100ನೇ ಸ್ವಾತಂತ್ರ್ಯ ಸಂಭ್ರಮದ ವೇಳೆಗೆ ಭಾರತ ಇಂಧನ ಸ್ವಾವಲಂಬಿಯಾಗಬೇಕು: ಪ್ರಧಾನಿ ಮೋದಿ

ದೇಶದ 75ನೇ ಸ್ವಾತಂತ್ರ್ಯ ದಿನದಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ 'ರಾಷ್ಟ್ರೀಯ ಹೈಡ್ರೋಜನ್ ಮಿಷನ್' ಅನ್ನು ಘೋಷಿಸಿದರು. ಈಗಾಗಲೇ 2030ರ ವೇಳೆಗೆ 450 ಗಿಗಾ ವಾಟ್‌ ನವೀಕರಿಸಬಹುದಾದ ಶಕ್ತಿ ಉತ್ಪಾದಿಸುವ ಗುರಿ ಹೊಂದಲಾಗಿದೆ.

100ನೇ ಸ್ವಾತಂತ್ರ್ಯ ಸಂಭ್ರಮದ ವೇಳೆಗೆ ಭಾರತ ಇಂಧನ ಸ್ವಾವಲಂಬಿಯಾಗಬೇಕು: ಪ್ರಧಾನಿ ಮೋದಿ
Linkup
ಹೊಸದಿಲ್ಲಿ: ದೇಶದ 75ನೇ ಸ್ವಾತಂತ್ರ್ಯ ದಿನದಂದು ಭಾನುವಾರ ಪ್ರಧಾನಿ 'ರಾಷ್ಟ್ರೀಯ ಹೈಡ್ರೋಜನ್ ಮಿಷನ್' ಅನ್ನು ಘೋಷಿಸಿದರು. ಹವಾಮಾನ ಗುರಿಗಳನ್ನು (ಜಾಗತಿಕ ತಾಪಮಾನ ನಿಯಂತ್ರಿಸುವ ನಿಟ್ಟಿನಲ್ಲಿ) ಪೂರೈಸಲು ಕೇಂದ್ರದ ಮೇಲೆ ಒತ್ತಡವಿದ್ದು, ದೇಶದಲ್ಲಿ ಇಂಧನ ಸ್ವಾವಲಂಬನೆ ಸಾಧಿಸಲು ಹಲವು ಘೋಷಣೆ ಮಾಡಿದ್ದಾರೆ. "ಈಗಾಗಲೇ 2030ರ ವೇಳೆಗೆ 450 ಗಿಗಾ ವಾಟ್‌ ನವೀಕರಿಸಬಹುದಾದ ಶಕ್ತಿ ಉತ್ಪಾದಿಸುವ ಗುರಿ ಘೋಷಿಸಲಾಗಿದೆ. ಈ ಪೈಕಿ 100 ಗಿಗಾವಾಟ್‌ ಸಾಮರ್ಥ್ಯವನ್ನು ಅಂದುಕೊಂಡಿದ್ದಕ್ಕಿಂತ ಮುಂಚಿತವಾಗಿ ಸಾಧಿಸಿದ್ದೇವೆ. ಇಂದನ್ನು ಹೇಳಲು ನನಗೆ ಹೆಮ್ಮೆಯಾಗುತ್ತಿದೆ" ಎಂದು ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದರು. "ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಮತ್ತು ಹಸಿರು ಹೈಡ್ರೋಜನ್ ವಲಯವು ನಮ್ಮ ಹವಾಮಾನ ಗುರಿಗಳನ್ನು ಸಾಧಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಭಾರತವನ್ನು ಹಸಿರು ಜಲಜನಕ ಕೇಂದ್ರವನ್ನಾಗಿಸಬೇಕು, ಮತ್ತು ಇದು ಶುದ್ಧ ಇಂಧನ ಪರಿವರ್ತನೆಗೆ ಕಾರಣವಾಗುತ್ತದೆ ಎಂದು ಮೋದಿ ಹೇಳಿದರು. ಪವನಶಕ್ತಿ ಮತ್ತು ಸೌರಶಕ್ತಿ ಮುಂತಾದ ನವೀಕರಿಸಬಹುದಾದ ಇಂಧನ ಮೂಲಗಳಿಂದ ನಡೆಸಲ್ಪಡುವ ಎಲೆಕ್ಟ್ರೋಲೈಜರ್ ಬಳಸಿ ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ವಿಭಜಿಸುವ ಮೂಲಕ ಉತ್ಪಾದಿಸಲಾಗುತ್ತದೆ. ಹೈಡ್ರೋಜನ್‌ ಕೂಡ ಹಸಿರು ಇಂಧನವಾಗಿರುವ ಕಾರಣ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸಬಹುದು. "ಪ್ರಸ್ತುತ ಭಾರತವು ಇಂಧನ ಸ್ವಾವಲಂಭಿಯಲ್ಲ. 100 ವರ್ಷಗಳ ಸ್ವಾತಂತ್ರ್ಯ ಪೂರ್ಣಗೊಳ್ಳುವ ಮೊದಲು ನಾವು ಇಂಧನ ಸ್ವಾವಲಂಭಿಗಳಾಗಬೇಕು, ”ಎಂದು ನರೇಂದ್ರ ಮೋದಿ ಹೇಳಿದರು. 20 % ಎಥೆನಾಲ್ ಮಿಶ್ರಣ ಮತ್ತು ವಿದ್ಯುತ್ ಚಲನಶೀಲತೆಗೆ ಉತ್ತೇಜನ ನೀಡುವಂತಹ ವಿವಿಧ ಯೋಜನೆಗಳ ಮೂಲಕ ಇಂಧನ ಸ್ವಾವಲಂಬನೆ ಸಾಧಿಸಬಹುದು. ಭಾರತೀಯ ರೈಲ್ವೆ ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು 2030 ಅನ್ನು ಗುರಿಯಾಗಿಸಿಕೊಂಡಿದೆ. ಭಾರತವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಬಗ್ಗೆ ಮೋದಿ ಮಾತನಾಡಿದ್ದಾರೆ ಮತ್ತು ಅವರು ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವುದು ನಾಗರಿಕರ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಮೋದಿ