ಮತ್ತೆ ಏರಿದ ಚಿನ್ನದ ಬೆಲೆ! ನೀವು ಇಂದು ಚಿನ್ನಾಭರಣ ಖರೀದಿ ಮಾಡೋದಿದ್ರೆ ತಪ್ಪದೇ ಬೆಲೆ ವಿವರ ಇಲ್ಲಿ ಓದಿ

Gold Price in Bangalore: ದೇಶದ ಚಿನ್ನದ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.

ಮತ್ತೆ ಏರಿದ ಚಿನ್ನದ ಬೆಲೆ! ನೀವು ಇಂದು ಚಿನ್ನಾಭರಣ ಖರೀದಿ ಮಾಡೋದಿದ್ರೆ ತಪ್ಪದೇ ಬೆಲೆ ವಿವರ ಇಲ್ಲಿ ಓದಿ
Linkup
ಬೆಂಗಳೂರು: ಕಳೆದ ಕೆಲ ವಾರಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ , ಆಭರಣಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಈ ವಾರ ಬಂಗಾರ ಪ್ರಿಯರು ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಸೋಮವಾರ ಇಂದು ಮಂಗಳವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ₹4,717 ದಾಖಲಾಗಿದೆ. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಸೋಮವಾರ) ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,020 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹48,020 ರೂಪಾಯಿ ದಾಖಲಾಗಿದೆ. ಬೆಳ್ಳಿ ದರ: ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹63,200 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹63,200 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹68,200 ರೂ ನಿಗದಿಯಾಗಿದೆ. ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ: ಬೆಂಗಳೂರು: ₹44,020 (22 ಕ್ಯಾರಟ್‌) ₹48,020 (24 ಕ್ಯಾರಟ್‌) ಚೆನ್ನೈ: ₹44,370 (22 ಕ್ಯಾರಟ್‌) ₹48,400 (24 ಕ್ಯಾರಟ್‌) ದಿಲ್ಲಿ: ₹46,170 (22 ಕ್ಯಾರಟ್‌), ₹50,370 (24 ಕ್ಯಾರಟ್‌) ಹೈದರಾಬಾದ್‌: ₹44,020 (22 ಕ್ಯಾರಟ್‌) ₹48,020 (24 ಕ್ಯಾರಟ್‌) ಕೋಲ್ಕತಾ: ₹46,370 (22 ಕ್ಯಾರಟ್‌), ₹49,070 (24 ಕ್ಯಾರಟ್‌) ಮಂಗಳೂರು: ₹44,020 (22 ಕ್ಯಾರಟ್‌) ₹48,020 (24 ಕ್ಯಾರಟ್‌) ಮುಂಬಯಿ: ₹46,170(22 ಕ್ಯಾರಟ್‌), ₹47,170 (24 ಕ್ಯಾರಟ್‌ ಮೈಸೂರು: ₹44,020 (22 ಕ್ಯಾರಟ್‌) ₹48,020 (24 ಕ್ಯಾರಟ್‌) ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದು ಬೆಳಗ್ಗಿನ ವೇಳೆಗೆ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದರೆ, ಬೆಳ್ಳಿ ಬೆಲೆಯಲ್ಲಿಯೂ ಕೆಲವೆಡೆ ಏರಿಕೆ ಕಂಡು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.