ಮಾನೆಟೈಸೇಷನ್‌ ಅಂದರೆ ಏನೆಂದು ರಾಹುಲ್‌ಗೆ ಗೊತ್ತಾ? ಕಾಂಗ್ರೆಸ್‌ ನಾಯಕನ ವಿರುದ್ಧ ನಿರ್ಮಲಾ ಕಿಡಿ

ರಾಹುಲ್‌ ಗಾಂಧಿಗೆ ಮಾನೆಟೈಸೇಷನ್‌ ಅಂದರೆ ಏನು ಎಂದು ಅರ್ಥವಾಗಿದೆಯಾ? ಎಂದು ಪ್ರಶ್ನಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ದೇಶದ ಆಸ್ತಿಗಳನ್ನು ಮಾರಿ ಅದರಲ್ಲಿ ಕಿಕ್‌ಬ್ಯಾಕ್‌ ಪಡೆದಿದ್ದು ಕಾಂಗ್ರೆಸ್‌ ಎಂದು ಟೀಕಿಸಿದ್ದಾರೆ.

ಮಾನೆಟೈಸೇಷನ್‌ ಅಂದರೆ ಏನೆಂದು ರಾಹುಲ್‌ಗೆ ಗೊತ್ತಾ? ಕಾಂಗ್ರೆಸ್‌ ನಾಯಕನ ವಿರುದ್ಧ ನಿರ್ಮಲಾ ಕಿಡಿ
Linkup
ಹೊಸದಿಲ್ಲಿ: ಸೋಮವಾರ ಯೋಜನೆ ಘೋಷಣೆ ಮಾಡಿದ ಕೇಂದ್ರ ಹಣಕಾಸು ಸಚಿವೆ , ಈ ಯೋಜನೆ ವಿರೋಧಿಸಿದ್ದ ಕಾಂಗ್ರೆಸ್‌ ನಾಯಕ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾನೆಟೈಸೇಷನ್‌ ಯೋಜನೆಯನ್ನು ತೀವ್ರವಾಗಿ ಟೀಕಿಸಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಿರ್ಮಲಾ ಸೀತಾರಾಮನ್‌, "ಆತನಿಗೆ (ರಾಹುಲ್‌ ಗಾಂಧಿ) ಮಾನೆಟೈಸೇಷನ್‌ ಅಂದರೆ ಏನು ಎಂದು ಅರ್ಥವಾಗಿದೆಯಾ? ದೇಶದ ಆಸ್ತಿಗಳನ್ನು ಮಾರಿ ಅದರಲ್ಲಿ ಕಿಕ್‌ಬ್ಯಾಕ್‌ ಪಡೆದಿದ್ದು ಕಾಂಗ್ರೆಸ್‌,” ಎಂದು ಟೀಕಿಸಿದ್ದಾರೆ. ಮಾನೆಟೈಸೇಷನ್‌ ಯೋಜನೆ ಅಡಿ ಖಾಸಗಿ ಹೂಡಿಕೆಗೆ 25 ವಿಮಾನ ನಿಲ್ದಾಣಗಳು, 40 ರೈಲ್ವೆ ನಿಲ್ದಾಣಗಳು ಹಾಗೂ 15 ರೈಲ್ವೆ ಸ್ಟೇಡಿಯಂ ಸೇರಿ ಹಲವು ಆಸ್ತಿಗಳನ್ನು ಗುರುತಿಸಲಾಗಿದೆ. ಇದನ್ನು ಸರಕಾರ ಘೋಷಿಸುತ್ತಿದ್ದಂತೆ, ವಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ವಿಪಕ್ಷಗಳಿಗೆ ಧ್ವನಿಗೂಡಿಸಿದ್ದ ರಾಹುಲ್‌ ಗಾಂಧಿ, ಈ ಯೋಜನೆಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ‘70 ವರ್ಷಗಳ ಕಾಲ ಸಾರ್ವಜನಿಕ ಹಣದಿಂದ ನಿರ್ಮಿಸಿದ ದೇಶದ ಆಸ್ತಿಯನ್ನು ತನ್ನ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಮಾರಲು’ ಸಹಾಯವಾಗಿದೆ ಎಂದು ರಾಹುಲ್‌ ಗಾಂಧಿ ದೂರಿದ್ದರು.