ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ; ಶೋಭಾ ಕರಂದ್ಲಾಜೆ ಮನವಿ

ದೇಶದ ರೈಲ್ವೆ ವಲಯಗಳಿಗೆ ಹೋಲಿಸಿದರೆ, ಕೆಆರ್‌ಸಿಎಲ್‌ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಹಿಂದಿದೆ. ಹಾಗಾಗಿ ಇದನ್ನು ವಿಲೀನಗೊಳಿಸಿ, ನೈರುತ್ಯ ರೈಲ್ವೆ (ಕರ್ನಾಟಕ ಗೋವಾ) ಹಾಗೂ ಕೇಂದ್ರೀಯ ರೈಲ್ವೆ (ಮಹಾರಾಷ್ಟ್ರ) ನಿಯಂತ್ರಣಕ್ಕೆ ನೀಡಿ. ಇದು ಕರಾವಳಿ ಕರ್ನಾಟಕ ಭಾಗದ ಬಹು ವರ್ಷಗಳ ಬೇಡಿಕೆಯಾಗಿದೆ ಎಂದು ಶೋಭಾ ಕರಂದ್ಲಾಜೆ ಮನವಿಯ ಮೂಲಕ ತಿಳಿಸಿದ್ದಾರೆ.

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ; ಶೋಭಾ ಕರಂದ್ಲಾಜೆ ಮನವಿ
Linkup
ಹೊಸದಿಲ್ಲಿ: ಕೊಂಕಣ ರೈಲ್ವೆ ಕಾರ್ಪೊರೇಷನ್‌ ಲಿಮಿಟೆಡ್‌ (ಕೆಆರ್‌ಸಿಎಲ್‌)ಅನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕು ಎಂದು ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವೆ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹೊಸದಿಲ್ಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ಅವರು, ಕರ್ನಾಟಕದ ಕರಾವಳಿ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಕೆಆರ್‌ಸಿಎಲ್‌ ವಿಫಲವಾಗಿದೆ. ಹಾಗಾಗಿ ಅದನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವುದು ಸೂಕ್ತ ಎಂದು ಮನವಿ ಮಾಡಿದ್ದಾರೆ. ದೇಶದ ರೈಲ್ವೆ ವಲಯಗಳಿಗೆ ಹೋಲಿಸಿದರೆ, ಕೆಆರ್‌ಸಿಎಲ್‌ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಹಿಂದಿದೆ. ಹಾಗಾಗಿ ಇದನ್ನು ವಿಲೀನಗೊಳಿಸಿ, ನೈರುತ್ಯ ರೈಲ್ವೆ (ಕರ್ನಾಟಕ ಗೋವಾ) ಹಾಗೂ ಕೇಂದ್ರೀಯ ರೈಲ್ವೆ (ಮಹಾರಾಷ್ಟ್ರ) ನಿಯಂತ್ರಣಕ್ಕೆ ನೀಡಿ. ಇದು ಕರಾವಳಿ ಕರ್ನಾಟಕ ಭಾಗದ ಬಹು ವರ್ಷಗಳ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ. ಹಾಗೂ ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾ ಸಹಯೋಗದಲ್ಲಿ ಕೆಆರ್‌ಸಿಎಲ್‌ಅನ್ನು ಸ್ಥಾಪಿಸಿದ್ದು, ಈ ಕೊಂಕಣ ರೈಲ್ವೆಯು ಮಂಗಳೂರಿನಿಂದ ಮುಂಬಯಿಗೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ.