ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌ ಮಾರಾಟ ಸೇರಿಸಲು ಸೆ.17ಕ್ಕೆ ಚರ್ಚೆ!

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಮುಂದಿನ ಸಭೆ ಲಖನೌದಲ್ಲಿ ಶುಕ್ರವಾರ (ಸೆ.17) ನಡೆಯಲಿದ್ದು, ಈ ಸಲ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಗೆ ಸೇರಿಸುವ ಬಗ್ಗೆ ಚರ್ಚೆಯನ್ನು ನಿರೀಕ್ಷಿಸಲಾಗಿದೆ.

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌ ಮಾರಾಟ ಸೇರಿಸಲು ಸೆ.17ಕ್ಕೆ ಚರ್ಚೆ!
Linkup
ಹೊಸದಿಲ್ಲಿ: () ಮಂಡಳಿಯ ಮುಂದಿನ ಸಭೆ ಲಖನೌದಲ್ಲಿ ಶುಕ್ರವಾರ (ಸೆ.17) ನಡೆಯಲಿದ್ದು, ಈ ಸಲ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಗೆ ಸೇರಿಸುವ ಬಗ್ಗೆ ಚರ್ಚೆಯನ್ನು ನಿರೀಕ್ಷಿಸಲಾಗಿದೆ. ಜಿಎಸ್‌ಟಿ ಮಂಡಳಿಯ ಸೆಕ್ರೆಟರಿಯೇಟ್‌ನಿಂದ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ವೈಮಾನಿಕ ಇಂಧನ ಇಂಧನವನ್ನು (ಎಟಿಎಫ್‌) ಜಿಎಸ್‌ಟಿ ವ್ಯಾಪ್ತಿಗೆ ತರಲು ಸಲಹೆ ನೀಡಿರುವುದಾಗಿ ವರದಿಯಾಗಿದೆ. ಜಿಎಸ್‌ಟಿಯ ನಿಯಮಾವಳಿಗಳ ಪ್ರಕಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಗೆ ಸೇರಿಸಬೇಕು. ಆದರೆ ಯಾವಾಗ ಜಿಎಸ್‌ಟಿ ಅನ್ವಯವಾಗಲಿದೆ ಎಂಬುದನ್ನು ಮಂಡಳಿ ಇನ್ನೂ ನಿರ್ಧರಿಸಿಲ್ಲ. ಕೇರಳ ಹೈಕೋರ್ಟ್‌ ಇತ್ತೀಚೆಗೆ ಪೆಟ್ರೋಲ್‌ ಮತ್ತು ಅನ್ನು ಜಿಎಸ್‌ಟಿಗೆ ಸೇರಿಸುವ ಬಗ್ಗೆ ಪರಿಶೀಲಿಸುವಂತೆ ತಿಳಿಸಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಾರ್ಯಸೂಚಿ ಇನ್ನೂ ಬಹಿರಂಗವಾಗಿಲ್ಲ. ಜಿಎಸ್‌ಟಿ ಪದ್ಧತಿಯಲ್ಲಿ ಬದಲಾವಣೆಗೆ ಮಂಡಳಿಯಲ್ಲಿ ನಾಲ್ಕನೇ ಮೂರರಷ್ಟು ಬೆಂಬಲ ಬೇಕು. ಮಂಡಳಿಯಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾತಿನಿಧ್ಯವಿದೆ. ಕೆಲವು ರಾಜ್ಯಗಳಿಗೆ ಪೆಟ್ರೋಲಿಯಂ ಮಾರಾಟ ಆದಾಯದ ಪ್ರಮುಖ ಮೂಲವಾಗಿದ್ದು, ಅವುಗಳನ್ನು ಜಿಎಸ್‌ಟಿಗೆ ತರಲು ವಿರೋಧಿಸುತ್ತಿವೆ. 2019-20ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ತೆರಿಗೆಗಳ ಮೊತ್ತ 5.55 ಲಕ್ಷ ಕೋಟಿ ರೂ.ಗಳಾಗಿತ್ತು. ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿಗೆ ಸೇರಿಸಿದರೆ ಅವುಗಳ ದರ ಗಣನೀಯ ಇಳಿಕೆಯಾಗಲಿದೆ. ಕೋವಿಡ್‌-19 ಚಿಕಿತ್ಸೆಗೆ ಬಳಸುವ ಔಷಧಗಳ ದರಗಳ ಮೇಲಿನ ರಿಯಾಯಿತಿಯನ್ನು ಮತ್ತೆ ಮೂರು ತಿಂಗಳಿಗೆ ವಿಸ್ತರಿಸುವ ಪ್ರಸ್ತಾಪವನ್ನು ಮಂಡಳಿ ಸಭೆಯಲ್ಲಿ ಮುಂದಿಡುವ ಸಾಧ್ಯತೆ ಇದೆ. ಮುಂದಿನ ವರ್ಷ ರಾಜ್ಯಗಳಿಗೆ ಜಿಎಸ್‌ಟಿ ನಷ್ಟ ಪರಿಹಾರ ವಿತರಣೆಗೆ ಆಯ್ಕೆಯ ಬಗ್ಗೆ ಕೂಡ ಸರಕಾರ ಪ್ರಸ್ತಾಪ ಮಂಡಿಸುವ ಸಾಧ್ಯತೆ ಇದೆ. ಕಬ್ಬಿಣ, ತಾಮ್ರ ಮತ್ತು ಇತರ ಲೋಹಗಳ ಮೇಲಿನ ಜಿಎಸ್‌ಟಿ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಗೆ ಸೇರಿಸಿದರೆ ರಾಜ್ಯಗಳಿಗೆ ಆದಾಯ ಇಳಿಕೆಯಾಗುವುದರಿಂದ ಜಿಎಸ್‌ಟಿ ಮಂಡಳಿಯಲ್ಲಿ ಸದ್ಯಕ್ಕೆ ಒಮ್ಮತದ ತೀರ್ಮಾನ ಕಷ್ಟ ಎನ್ನುತ್ತಾರೆ ತಜ್ಞರು. 'ಇನ್ನೂ 8-10 ವರ್ಷಗಳ ಕಾಲ ಪೆಟ್ರೋಲ್‌-ಡೀಸೆಲ್‌ ಅನ್ನು ಜಿಎಸ್‌ಟಿಗೆ ತರಲು ಸಾಧ್ಯವಿಲ್ಲ. ಒಂದು ವೇಳೆ ಜಿಎಸ್‌ಟಿಗೆ ಒಳಪಡಿಸಿದರೆ ರಾಜ್ಯಗಳಿಗೆ 2 ಲಕ್ಷ ಕೋಟಿ ರೂ.ಗೂ ಹೆಚ್ಚು ತೆರಿಗೆ ಆದಾಯ ನಷ್ಟವಾಗಲಿದೆ' ಎಂದು ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ ಈ ಹಿಂದೆ ಹೇಳಿದ್ದರು.