ವಿಯೆಟ್ನಾಂನಲ್ಲಿ ಚಿತ್ರೀಕರಣಗೊಂಡ ಭಾರತದ ಮೊದಲ ಸಿನಿಮಾ ‘ಪ್ರೇಮ ಪೂಜ್ಯಂ’

ಲವ್ಲಿ ಸ್ಟಾರ್ ಪ್ರೇಮ್‌ ನಟನೆಯ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’. ಈ ಚಿತ್ರಕ್ಕಾಗಿ ವಿಯೆಟ್ನಾಂನಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ವಿಯೆಟ್ನಾಂನಲ್ಲಿ ಚಿತ್ರೀಕರಿಸಿದ ಮೊದಲ ಕನ್ನಡ ಚಿತ್ರ ಇದು.

ವಿಯೆಟ್ನಾಂನಲ್ಲಿ ಚಿತ್ರೀಕರಣಗೊಂಡ ಭಾರತದ ಮೊದಲ ಸಿನಿಮಾ ‘ಪ್ರೇಮ ಪೂಜ್ಯಂ’
Linkup
ಪದ್ಮಾ ಶಿವಮೊಗ್ಗ ಲವ್ಲಿ ಸ್ಟಾರ್ ಪ್ರೇಮ್‌ ನಟನೆಯ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’. ಈ ಚಿತ್ರಕ್ಕಾಗಿ ವಿಯೆಟ್ನಾಂನಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ವಿಯೆಟ್ನಾಂನಲ್ಲಿ ಚಿತ್ರೀಕರಿಸಿದ ಮೊದಲ ಕನ್ನಡ ಚಿತ್ರ ಇದು. ಡಾ. ರಾಘವೇಂದ್ರ ನಿರ್ದೇಶನದ ಮೊದಲ ಚಿತ್ರ ‘ಪ್ರೇಮಂ ಪೂಜ್ಯಂ’ ನ.12ರಂದು ದೇಶ ವಿದೇಶಗಳಲ್ಲಿ ರಿಲೀಸ್‌ ಆಗುತ್ತಿದೆ. ಈ ಚಿತ್ರದ ಹಾಡುಗಳನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದ್ದು, ಹಿಟ್‌ ಆಗಿವೆ. ಎರಡು ಹಾಡುಗಳನ್ನು ವಿಯೆಟ್ನಾಂನಲ್ಲಿ ಚಿತ್ರೀಕರಿಸಿರುವುದು ವಿಶೇಷ. ವಿಯೆಟ್ನಾಂನಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಚಿತ್ರ ಎಂದಿದ್ದಾರೆ ನಟ ಪ್ರೇಮ್‌. ‘ಹಿಮಾಚಲ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಎಲ್ಲಾ ಫ್ರೆಶ್‌ ಲೊಕೇಶನ್‌ಗಳು. ಇಲ್ಲಿಯವರೆಗೆ ಭಾರತದ ಯಾವ ಸಿನಿಮಾದ ಚಿತ್ರೀಕರಣವೂ ವಿಯೆಟ್ನಾಂನಲ್ಲಿ ಮಾಡಿಲ್ಲ. ಯಾವ ಭಾಷೆಯ ಸಿನಿಮಾವೂ ಇಲ್ಲಿ ಶೂಟ್‌ ಆಗಿಲ್ಲ. ಇಲ್ಲಿ ಚಿತ್ರೀಕರಣಗೊಂಡ ಕನ್ನಡದ ಮೊದಲ ಚಿತ್ರ ಮಾತ್ರವಲ್ಲ, ಭಾರತದ ಮೊದಲ ಚಿತ್ರ ‘ಪ್ರೇಮಂ ಪೂಜ್ಯಂ’ ಎಂಬ ಹೆಗ್ಗಳಿಕೆ ನಮ್ಮದು. ಸುಂದರವಾದ ಪರಿಸರದಲ್ಲಿ ಎರಡು ಹಾಡುಗಳನ್ನು ಶೂಟ್‌ ಮಾಡಿದ್ದೇವೆ. ವಿಯೆಟ್ನಾಂ ಮತ್ತು ಚೀನಾ ಬಾರ್ಡರ್‌ನಲ್ಲಿ ಮೂನ್‌ಚಾಯ್‌ ಚೂ ಎಂಬ ಪ್ರದೇಶದಲ್ಲಿ ಫಾಲ್ಸ್‌, ವಿಯೆಟ್ನಾಂ ಬಾನಾ ಹಿಲ್ಸ್‌ನಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎಂದಿದ್ದಾರೆ ಪ್ರೇಮ್‌. ‘ಪ್ರೇಮಂ ಪೂಜ್ಯ’ ಚಿತ್ರದ ಸೋನು ನಿಗಮ್‌ ಹಾಡಿರುವ ‘ಓ ಬಾನ ಮೋಡಗಳೇ..’ ಮತ್ತು ಅಮರ ಮಧುರ ಎಂಬ ಹಾಡುಗಳನ್ನು ವಿಯೆಟ್ನಾಂನಲ್ಲಿ ಚಿತ್ರೀಕರಿಸಲಾಗಿದೆ. ಓ ಬಾನ ಮೋಡಗಳೇ ಹಾಡಿನಲ್ಲಿ ಪ್ರೇಮ್‌ ಜತೆ ನವ ನಟಿ ಬೃಂದಾ ಆಚಾರ್ಯ, ಅಮರ ಮಧುರ ಹಾಡಿನಲ್ಲಿ ಐಂದ್ರಿತಾ ರೇ ಕಾಣಿಸಿಕೊಂಡಿದ್ದಾರೆ. ಎಲ್ಲಾ ಹಾಡುಗಳನ್ನು ನಿರ್ದೇಶಕ ಡಾ. ರಾಘವೇಂದ್ರ ಅವರೇ ರಚಿಸಿದ್ದಾರೆ. ‘ಸಿನಿಮಾದಲ್ಲಿ ಹಾಡುಗಳು ಪ್ರತ್ಯೇಕ ಎನ್ನಿಸುವುದಿಲ್ಲ. ಹಂಸಲೇಖ ಅವರ ಪ್ಯಾಟರ್ನ್‌ನಲ್ಲಿ ಇದೆ ಎನ್ನಬಹುದು. ಸಿನಿಮಾದ ಕಥೆಯೊಳಗೇ ಹಾಡುಗಳೂ ಮಿಳಿತವಾಗಿವೆ. ವಿಯೆಟ್ನಾಂ ಬಹಳ ಸುಂದರವಾಗಿದೆ. ತುಂಬಾ ಕ್ಲೀನ್‌ ಆಗಿ ಇಟ್ಟುಕೊಂಡಿದ್ದಾರೆ. ನಮಗೆ ಇದು ಸ್ಫೂರ್ತಿ ನೀಡಿತು. ಲೊಕೇಷನ್‌ ಅಂತೂ ಬ್ಯೂಟಿಫುಲ್‌. ಆದರೆ, ಕೆಲವು ಕಡೆ ನಮಗೆ ಊಟಕ್ಕೆ ಬಹಳ ತೊಂದರೆ ಇತ್ತು. ಬರೀ ಟೀ, ಬಿಸ್ಕೆಟ್‌ ತಿಂದು ಬದುಕಿದೆವು. ಕಷ್ಟ ಇತ್ತು. ಒಮ್ಮೆ ಬೆಟ್ಟದ ಮೇಲೆ ಹೋದರೆ ಮತ್ತೆ ಸಂಜೆಯೇ ಕೆಳಗಿಳಿಯುತ್ತಿದ್ದೆವು’ ಎಂದಿದ್ದಾರೆ ಅವರು. ಒಟ್ಟು 60 ಜನರ ದೊಡ್ಡ ತಂಡವನ್ನೇ ವಿಯೆಟ್ನಾಂಗೆ ಕರೆದುಕೊಂಡು ಹೋಗಲಾಗಿದೆ. ‘ಸಾಮಾನ್ಯವಾಗಿ ಹೊರಗೆ ಚಿತ್ರೀಕರಣ ಮಾಡುವಾಗ 15-20 ಜನರನ್ನು ಕರೆದುಕೊಂಡು ಹೋಗ್ತಾರೆ. ಆದರೆ, ಮೇಕಿಂಗ್‌ನಲ್ಲಿಏನೂ ಕಡಿಮೆಯಾಗಬಾರದು ಅಂತ ನಾವು ಟ್ರ್ಯಾಲಿ, ಜಿಮ್ಮಿಜಿಪ್‌ ಎಲ್ಲಾ ಎಕ್ವಿಪ್‌ಮೆಂಟ್‌ ಸಮೇತ ಇಡೀ ಕ್ರ್ಯೂ ಅನ್ನೇ ಕರೆದುಕೊಂಡು ಹೋಗಿದ್ದೆವು. ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ‘ಪ್ರತಿಯೊಂದು ಶಾಟ್‌ ಅನ್ನೂ ವಿಶೇಷ ಎನ್ನಿಸುವಂತೆ ಚಿತ್ರೀಕರಣ ಮಾಡಲಾಗಿದೆ. ವಿಯೆಟ್ನಾಂನಲ್ಲಿ ಸುಂದರ ಪರಿಸರ, ಫಾಲ್ಸ್‌, ಪರ್ವತಗಳ ಮೇಲೆ ಚಿತ್ರೀಕರಿಸಿದ ಅನುಭವ ಮರೆಯಲಾಗದ್ದು. ಇಲ್ಲಿ ಹೀರೊ ಪ್ರೇಮ ನಿವೇದನೆ ಮಾಡಿಕೊಳ್ಳುವ ಹಾಡನ್ನು ಚಿತ್ರೀಕರಿಸಿದ್ದೇವೆ’ ಅಂತ ಹೇಳಿದ್ದಾರೆ. ಇಂದಿನಿಂದ ‘ಪ್ರೇಮಂ ಪೂಜ್ಯಂ’ ಚಿತ್ರದ ಪ್ರಮೋಷನ್‌ ಕಾರ್ಯ ಮತ್ತೆ ಪ್ರಾರಂಭವಾಗಿದೆ. ಇಡೀ ಕರ್ನಾಟಕದಾದ್ಯಂತ ಚಿತ್ರತಂಡ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದೆ.