ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ 'ಲವ್ ಸ್ಟೋರಿ' ಸಿನಿಮಾ ಹೇಗಿದೆ? ಪ್ರೇಕ್ಷಕರು ಏನು ಹೇಳಿದ್ರು?
ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ 'ಲವ್ ಸ್ಟೋರಿ' ಸಿನಿಮಾ ಹೇಗಿದೆ? ಪ್ರೇಕ್ಷಕರು ಏನು ಹೇಳಿದ್ರು?
ನಟ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ 'ಲವ್ ಸ್ಟೋರಿ' ಸಿನಿಮಾ ರಿಲೀಸ್ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಗಳಿಸುತ್ತಿದೆ. ಈಗಾಗಲೇ ಸಾಕಷ್ಟು ತೆಲುಗಿನ ನಟ-ನಟಿಯರು ಈ ಸಿನಿಮಾಕ್ಕೆ ಶುಭಾಶಯ ತಿಳಿಸಿದ್ದರು.
ನಟ ನಾಗ ಚೈತನ್ಯ ಹಾಗೂ 'ಲವ್ ಸ್ಟೋರಿ' ಸಿನಿಮಾ ರಿಲೀಸ್ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ತೆಲಂಗಾಣದ ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದೆ. ಹಾಗೂ ಸಾಯಿ ಪಲ್ಲವಿ ನಟನೆ ಅನೇಕರ ಮೆಚ್ಚುಗೆ ಪಡೆದಿದೆ. ಸಹಜವಾಗಿ ಲವ್ ಸ್ಟೋರಿಯೊಂದನ್ನು ತೆರೆ ಮೇಲೆ ತಂದ ನಿರ್ದೇಶಕ ಶೇಖರ್ ಕಮ್ಮುಲ ಅವರ ಕೆಲಸವನ್ನು ಅನೇಕರು ಮೆಚ್ಚಿದ್ದಾರೆ. ರೇವಂತ್ ಹಾಗೂ ಮೌನಿ ನಡುವೆ ನಡೆಯುವ ಪ್ರೇಮಕಥೆಯೇ 'ಲವ್ ಸ್ಟೋರಿ' ಸಿನಿಮಾದ ಒನ್‌ಲೈನ್ ಸ್ಟೋರಿ. 'ಲವ್ ಸ್ಟೋರಿ' ಟೀಸರ್ ರಿಲೀಸ್ ಆದಾಗಲೇ ಸಾಕಷ್ಟು ಜನರು ಸಿನಿಮಾ ನೋಡುವ ಆಸಕ್ತಿ ಬೆಳೆಸಿಕೊಂಡಿದ್ದರು.
ದೊಡ್ಡ ನಗರವು ಜಾತಿ ಧರ್ಮ ಎಂದು ಬೇಧ-ಭಾವ ಮಾಡದೆ ಎಲ್ಲರಿಗೂ ಒಂದೇ ರೀತಿಯ ಅವಕಾಶ ನೀಡುತ್ತದೆ ಎನ್ನೋದು ಸುಳ್ಳು ಎಂದು ಹೇಳುವ ಪ್ರಯತ್ನವನ್ನು ನಿರ್ದೇಶಕರು ಇಲ್ಲಿ ಮಾಡಿದ್ದಾರೆ. ಸಿನಿಮಾದಲ್ಲಿ ಗಂಭೀರವಾದ ವಿಷಯದ ಜೊತೆಗೆ ಹಾಸ್ಯದ ಮಿಶ್ರಣವಿದೆ. ಇಷ್ಟುವರ್ಷದ ವೃತ್ತಿಯಲ್ಲಿ ನಾಗ ಚೈತನ್ಯ ಅದ್ಭುತವಾಗಿ ನಟಿಸಿದ್ದಾರೆ, ರೇವಂತ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಜೀವ್ ಕನಕಾಲ ಅವರು ಖಳನಾಯಕನಾಗಿ ಅಬ್ಬರಿಸಿದ್ದಾರೆ.
ಸಿನಿಮಾ ನೋಡಿದವರು ಟ್ವಿಟ್ಟರ್‌ನಲ್ಲಿ ಹೇಳಿದ್ದೇನು?
ಒಳ್ಳೆಯ ಸಿನಿಮಾ, ಎರಡನೇ ಭಾಗ ತುಂಬ ಚೆನ್ನಾಗಿದೆ.
ಒಳ್ಳೆಯ ಸಿನಿಮಾ, ಕೊನೆಯ 30 ನಿಮಿಷದಲ್ಲಿ ನಟ-ನಟಿಯರ ನಟನೆ, ಅದರಲ್ಲೂ ನಾಗಚೈತನ್ಯ ಅಭಿನಯ ಚೆನ್ನಾಗಿದೆ
ಮೊದಲ ಭಾಗ ಚೆನ್ನಾಗಿದೆ, ನಾಗಚೈತನ್ಯ ತುಂಬ ಚೆನ್ನಾಗಿ ಸಹಜವಾಗಿ ನಟಿಸಿದ್ದಾರೆ.
ನಾಗಚೈತನ್ಯ ಲುಕ್, ತೆಲಂಗಾಣ ಭಾಷೆ ತುಂಬ ಚೆನ್ನಾಗಿದೆ
ಎಲ್ಲವೂ ಚೆನ್ನಾಗಿದೆ, ಆದರೆ ಕ್ಲೈಮ್ಯಾಕ್ಸ್ ಮಾತ್ರ ಅಸುರನ್, ಕರ್ಣನ್ ಸಿನಿಮಾ ನೆನಪಿಸುತ್ತದೆ
'ಲವ್ ಸ್ಟೋರಿ' ಸಿನಿಮಾದಲ್ಲಿ ಸಾಯಿ ಪಲ್ಲವಿ, ನಾಗ ಚೈತನ್ಯ ಅಭಿನಯ ಚೆನ್ನಾಗಿದೆ. ಪವನ್ ಅವರ ಬಿಜಿಎಂ ಚೆನ್ನಾಗಿದೆ. ಕಮ್ಮುಲ ಒಳ್ಳೆಯ ಕೆಲಸ ಮಾಡಿದ್ದಾರೆ. ಕೊನೆಯ 30 ನಿಮಿಷದಲ್ಲಿ ಅತಿರೇಕತೆ ಇದೆ
ಇತ್ತೀಚಿನ ದಿನಗಳಲ್ಲಿ ಚರ್ಚೆ ಮಾಡಬಹುದಾದಂತಹ ಸೂಕ್ಷ್ಮ ವಿಚಾರಗಳು ಈ ಸಿನಿಮಾದಲ್ಲಿವೆ.
ಪ್ರತಿಯೊಂದು ಹುಡುಗಿಯೂ ಒಂದಲ್ಲ ಒಂದು ತರದಲ್ಲಿ ಮೌನಿ ಪಾತ್ರವನ್ನು ತಮಗೆ ಹೋಲಿಕೆ ಮಾಡಿಕೊಳ್ಳಬಹುದು. ಮಧ್ಯಮ ವರ್ಗದ ಹುಡುಗಿಯ ಲವ್ ಸ್ಟೋರಿ ಇದಾಗಿದೆ. ಶೇಖರ್ ಕಮ್ಮುಲ ಮಾತ್ರ ಈ ರೀತಿ ನೈಜ ಸಿನಿಮಾ ತೆಗೆಯುತ್ತಾರೆ, ಅವರೊಬ್ಬ ಉತ್ತಮ ನಿರ್ದೇಶಕ.
'ಲವ್ ಸ್ಟೋರಿ' ಸಿನಿಮಾಕ್ಕೆ ಟಾಲಿವುಡ್‌ನ ಸೆಲೆಬ್ರಿಟಿಗಳು ಶುಭಾಶಯ ತಿಳಿಸಿದ್ದಾರೆ. ನಟಿ ಸಮಂತಾ ಅಕ್ಕಿನೇನಿ ಕೂಡ ಶುಭಾಶಯ ತಿಳಿಸಿದ್ದರು. ಈ ಸಿನಿಮಾದಲ್ಲಿ ಎಂದಿನಂತೆ ಸಾಯಿ ಪಲ್ಲವಿ ಡಿಗ್ಲಾಮ್ ಲುಕ್‌ನಲ್ಲಿ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. 'ಲವ್ ಸ್ಟೋರಿ' ಚಿತ್ರೀಕರಣ ಇನ್ನೂ ಬಾಕಿ ಇರುವಾಗಲೇ ಟಿವಿ ಪ್ರಸಾರ ಹಕ್ಕುಗಳ ಮಾರಾಟದ ಬಗ್ಗೆ ಮಾತುಕಥೆ ನಡೆದಿದ್ದು, ಮೂಲಗಳ ಪ್ರಕಾರ, 16 ಕೋಟಿ ರೂ.ಗಳಿಗೆ ಮಾರಾಟ ಆಗಿದೆ.