ಹಿರಿಯ ನಟರ ಪುತ್ಥಳಿ ತೆರವು ವಿಚಾರ; ಡಾ. ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ಹೇಳಿದ್ದೇನು?

ಅನುಮತಿ ಇಲ್ಲದೇ ಬೆಂಗಳೂರಿನಲ್ಲಿ ಅಭಿಮಾನಿಗಳು ಅನಧಿಕೃತವಾಗಿ ಸ್ಥಾಪನೆ ಮಾಡಿರುವ ಪುತ್ಥಳಿಗಳನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ಬಿಬಿಎಂಪಿ ಶುರುಮಾಡಿದೆ. ಇದೀಗ ಆ ಬಗ್ಗೆ ನಟ ಅನಿರುದ್ಧ ಮಾತನಾಡಿದ್ದಾರೆ.

ಹಿರಿಯ ನಟರ ಪುತ್ಥಳಿ ತೆರವು ವಿಚಾರ; ಡಾ. ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ಹೇಳಿದ್ದೇನು?
Linkup
ಅಭಿಮಾನಿಗಳು ತಮ್ಮ ಮೆಚ್ಚಿನ ನಟರ ಪುತ್ಥಳಿಗಳನ್ನು ಸ್ಥಾಪಿಸುವುದು ಸಾಮಾನ್ಯ. ಈಗಾಗಲೇ ಬೆಂಗಳೂರಿನಲ್ಲಿ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಶಂಕರ್‌ನಾಗ್ ಸೇರಿದಂತೆ ಅನೇಕ ನಟರ ಪುತ್ಥಳಿ, ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಸಿನಿಮಾರಂಗದವರು ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರಗಳ ವ್ಯಕ್ತಿಗಳ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಆದರೆ, ಅದರಲ್ಲಿ ಕೆಲವೊಂದಕ್ಕೆ ಅನುಮತಿ ಇಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ , ಪರವಾನಗಿ ಇಲ್ಲದೇ ಸ್ಥಾಪಿತಗೊಂಡಿರುವ ಪುತ್ಥಳಿಗಳನ್ನು ತೆರವು ಮಾಡುವುದಕ್ಕೆ ಮುಂದಾಗಿದೆ. ಇದೀಗ ಈ ಕುರಿತು ಡಾ. ವಿಷ್ಣುವರ್ಧನ್ ಅವರ ಅಳಿಯ, ನಟ ಪ್ರತಿಕ್ರಿಯೆ ನೀಡಿದ್ದಾರೆ. ಅದು ಬಹಳ ಕಷ್ಟಕರವಾದ ಕೆಲಸ 'ಅನುಮತಿ ಇಲ್ಲದೇ ಇರುವ ಧ್ವಜದ ಕಂಬಗಳು, ಕಲಾವಿದರ ಪುತ್ಥಳಿಗಳನ್ನು ತೆರವುಗೊಳಿಸಬೇಕು ಎಂದು ಸರ್ಕಾರ ಒಂದು ಆದೇಶವನ್ನು ಹೊರಡಿಸಿದೆ. ಇದು ನಿಜಕ್ಕೂ ತುಂಬ ನಾಜೂಕಾದಂತಹ ವಿಷಯ. ನಮ್ಮ ಕನ್ನಡಿಗರು ಬಹಳ ಶ್ರದ್ಧೆಯಿಂದ, ಶ್ರಮದಿಂದ ಆ ಕಂಬಗಳನ್ನು, ಪುತ್ಥಳಿಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈಗ ಇದ್ದಕ್ಕಿದ್ದಂತೆ ಅದನ್ನು ತೆರವುಗೊಳಿಸಬೇಕು ಎಂದು ಸರ್ಕಾರ ಹೇಳಿದರೆ, ಅದು ಬಹಳ ಕಷ್ಟಕರವಾದ ಕೆಲಸ' ಎಂದು ಅನಿರುದ್ಧ ಹೇಳಿದ್ದಾರೆ. ಸರ್ಕಾರದ ನಿರ್ಲಕ್ಷ್ಯತನ ಕೂಡ ಇದೆ 'ನಮ್ಮ ಅಭಿಮಾನಿಗಳಿಂದ, ಕನ್ನಡಿಗರಿಂದ ತಪ್ಪಾಗಿರುವುದು ಹೌದು. ಆದರೆ, ಇದರಲ್ಲಿ ಸರ್ಕಾರದ ಜವಾಬ್ದಾರಿ ಕೂಡ ಇತ್ತು. ಆಗ ಸ್ಥಾಪನೆ ಮಾಡುವ ವೇಳೆ, ಸರ್ಕಾರವೇ ಬಂದು ಸೂಕ್ತವಾದ ಕ್ರಮಕೈಗೊಳ್ಳಬೇಕಾಗಿತ್ತು. ಆದರೆ ಅದು ತಗೊಂಡಿಲ್ಲ. ಹಾಗಾಗಿ, ಇದರಲ್ಲಿ ಸರ್ಕಾರದ ನಿರ್ಲಕ್ಷ್ಯತನ ಕೂಡ ಇದೆ. ಹಲವು ವರ್ಷಗಳಾದ ಮೇಲೆ, ಈಗ ಪುತ್ಥಳಿಗಳನ್ನು ತೆರವುಗೊಳಿಸಬೇಕು ಎಂದರೆ, ಅದು ಅಷ್ಟು ಸುಲಭ ಅಲ್ಲ. ಈಗ ಅದು ಅದೊಂದು ಪೂಜಾ ಸ್ಥಳ ಆಗಿರುತ್ತದೆ. ಆದ್ದರಿಂದ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು, ಈಗಿರುವ ಜಾಗದಿಂದ, ಹತ್ತಿರದಲ್ಲೇ ಸೂಕ್ತವಾದ ಜಾಗವನ್ನು ಗುರುತಿಸಿ, ಅಲ್ಲಿ ಪ್ರತಿಷ್ಠಾಪನೆಯನ್ನು ಮಾಡಬೇಕು' ಎಂದು ಅನಿರುದ್ಧ ಆಗ್ರಹಿಸಿದ್ದಾರೆ. 'ಸರ್ಕಾರ ನನ್ನ ಈ ಒಂದು ಮನವಿಯನ್ನು ಪರಿಗಣಿಸಿ, ಅದಕ್ಕೊಂದು ಸೂಕ್ತವಾದ ಕ್ರಮವನ್ನು ಕೈಗೊಳ್ಳುತ್ತಾರೆ ಅನ್ನೋ ಭರವಸೆ, ನಂಬಿಕೆ ನನಗೆ ಇದೆ' ಎಂದು ಅನಿರುದ್ಧ ಹೇಳಿದ್ದಾರೆ. ಇನ್ನು, ಪುತ್ಥಳಿಗಳ ತೆರವು ವಿಚಾರಕ್ಕೆ ಸಂಬಂಧಪಟ್ಟಂತೆ. ಈಗಾಗಲೇ ಬಿಬಿಎಂಪಿ ಸಿಬ್ಬಂದಿ ಸರ್ವೆ ಕಾರ್ಯ ಶುರುಮಾಡಿದ್ದಾರೆ. ಅನುಮತಿ ಪಡೆಯದೇ ನಿರ್ಮಾಣಗೊಂಡ ಅನೇಕ ಪುತ್ಥಳಿಗಳನ್ನು ಗುರುತಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.