಗಿ ಉಪ್ಪೆನ ಸಿನಿಮಾದಲ್ಲಿ ನಟಿಸಿದ್ದು ಆ ತಂಡಕ್ಕೆ ಗೊತ್ತಿರಲಿಲ್ಲ. ಹಾಗಾಗಿ, ಒಮ್ಮೆ ಮಗಳೆಂದು ಕಲ್ಪಿಸಿಕೊಂಡ ನಟಿಯ ಜೊತೆಗೆ ನಾನು ಹೇಗೆ ರೊಮ್ಯಾನ್ಸ್ ಮಾಡಲಿ ಎಂದು ಅವರಿಗೆ ಪ್ರಶ್ನಿಸಿದೆ. ಉಪ್ಪೆನ ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟಿಂಗ್ ಮಾಡುವಾಗ, ನನ್ನನ್ನು ನಿನ್ನ ತಂದೆ ಎಂದು ಕಲ್ಪಿಸಿಕೋ ಎಂದು ಕೃತಿಗೆ ಹೇಳಿದ್ದೆ. ಆ ಸಿನಿಮಾ ಮಾಡುವಾಗ ನನ್ನ ಮಗನಿಗೆ 15 ವರ್ಷ. ಕೃತಿಗಿಂತ ಸ್ವಲ್ಪ ಚಿಕ್ಕವನು. ನಾನು ಕೂಡ ಕೃತಿಯನ್ನು ಮಗಳಂತೆ ಭಾವಿಸಿದ್ದೇನೆ. ನಾನೆಂದಿಗೂ ತೆರೆಮೇಲೆ ಕೃತಿ ಜೊತೆಗೆ ರೊಮ್ಯಾನ್ಸ್ ಮಾಡುವುದಿಲ್ಲ' ಎಂದು ಹೇಳಿದ್ದಾರೆ. ವಿಜಯ್ ಅವರ ಈ ಮಾತಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು, ವಿಜಯ್ ಅವರ ಸಿನಿಮಾಗಳು ಒಂದು ಕಡೆ ಸಾಲು ಸಾಲಾಗಿ ರಿಲೀಸ್ ಆಗುತ್ತಿದ್ದರೆ, ಮತ್ತೊಂದೆಡೆ ಒಂದರ ಹಿಂದೊಂದು ಸೆಟ್ಟೇರುತ್ತಿವೆ. ಶ್ರುತಿ ಹಾಸನ್ ಜೊತೆಗೆ ವಿಜಯ್ ಸೇತುಪತಿ ನಟಿಸಿರುವ 'ಲಾಭಂ' ಸೆ.9ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಂಡರೆ, ಮರುದಿನ ಅವರ 'ತುಘಲಕ್ ದರ್ಬಾರ್' ಸಿನಿಮಾವು ನೇರವಾಗಿ ಕಿರುತೆರೆಯಲ್ಲಿ ಪ್ರದರ್ಶನಗೊಳ್ಳಲಿದೆ. ಆದಾದ ಒಂದು ವಾರಕ್ಕೆ ಸರಿಯಾಗಿ ತಾಪ್ಸೀ ಪನ್ನು ಜೊತೆಗಿನ 'ಅನ್ನಬೆಲ್ ಸೇತುಪತಿ' ಸಿನಿಮಾವು ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಇದರ ಜೊತೆಗೆ 10ಕ್ಕೂ ಹೆಚ್ಚು ವಿಜಯ್ ಸೇತುಪತಿ ಅವರ ಸಿನಿಮಾಗಳ ಕೆಲಸಗಳು ಚಾಲ್ತಿಯಲ್ಲಿವೆ.