ತಾಲಿಬಾನ್ ನಿಯಂತ್ರಣ ನಿರೀಕ್ಷಿಸಿದ್ದೆವು, ಆದರೆ ಈ ಇಷ್ಟು ಬೇಗ ಎಂದು ಊಹಿಸಿರಲಿಲ್ಲ: ಬಿಪಿನ್ ರಾವತ್

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ತಮ್ಮ ವಶಕ್ಕೆ ಪಡೆದುಕೊಳ್ಳಲಿದೆ ಎನ್ನುವುದನ್ನು ಮೊದಲೇ ನಿರೀಕ್ಷಿಸಿದ್ದೆವು. ಆದರೆ ಇಷ್ಟು ಬೇಗನೆ ಅದು ನಿಯಂತ್ರಣ ಸಾಧಿಸಿದ್ದು ಬಹಳ ಅಚ್ಚರಿ ಮೂಡಿಸಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ತಾಲಿಬಾನ್ ನಿಯಂತ್ರಣ ನಿರೀಕ್ಷಿಸಿದ್ದೆವು, ಆದರೆ ಈ ಇಷ್ಟು ಬೇಗ ಎಂದು ಊಹಿಸಿರಲಿಲ್ಲ: ಬಿಪಿನ್ ರಾವತ್
Linkup
ಹೊಸದಿಲ್ಲಿ: ನಿಯಂತ್ರಿತ ಅಫ್ಘಾನಿಸ್ತಾನದಿಂದ ನಡೆಯುವ ಯಾವುದೇ ಸಂಭಾವ್ಯ ಭಯೋತ್ಪಾದನಾ ಚಟುವಟಿಕೆಗಳನ್ನು ಹಾಗೂ ಭಾರತಕ್ಕೆ ಅದರಿಂದ ಎದುರಾಗುವ ಅಪಾಯಗಳನ್ನು ದೃಢವಾಗಿ ಎದುರಿಸುತ್ತೇವೆ ಎಂದು ಸೇನಾ ಮುಖ್ಯಸ್ಥ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧದ ಜಾಗತಿಕ ಯುದ್ಧದಲ್ಲಿನ ಸಹಕಾರ ವೃದ್ಧಿಸಲು ಕ್ವಾಡ್ ದೇಶಗಳು ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದನ್ನು ನಿರೀಕ್ಷಿಸಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳ ಕಾಲಮಿತಿ ಅಚ್ಚರಿ ಉಂಟುಮಾಡಿದೆ. ಕಳೆದ 20 ವರ್ಷಗಳಲ್ಲಿ ಈ ಭಯೋತ್ಪಾದನಾ ಸಂಘಟನೆ ಬದಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಅಬ್ಸರ್ವರ್ ರೀಸರ್ಚ್ ಫೌಂಡೇಷನ್ (ಒಆರ್‌ಎಫ್) ಆಯೋಜಿಸಿದ್ದ ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಇಂಡೋ-ಪೆಸಿಫಿಕ್ ಕಮಾಂಡ್‌ನ ಅಮೆರಿಕದ ಕಮಾಂಡರ್ ಅಡ್ಮಿರಲ್ ಜಾನ್ ಅಕ್ವಿಲಿನೊ ಜತೆ ಮಾತನಾಡಿದರು. ' ವಿಚಾರ ನೋಡಿದಾಗ, ಅಫ್ಘಾನಿಸ್ತಾನದಿಂದ ಹೊರಗೆ ನಡೆಯುವ ಯಾವುದೇ ಸಂಭಾವ್ಯ ಚಟುವಟಿಕೆಗಳು ಹಾಗೂ ಭಾರತದತ್ತ ಅವು ಸಾಗುವುದು ಕಂಡುಬಂದರೆ, ನಾವು ನಮ್ಮ ನೆಲದಲ್ಲಿ ಭಯೋತ್ಪಾದನೆಯನ್ನು ಎದುರಿಸುತ್ತಿರುವ ರೀತಿಯಲ್ಲಿಯೇ ಎದುರಿಸುತ್ತೇವೆ' ಎಂದರು. ಭಾರತದ ಮೇಲೆ ಪರಿಣಾಮ ಬೀರುವಂತಹ ಅಫ್ಘಾನಿಸ್ತಾನದಲ್ಲಿನ ಸಂಭಾವ್ಯ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಭಾರತ ಕಳವಳ ಹೊಂದಿದೆ. ಅಂತಹ ಸವಾಲನ್ನು ಸಮರ್ಥವಾಗಿ ಎದುರಿಸಲು ಕಠಿಣ ಯೋಜನೆಗಳನ್ನು ರೂಪಿಸಲಾಗಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸುವುದನ್ನು ಮೊದಲೇ ನಿರೀಕ್ಷಿಸಿದ್ದೆವು. ಉಗ್ರ ಚಟುವಟಿಕೆಗಳು ಅಫ್ಘಾನಿಸ್ತಾನದಿಂದ ಭಾರತಕ್ಕೆ ಹೇಗೆ ಹರಿದುಬರುತ್ತದೆ ಎಂಬ ಬಗ್ಗೆ ನಮಗೆ ಕಳವಳವಿದೆ ಎಂದು ತಿಳಿಸಿದರು.