ದಲಿತರ ಬಗ್ಗೆ ಅವಹೇಳನ: ನಟಿ ಮೀರಾ ಮಿಥುನ್ ಬಂಧನ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಮೀರಾ ಮಿಥುನ್ ಅರೆಸ್ಟ್ ಆಗಿದ್ದಾರೆ.

ದಲಿತರ ಬಗ್ಗೆ ಅವಹೇಳನ: ನಟಿ ಮೀರಾ ಮಿಥುನ್ ಬಂಧನ
Linkup
ನಟಿ ಮತ್ತು ಮಾಡೆಲ್ ಅರೆಸ್ಟ್ ಆಗಿದ್ದಾರೆ. ಆಗಸ್ಟ್ 14 ರಂದು ಕ್ರೈಂ ಬ್ರಾಂಚ್ ಪೊಲೀಸರು ಮೀರಾ ಮಿಥುನ್‌ರನ್ನು ಕೇರಳದಲ್ಲಿ ಬಂಧಿಸಿದ್ದಾರೆ. ಅರೆಸ್ಟ್ ಆಗುವ ಮುನ್ನ ಪೊಲೀಸರ ಮುಂದೆ ಮೀರಾ ಮಿಥುನ್ ಹೈಡ್ರಾಮಾ ಮಾಡಿದ್ದರು. ''ಪೊಲೀಸರೇ ನನಗೆ ಧಮ್ಕಿ ಹಾಕಿದ್ದಾರೆ, ದೌರ್ಜನ್ಯ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ'' ಅಂತೆಲ್ಲಾ ಅಳುತ್ತಾ, ಚೀರಾಡುತ್ತಾ ವಿಡಿಯೋ ಮಾಡಿದ್ದರು. ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದಲಿತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮೀರಾ ಮಿಥುನ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಜನರ ಬಗ್ಗೆ ಅವಹೇಳನಕಾರಿಯಾಗಿ ಮೀರಾ ಮಿಥುನ್ ಮಾತನಾಡಿದ್ದ ವಿಡಿಯೋ ಕಳೆದ ವಾರವಷ್ಟೇ ವೈರಲ್ ಆಗಿತ್ತು. ''ತಮಿಳು ಚಿತ್ರರಂಗದಲ್ಲಿರುವ ಪರಿಶಿಷ್ಟ ಜಾತಿಯ ಜನರನ್ನು ಹೊರಗೆ ಹಾಕಬೇಕು'' ಎಂದು ವಿಡಿಯೋದಲ್ಲಿ ಮೀರಾ ಮಿಥುನ್ ಹೇಳಿದ್ದರು. ಮೀರಾ ಮಿಥುನ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ನೆಟ್ಟಿಗರು ಮೀರಾ ಮಿಥುನ್‌ಗೆ ಛೀಮಾರಿ ಹಾಕಿದ್ದರು. ಬಳಿಕ ಮೀರಾ ಮಿಥುನ್ ವಿರುದ್ಧ ದೂರು ದಾಖಲಾಗಿತ್ತು. ಐಪಿಸಿ ಸೆಕ್ಷನ್ 153, 153A(1)(a), 505(1)(b), 505 (2) ಅಡಿಯಲ್ಲಿ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮೀರಾ ಮಿಥುನ್‌ರನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಬಂಧನಗೊಳ್ಳುವ ಮುನ್ನ ಪೊಲೀಸರ ಮುಂದೆ ಮೀರಾ ಮಿಥುನ್ ಹೈಡ್ರಾಮಾ ಮೀರಾ ಮಿಥುನ್‌ರನ್ನು ಬಂಧಿಸಲು ಪೊಲೀಸರು ಮುಂದಾದಾಗ, ಆಕೆ ಹೈಡ್ರಾಮಾವನ್ನೇ ಮಾಡಿದ್ದಾರೆ. ''ಚೆನ್ನೈ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ'' ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಮತ್ತು ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸಿ ಮೀರಾ ಮಿಥುನ್ ವಿಡಿಯೋ ಮಾಡಿದ್ದರು.