ಪದೇ ಪದೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಬ್ರೇಕ್‌, ಜುಲೈನಲ್ಲಿ ಗ್ರಾಹಕರು ಒಂದಿಷ್ಟು ನಿರಾಳ

ಇನ್ನು ಮುಂದೆ ತೈಲ ಬೆಲೆಯನ್ನು ಪರಿಷ್ಕರಣೆ ಮಾಡುವ ಮೊದಲು ಜಾಗತಿಕ ಕಚ್ಚಾ ತೈಲ ಬೆಲೆಯ ಚಲನೆಯನ್ನು ವಿಶ್ಲೇಷಿಸಿ ಮುಂದಡಿ ದೇಶದ ತೈಲ ಮಾರಾಟ ಕಂಪನಿಗಳು ನಿರ್ಧರಿಸಿವೆ. ಇದರಿಂದ ಗ್ರಾಹಕರು ಒಂದಿಷ್ಟು ನಿರಾಳರಾಗಿದ್ದಾರೆ.

ಪದೇ ಪದೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಬ್ರೇಕ್‌, ಜುಲೈನಲ್ಲಿ ಗ್ರಾಹಕರು ಒಂದಿಷ್ಟು ನಿರಾಳ
Linkup
ಶುಕ್ರವಾರ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ತೈಲ ಬೆಲೆಯನ್ನು ಪರಿಷ್ಕರಣೆ ಮಾಡುವ ಮೊದಲು ಜಾಗತಿಕ ಕಚ್ಚಾ ತೈಲ ಬೆಲೆಯ ಚಲನೆಯನ್ನು ವಿಶ್ಲೇಷಿಸಿ ಮುಂದಡಿ ಇಡಲು ಕಂಪನಿಗಳು ನಿರ್ಧರಿಸಿವೆ. ಇದರಿಂದ ಒಂದಿಷ್ಟು ನಿರಾಳರಾಗಿದ್ದು ಮಾತ್ರ ಗ್ರಾಹಕರು. ಬ್ಯಾರಲ್‌ಗೆ 77 ಡಾಲರ್‌ಗೆ ಏರಿಕೆಯಾಗಿದ್ದ ಇದೀಗ ಇಳಿಕೆ ಹಾದಿಗೆ ಮರಳಿದೆ. ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ ಒಪೆಕ್‌ನಲ್ಲಿ ಭಿನ್ನಮತ ಕಾಣಿಸಿಕೊಂಡ ಬಳಿಕ ಕಚ್ಚಾ ತೈಲ ದರ ಏರಿಕೆಗೆ ಬ್ರೇಕ್‌ ಬಿದ್ದಿದೆ. ಇದರಿಂದ ದೇಶದಲ್ಲೂ ಪೆಟ್ರೋಲ್‌ ಮತ್ತು ಏರಿಕೆಯಾಗಿಲ್ಲ. ಹೀಗಾಗಿ ಸದ್ಯ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಲೀಟರ್‌ಗೆ 100.56 ರೂ. ಹಾಗೂ ಡೀಸೆಲ್‌ ದರ ಲೀಟರ್‌ಗೆ 89.62 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 103.93 ರೂ. ಇದ್ದರೆ, ಡೀಸೆಲ್‌ ದರ 94.99 ರೂ. ಇದೆ. ದೇಶಾದ್ಯಂತ ಶುಕ್ರವಾರ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಈ ಹಿಂದೆ ಎರಡು ದಿನ ಸತತವಾಗಿ ಏರಿಕೆ ಮಾಡಿದ್ದರಿಂದ ಪೆಟ್ರೋಲ್‌ ದರ ದೇಶದೆಲ್ಲೆಡೆ 100 ರೂ. ಗಡಿ ದಾಟಿದೆ. ಕೇವಲ ಎರಡೂವರೆ ತಿಂಗಳ ಅಂತರದಲ್ಲಿ ದೇಶದೆಲ್ಲೆಡೆ ಪೆಟ್ರೋಲ್‌ ಬೆಲೆಯಲ್ಲಿ ಕನಿಷ್ಠ 10 ರೂ.ಗೂ ಹೆಚ್ಚು ಏರಿಕೆಯಾಗಿದೆ. ಮೇ 1 ರಂದು ದಿಲ್ಲಿಯಲ್ಲಿ ಪೆಟ್ರೋಲ್‌ ದರ ಲೀ. 90.40 ರೂ. ಇತ್ತು. ಇದೀಗ ದಿಲ್ಲಿಯಲ್ಲಿ 100.56 ರೂ. ದರವಿದ್ದು, 69 ದಿನಗಳಲ್ಲಿ ಲೀಟರ್‌ ದರ 10.16 ರಷ್ಟು ಏರಿಕೆಯಾಗಿದೆ. ಡೀಸೆಲ್‌ ದರ 8.89 ರೂ.ನಷ್ಟು ಹೆಚ್ಚಿದೆ. ಈ ಅವಧಿಯಲ್ಲಿ 37 ಬಾರಿ ತೈಲ ದರ ಏರಿಕೆಯಾಗಿದೆ. ಮುಂದಿನ ಕೆಲವು ದಿನಗಳಲ್ಲಿ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ಬೆಲೆಯನ್ನು ಕಡಿತಗೊಳಿಸುವ ಸಾಧ್ಯತೆಯೂ ಇದೆ. ಇದು ಗ್ರಾಹಕರ ಪಾಲಿಗೆ ಶುಭ ಸುದ್ದಿಯಾಗಿದೆ. ಜತೆಗೆ ಬೆಲೆ ಏರಿಕೆಯೂ ಪರಿಶೀಲನೆ ಬಳಿಕವೇ ನಡೆಯಲಿದೆ.