ಜೂ. ಎನ್‌ಟಿಆರ್‌ಗೆ ಕೊರೊನಾ ಪಾಸಿಟಿವ್‌! ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ನಟ

ಅಭಿಮಾನಿಗಳ ಪಾಲಿಗೆ ಯಂಗ್ ಟೈಗರ್ ಎನಿಸಿಕೊಂಡಿರುವ ದಕ್ಷಿಣ ಭಾರತದ ಸ್ಟಾರ್ ನಟ ಜೂ. ಎನ್‌ಟಿಆರ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ! ಈ ಬಗ್ಗೆ ಟ್ವೀಟ್ ಮೂಲಕ ಎನ್‌ಟಿಆರ್‌ ಮಾಹಿತಿ ನೀಡಿದ್ದು, ಆತಂಕ ಬೇಡ ಎಂದಿದ್ದಾರೆ.

ಜೂ. ಎನ್‌ಟಿಆರ್‌ಗೆ ಕೊರೊನಾ ಪಾಸಿಟಿವ್‌! ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ನಟ
Linkup
ಕೆಲ ದಿನಗಳ ಹಿಂದಷ್ಟೇ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್‌ಗೆ ಕೊರೊನಾ ಪಾಸಿಟಿವ್ ಆಗಿತ್ತು. ಇದೀಗ ಮತ್ತೋರ್ವ ಜನಪ್ರಿಯ ನಟ ಜೂ. ಎನ್‌ಟಿಆರ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಟ್ವೀಟ್ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ. ಜೊತೆಗೆ ತಾನು ಕ್ಷೇಮವಾಗಿದ್ದೇನೆ ಎಂಬುದನ್ನು ತಮ್ಮ ಫ್ಯಾನ್ಸ್‌ಗೆ ತಿಳಿಸಿದ್ದಾರೆ. ನಾನು ಕ್ಷೇಮವಾಗಿದ್ದೇನೆ! 'ನಾನು ಕೋವಿಡ್‌-19 ಪಾಸಿಟಿವ್ ಆಗಿದ್ದೇನೆ. ಯಾವುದೇ ಆತಂಕ ಬೇಡ, ನಾನು ಸಂಪೂರ್ಣವಾಗಿ ಆರಾಮಾಗಿದ್ದೇನೆ. ನಾನು ಮತ್ತು ನನ್ನ ಕುಟುಂಬ ಐಸೋಲೇಟ್ ಆಗಿದ್ದೇವೆ ಮತ್ತು ವೈದ್ಯರ ಮಾರ್ಗದರ್ಶನದಲ್ಲಿ ಎಲ್ಲ ರೀತಿಯ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇವೆ. ಕಳೆದ ಕೆಲ ದಿನಗಳಲ್ಲಿ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ' ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಎಲ್ಲರೂ ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ. ಕನ್ನಡದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದ ಎನ್‌ಟಿಆರ್ ಕೆಲ ದಿನಗಳ ಹಿಂದಷ್ಟೇ 'ಆರ್‌ಆರ್‌ಆರ್‌' ಚಿತ್ರತಂಡವು ಕೊರೊನಾ ಕುರಿತು ಜಾಗೃತಿ ಮೂಡಿಸುವ ಒಂದು ವಿಡಿಯೋವನ್ನು ರಿಲೀಸ್ ಮಾಡಿತ್ತು. ಅದರಲ್ಲಿ ಜೂ. ಎನ್‌ಟಿಆರ್ ಕನ್ನಡದಲ್ಲಿ ಮಾತನಾಡಿದ್ದರು. 'ಎಲ್ಲರಿಗೂ ನನ್ನ ನಮಸ್ಕಾರ.. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು ದೊಡ್ಡ ಅಸ್ತ್ರಗಳಾಗಿವೆ. ಮಾಸ್ಕ್ ಅನ್ನು ಸದಾ ಧರಿಸಿ, ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿ ಮತ್ತು ನೀವು ಪಬ್ಲಿಕ್‌ನಲ್ಲಿ ಓಡಾಡುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಮಾಸ್ಕ್‌ ಧರಿಸೋಣ.. ವ್ಯಾಕ್ಸಿನ್‌ ಪಡೆಯೋಣ..' ಎಂದು ಎನ್‌ಟಿಆರ್‌ ಹೇಳಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಆದರೆ, ಈಗ ಸ್ವತಃ ಎನ್‌ಟಿಆರ್‌ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದು ಬೇಸರದ ಸಂಗತಿ. ಅಲ್ಲು ಅರ್ಜುನ್‌ಗೂ ಪಾಸಿಟಿವ್ ಇನ್ನು, ಎರಡು ವಾರಗಳ ಹಿಂದಷ್ಟೇ ನಟ ಅಲ್ಲು ಅರ್ಜುನ್ ಅವರಿಗೂ ಕೊರೊನಾ ಪಾಸಿಟಿವ್ ಆಗಿತ್ತು. 'ಎಲ್ಲರಿಗೂ ನಮಸ್ಕಾರ. ನನಗೆ ಕೊರೊನಾ ಪಾಸಿಟಿವ್ ಆಗಿದೆ. ನಾನು ಸ್ವಯಂ ಪ್ರೇರಿತನಾಗಿ ಐಸೋಲೇಟ್ ಆಗಿದ್ದೇನೆ. ಜೊತೆಗೆ ಎಲ್ಲ ರೀತಿಯ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇನೆ. ಈಚೆಗೆ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಶೀಘ್ರವೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ನನ್ನ ಪ್ರೀತಿ ಪಾತ್ರರು, ಆತ್ಮೀಯರು ಯಾವುದೇ ರೀತಿಯ ಆತಂಕಪಡಬೇಡಿ.. ನಾನು ಆರಾಮಾಗಿಯೇ ಇದ್ದೇನೆ. ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ..' ಎಂದು ಹೇಳಿಕೊಂಡಿದ್ದರು ಅವರು. ಸದ್ಯ ಅವರು ಬಹುತೇಕ ಚೇತರಿಸಿಕೊಂಡಿದ್ದಾರೆ. ತೆಲುಗಿನ ರಾಮ್ ಚರಣ್, ವರುಣ್ ತೇಜ್, ನಾಗ ಬಾಬು, ಪವನ್‌ ಕಲ್ಯಾಣ್‌, ಪೂಜಾ ಹೆಗ್ಡೆ ಮುಂತಾದವರಿಗೂ ಕೊರೊನಾ ಪಾಸಿಟಿವ್ ಆಗಿತ್ತು.