ಹಿಂದೂ ವ್ಯಕ್ತಿಯನ್ನು ವರಿಸಿದ ಮುಸ್ಲಿಂ ಯುವತಿಯ ತಲೆ ಬೋಳಿಸಿದ ಗ್ರಾಮಸ್ಥರು..!

ತಂದೆ ತಾಯಿ ಇಲ್ಲದ ಅನಾಥ ಮುಸ್ಲಿಂ ಯುವತಿ ತನ್ನ ಅಜ್ಜಿ ಜೊತೆ ವಾಸವಿದ್ದಳು. ಆಕೆಗೆ ತನ್ನದೇ ಗ್ರಾಮದ ಹಿಂದೂ ಯುವಕನ ಜೊತೆ ಪ್ರೇಮಾಂಕುರವಾಗಿತ್ತು. ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದರು.

ಹಿಂದೂ ವ್ಯಕ್ತಿಯನ್ನು ವರಿಸಿದ ಮುಸ್ಲಿಂ ಯುವತಿಯ ತಲೆ ಬೋಳಿಸಿದ ಗ್ರಾಮಸ್ಥರು..!
Linkup
ಲಖನೌ (): ವ್ಯಕ್ತಿಯನ್ನು ಮದುವೆಯಾದ ತಪ್ಪಿಗೆ ಮುಸ್ಲಿಂ ಹಿಂಸೆ ಅನುಭವಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಕೆಯ ಮೇಲೆ ಗ್ರಾಮಸ್ಥರು ಮಾಡಿದ್ದಲ್ಲದೆ, ಆಕೆಯ ತಲೆ ಬೋಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಬಾರಾಬಂಕಿ ಜಿಲ್ಲೆಯ ಫತ್ಹೇಪುರ ಕೊತ್ವಾಲ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ ಎಂಟು ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಮೂವರನ್ನು ಬಂಧಿಸಲಾಗಿದೆ. ತಂದೆ-ತಾಯಿಯನ್ನು ಕಳೆದುಕೊಂಡ 20 ವರ್ಷದ ಸಂತ್ರಸ್ತ ಯುವತಿಯು ಅಜ್ಜಿ ಜತೆ ಇದ್ದಳು. ಅದೇ ಗ್ರಾಮದ 28 ವರ್ಷದ ವ್ಯಕ್ತಿ ಜೊತೆಗೆ ಆಕೆಗೆ ಪ್ರೇಮಾಂಕುರವಾಗಿತ್ತು. ಸೋಮವಾರ ಬೆಳಗ್ಗೆ ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಅನ್ಯ ಕೋಮಿನ ಜೋಡಿ ಮದುವೆಯಾದ ವಿಷಯ ತಿಳಿದ ಯುವತಿಯ ಕುಟುಂಬಸ್ಥರು ಆಕೆಯ ಮೇಲೆ ಹಲ್ಲೆ ಮಾಡಿ, ತಲೆ ಬೋಳಿಸಿದ್ದಾರೆ ಎಂದು ತಿಳಿದುಬಂದಿದೆ. 'ಯುವತಿ ನೀಡಿದ ದೂರಿನ ಮೇಲೆ ಆಕೆಯ ಚಿಕ್ಕಪ್ಪ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವಧೇಶ್‌ ಸಿಂಗ್‌ ತಿಳಿಸಿದ್ದಾರೆ.