ಕೊರೊನಾ ಎಫೆಕ್ಟ್: ಜನಗಣತಿ ಚಟುವಟಿಕೆ ಮುಂದೂಡಿದ ಕೇಂದ್ರ ಸರ್ಕಾರ

ಕಳೆದ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಮನೆ ಪಟ್ಟಿ ಹಾಗೂ ಮನೆ ಗಣತಿ ಮಾಡಲಾಗಿದೆ. ಇದೇ ವರ್ಷದ ಫೆಬ್ರವರಿ 9-28ರ ಅವಧಿಯಲ್ಲಿ ಜನಸಂಖ್ಯೆ ಲೆಕ್ಕಾಚಾರ ಮಾಡಲಾಗಿದೆ ಎಂದು ಸಚಿವ ರೈ ತಿಳಿಸಿದ್ದಾರೆ.

ಕೊರೊನಾ ಎಫೆಕ್ಟ್: ಜನಗಣತಿ ಚಟುವಟಿಕೆ ಮುಂದೂಡಿದ ಕೇಂದ್ರ ಸರ್ಕಾರ
Linkup
: ಹಿನ್ನೆಲೆಯಲ್ಲಿ ದೇಶಾದ್ಯಂತ 2021ರ ಜನಗಣತಿಗೆ ಸಂಬಂಧಿಸಿದ ಎಲ್ಲ ಕ್ಷೇತ್ರ ಚಟುವಟಿಕೆಗಳನ್ನು ಕೇಂದ್ರ ಸರಕಾರ ಮುಂದೂಡಿದೆ. 'ಜನಗಣತಿ ಕಾಯಿದೆ-1948ರ ಅನ್ವಯ ಪ್ರಸಕ್ತ ವರ್ಷದಲ್ಲಿ ಮಾಡಬೇಕಿತ್ತು. ಆದರೆ, ದೇಶಾದ್ಯಂತ ಕೊರೊನಾ ಭೀತಿ ಇರುವುದರಿಂದ ಮುಂದಿನ ಆದೇಶದವರೆಗೆ ಜನಗಣತಿ ಸಂಬಂಧಿ ಕ್ಷೇತ್ರ ಚಟುವಟಿಕೆ ಮುಂದೂಡಲಾಗಿದೆ' ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 'ಕಳೆದ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಮನೆ ಪಟ್ಟಿ ಹಾಗೂ ಮನೆ ಗಣತಿ ಮಾಡಿದ್ದು, ಇದೇ ವರ್ಷದ ಫೆಬ್ರವರಿ 9-28ರ ಅವಧಿಯಲ್ಲಿ ಜನಸಂಖ್ಯೆ ಲೆಕ್ಕಾಚಾರ ಮಾಡಲಾಗಿದೆ. ಜನಸಂಖ್ಯಾ ಶಾಸ್ತ್ರ ಹಾಗೂ ಸಾಮಾಜಿಕ - ಆರ್ಥಿಕ ಮಾನದಂಡದ ಆಧಾರದ ಮೇಲೆ ಜನಗಣತಿ ಮಾಡಲಾಗಿದೆ. ಶಿಕ್ಷಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಧರ್ಮ, ಭಾಷೆ, ಫಲವತ್ತತೆ (ಹೆಣ್ಣು ಮಕ್ಕಳು ಜನ್ಮ ನೀಡುವ ಸರಾಸರಿ ಮಕ್ಕಳ ಪ್ರಮಾಣ), ಅಂಗವೈಕಲ್ಯ, ಉದ್ಯೋಗ, ವಲಸೆ, ವಲಸೆಗೆ ಕಾರಣ ಸೇರಿ ಹಲವು ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.