'ಪುನೀತ್‌ ಓದಿಸುತ್ತಿದ್ದ 1800 ವಿದ್ಯಾರ್ಥಿಗಳ ಜವಾಬ್ದಾರಿ ಇನ್ನುಮುಂದೆ ನನ್ನದು'- ನಟ ವಿಶಾಲ್‌

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಒಬ್ಬ ಸೂಪರ್ ಸ್ಟಾರ್ ಆಗಿ ಮಾತ್ರವಲ್ಲ, ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಕೊಂಡಿದ್ದರು. ಸಾವಿರಾರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರು. ಇದೀಗ ಆ ಬಗ್ಗೆ ವಿಶಾಲ್ ಒಂದು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ.

'ಪುನೀತ್‌ ಓದಿಸುತ್ತಿದ್ದ 1800 ವಿದ್ಯಾರ್ಥಿಗಳ ಜವಾಬ್ದಾರಿ ಇನ್ನುಮುಂದೆ ನನ್ನದು'- ನಟ ವಿಶಾಲ್‌
Linkup
'ಪವರ್ ಸ್ಟಾರ್‌' ಅವರಿಗೆ ಪರಭಾಷೆಯಲ್ಲೂ ಅಪಾರ ಸ್ನೇಹಿತರಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಕ್ಕ ಪಕ್ಕದ ರಾಜ್ಯಗಳ ಸೆಲಬ್ರಿಟಿಗಳು ಓಡೋಡಿ ಬಂದಿದ್ದೇ ಇದಕ್ಕೆ ಸಾಕ್ಷಿ. ಇದೀಗ ನಟ ಕೂಡ ಪುನೀತ್ ಬಗ್ಗೆ ಮಾತನಾಡಿದ್ದಾರೆ. ಪುನೀತ್ ಅವರು ಮಾಡುತ್ತಿದ್ದ ಸಾಮಾಜಿಕ ಕೆಲಸಗಳನ್ನು ಕೊಂಡಾಡಿದ ಅವರು, ಒಂದು ಪ್ರತಿಜ್ಞೆ ಮಾಡಿದ್ದಾರೆ. ಅದೇನೆಂದರೆ, 'ಪುನೀತ್ ಉಚಿತವಾಗಿ ಶಿಕ್ಷಣ ಕೊಡಿಸುತ್ತಿದ್ದ 1800 ಮಕ್ಕಳ ಜವಾಬ್ದಾರಿ ಇನ್ನುಮುಂದೆ ನನ್ನದು' ಎಂದು ಬಹಿರಂಗ ವೇದಿಕೆಯಲ್ಲಿ ಘೋಷಣೆ ಮಾಡಿದ್ದಾರೆ ವಿಶಾಲ್‌! ಎನಿಮಿ ಪ್ರಿ-ರಿಲೀಸ್ ಇವೆಂಟ್‌ನಲ್ಲಿ ವಿಶಾಲ್‌ ಮಾತುವಿಶಾಲ್ ಮತ್ತು ಆರ್ಯ ನಟಿಸಿರುವ 'ಎನಿಮಿ' ಸಿನಿಮಾದ ಪ್ರಿ-ರಿಲೀಸ್ ಇವೆಂಟ್‌ ಹೈದರಾಬಾದ್‌ನಲ್ಲಿ ನಡೆಯುತ್ತಿತ್ತು. ಆ ವೇಳೆ ಪುನೀತ್ ಫೋಟೋಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ವಿಶಾಲ್, 'ಈ ಕಾರ್ಯಕ್ರಮವನ್ನು ತುಂಬ ಅಳುಕಿನಿಂದಲೇ ಮಾಡುತ್ತಿದ್ದೇವೆ. ಪುನೀತ್ ಅವರ ಸಾವಿನ ಸುದ್ದಿ ಕೇಳಿದಾಗಿನಿಂದ ಆ ಶಾಕ್‌ನಿಂದ ಹೊರಬರಲು ಆಗಿಲ್ಲ. ಪುನೀತ್ ರಾಜ್‌ಕುಮಾರ್ ಬರೀ ಉತ್ತಮ ನಟರು ಮಾತ್ರವಲ್ಲ, ಉತ್ತಮ ಸ್ನೇಹಿತ ಕೂಡ. ಅಂಥ ಸರಳವಾಗಿರುವ ಸೂಪರ್ ಸ್ಟಾರ್ ನಟನನ್ನು ನಾನು ನೋಡಿಯೇ ಇಲ್ಲ. ಅವರು ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದರು. ಪುನೀತ್ ಅವರಿಂದಾಗಿ ಉಚಿತ ಶಿಕ್ಷಣ ಪಡೆಯುತ್ತಿದ್ದ ಸುಮಾರು 1800 ಮಕ್ಕಳ ಜವಾಬ್ದಾರಿಯನ್ನು ಮುಂದಿನ ವರ್ಷದಿಂದ ನಾನು ವಹಿಸಿಕೊಳ್ಳುತ್ತೇನೆ. ನಾನು ಪ್ರಮಾಣ ಮಾಡುತ್ತಿದ್ದೇನೆ..' ಎಂದು ಹೇಳಿದ್ದಾರೆ. ವಿಶಾಲ್‌ಗೆ ಅಭಿನಂದನೆಮೂಲತಃ ಕರ್ನಾಟಕದವರೇ ಆದ ವಿಶಾಲ್ ತೆಲುಗು ಭಾಷಿಕರು. ಆದರೆ, ಸ್ಟಾರ್ ಆಗಿ ಮಿಂಚುತ್ತಿರುವುದು ತಮಿಳುನಾಡಿನಲ್ಲಿ. ಕರ್ನಾಟಕದ ಸ್ಟಾರ್‌ಗಳ ಜತೆಗೆ ಅವರಿಗೆ ಉತ್ತಮ ಒಡನಾಟ ಇದೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಆಪ್ತ ಒಡನಾಟ ಹೊಂದಿದ್ದರು. ಬೆಂಗಳೂರಿಗೆ ಬಂದಾಗೆಲ್ಲ ಪುನೀತ್ ಮನೆಗೆ ಬಂದು ಹೋಗುತ್ತಿದ್ದರು. ಈ ಬಗ್ಗೆ ಎಲ್ಲ ವಿಶಾಲ್ ವೇದಿಕೆ ಮೇಲೆ ಮಾತನಾಡಿದ್ದಾರೆ. ಇನ್ನು, ವಿಶಾಲ್ ತೆಗೆದುಕೊಂಡ ಪ್ರತಿಜ್ಞೆಯಿಂದಾಗಿ ಕನ್ನಡಿಗರು ಅವರನ್ನು ಕೊಂಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ವಿಶಾಲ್‌ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮರೆಯಾದ ದೊಡ್ಮನೆ ಹುಡ್ಗಪುನೀತ್ ರಾಜ್‌ಕುಮಾರ್ ಅವರು ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನರಾದರು. ಫಿಟ್‌ನೆಸ್‌ ಬಗ್ಗೆ ಸಾಕಷ್ಟು ಗಮನ ನೀಡುತ್ತಿದ್ದ ಪುನೀತ್‌ ಅವರಂತಹ ಆರೋಗ್ಯವಂತಹ ವ್ಯಕ್ತಿಯೇ ನಿಧನರಾಗಿದ್ದು ಬೇಸರ ಮೂಡಿಸಿತ್ತು. ಅವರ ಪುತ್ರಿ ವಿದೇಶದಲ್ಲಿದ್ದ ಕಾರಣ, ಅಕ್ಟೋಬರ್ 31ರಂದು ಪುನೀತ್ ಅವರ ಅಂತ್ಯಕ್ರಿಯೆ ಮಾಡಲಾಯ್ತು. ಶುಕ್ರವಾರ (ಅ.29) ಸಂಜೆಯಿಂದ ಭಾನುವಾರ (ಅ.31) ಮುಂಜಾನೆವರೆಗೂ ಪುನೀತ್ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅ.31ರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಂತ್ಯಕ್ರಿಯೆ ಮಾಡಲಾಯಿತು.