ತಮ್ಮ ವಿರುದ್ಧದ ಪ್ರಕರಣಗಳ ವಿಚಾರಣೆಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್‌ಗೆ ಬಾಬಾ ರಾಮ್‌ದೇವ್ ಮೊರೆ

ಅಲೋಪಥಿ ವೈದ್ಯಕೀಯ ಪದ್ಧತಿ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದಕ್ಕೆ ವಿವಿಧೆಡೆ ದಾಖಲಾಗಿರುವ ಎಫ್‌ಐಆರ್‌ಗಳ ವಿಚಾರಣೆಯನ್ನು ತಡೆಹಿಡಿಯುವಂತೆ ಕೋರಿ ಬಾಬಾ ರಾಮ್‌ದೇವ್ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ವಿರುದ್ಧದ ಪ್ರಕರಣಗಳ ವಿಚಾರಣೆಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್‌ಗೆ ಬಾಬಾ ರಾಮ್‌ದೇವ್ ಮೊರೆ
Linkup
ಹೊಸದಿಲ್ಲಿ: ವೈದ್ಯ ಪದ್ಧತಿ ವಿರುದ್ಧ ಮಾತನಾಡಿ ಸಂಕಷ್ಟಕ್ಕೆ ಸಿಲುಕಿರುವ ಯೋಗ ಗುರು , ತಮ್ಮ ವಿರುದ್ಧದ ಪೊಲೀಸ್ ಪ್ರಕರಣಗಳ ವಿಚಾರಣೆಗೆ ತಡೆ ನೀಡಬೇಕು ಎಂದು ಮೆಟ್ಟಿಲೇರಿದ್ದಾರೆ. ಪಟ್ನಾ ಮತ್ತು ರಾಯ್ಪುರದ ಭಾರತೀಯ ವೈದ್ಯಕೀಯ ಸಂಸ್ಥೆಗಳು (ಐಎಂಎ) ತಮ್ಮ ವಿರುದ್ಧ ಸಲ್ಲಿಸಿರುವ ಎಲ್ಲ ಪ್ರಕರಣಗಳನ್ನೂ ಜೋಡಿಸಬೇಕು ಮತ್ತು ಅವುಗಳನ್ನು ದಿಲ್ಲಿಗೆ ವರ್ಗಾಯಿಸಬೇಕು ಎಂದು ಕೋರಿದ್ದಾರೆ. ಕಳೆದ ತಿಂಗಳು ಬಾಬಾ ರಾಮ್‌ದೇವ್ ಅವರು ಮಾತನಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 'ಅಲೋಪಥಿ ಒಂದು ಮೂರ್ಖ ವಿಜ್ಞಾನ. ಚಿಕಿತ್ಸೆ ಸಿಗದೆ ಅಥವಾ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರಿಗಿಂತಲೂ ಅಲೋಪಥಿ ಚಿಕಿತ್ಸೆ ಪಡೆದುಕೊಂಡೇ ಲಕ್ಷಾಂತರ ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ' ಎಂದು ಹೇಳಿದ್ದು ವಿವಾದ ಸೃಷ್ಟಿಸಿತ್ತು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ವೈದ್ಯರು, ರಾಮ್‌ದೇವ್ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದರು. ರಾಮ್‌ದೇವ್ ಬಹಿರಂಗ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದ್ದರು. ರಾಮ್‌ದೇವ್ ಅವರಿಗೆ ಲೀಗನ್ ನೋಟಿಸ್ ಕಳುಹಿಸಿದ್ದ ಐಎಂಎ, ಕೆಲವೆಡೆ ಪೊಲೀಸರಿಗೆ ದೂರು ಸಲ್ಲಿಸಿತ್ತು. ತಮ್ಮ ವಿರುದ್ಧದ ಮಾನಹಾನಿ ನೋಟಿಸ್‌ಗಳಿಗೆ ಕಠಿಣ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದ ರಾಮ್‌ದೇವ್, ಯಾರ ಅಪ್ಪನಿಗೂ ತಮ್ಮನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಹೇಳುವ ಮತ್ತೊಂದು ವಿಡಿಯೋ ವೈರಲ್ ಆಗಿತ್ತು. ರಾಮ್‌ದೇವ್ 15 ದಿನಗಳ ಒಳಗೆ ಕ್ಷಮೆ ಕೋರಬೇಕು ಎಂದಿದ್ದ ಐಎಂಎ, 1,000 ರೂಪಾಯಿ ಮಾನಹಾನಿ ಪರಿಹಾರಕ್ಕೆ ಬೇಡಿಕೆ ಇರಿಸಿತ್ತು. ತಮ್ಮ ಹೇಳಿಕೆಗಳನ್ನು ಹಿಂದಕ್ಕೆ ಪಡೆಯುವುದಾಗಿ ರಾಮ್‌ದೇವ್ ಬಳಿಕ ತಿಳಿಸಿದ್ದರು. ಆದರೆ ಅಲೋಪಥಿ ವೈದ್ಯಕೀಯದ ಕುರಿತಾದ ತಮ್ಮ ಹೇಳಿಕೆಯನ್ನು ಸಂಪೂರ್ಣ ಹಿಂಪಡೆದು ಕ್ಷಮೆ ಕೋರಿದರೆ ಮಾತ್ರ ಪ್ರಕರಣ ಕೈಬಿಡುವುದಾಗಿ ಐಎಂಎ ತಿಳಿಸಿತ್ತು.