ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದ ಸ್ವಿಗ್ಗಿ ಡೆಲಿವರಿ ಬಾಯ್‌ನ ಅಡ್ಡಗಟ್ಟಿ ಸುಲಿಗೆ; ಓರ್ವನ ಬಂಧನ

ಜ.4ರಂದು ರಾತ್ರಿ 11 ಗಂಟೆ ಸುಮಾರಿಗೆ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಫುಡ್‌ ಡೆಲಿವರಿ ಮಾಡಿ ದ್ವಿಚಕ್ರ ವಾಹನದಲ್ಲಿ ವಾಪಸ್‌ ಬರುತ್ತಿದ್ದಾಗ ಅವರನ್ನು ತಡೆದು ನಿಲ್ಲಿಸಿದ ಆರೋಪಿಗಳು, ಫುಡ್‌ ಬಾಕ್ಸ್‌ನಲ್ಲಿ ಊಟ ಇದೆಯಾ ಎಂದು ಬೆದರಿಸಿ, ಬಾಕ್ಸ್‌ ಅನ್ನು ಎಸೆದಿದ್ದರು. ನಂತರ ಜೆ.ಸಿ.ರಸ್ತೆಯ ಸಿಗ್ನಲ್‌ವರೆಗೂ ಡ್ರಾಪ್‌ ಕೊಡುವಂತೆ ಹೇಳಿ, ಕಲಾಸಿಪಾಳ್ಯದ ಸಂದಿ ರಸ್ತೆಗೆ ಕರೆದುಕೊಂಡು ಹೋಗಿ ಮೊಬೈಲ್‌ ಮತ್ತು ದ್ವಿಚಕ್ರ ವಾಹನ ಕಸಿದುಕೊಂಡು ನಡು ರಸ್ತೆಯಲ್ಲೇ ಗಿರೀಶ್‌ನನ್ನು ಬಿಟ್ಟು ಕಳುಹಿಸಿದ್ದರು.

ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದ ಸ್ವಿಗ್ಗಿ ಡೆಲಿವರಿ ಬಾಯ್‌ನ ಅಡ್ಡಗಟ್ಟಿ ಸುಲಿಗೆ; ಓರ್ವನ ಬಂಧನ
Linkup
ಬೆಂಗಳೂರು: ಜೀವನ ನಿರ್ವಹಣೆಗಾಗಿ ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಅಡ್ಡಗಟ್ಟಿ ಮೊಬೈಲ್‌ ಫೋನ್‌ ಮತ್ತು ದ್ವಿಚಕ್ರ ವಾಹನವನ್ನು ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾಸಿಪಾಳ್ಯ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ. ಬಂಧಿತ ಆರೋಪಿಯಿಂದ ದ್ವಿಚಕ್ರ ವಾಹನ ಮತ್ತು ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಚಾಮರಾಜಪೇಟೆಯ ಗಿರೀಶ್‌ ಅಂತಿಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದು, ಕುಟುಂಬ ನಿರ್ವಹಣೆಗಾಗಿ ಸ್ವಿಗ್ಗಿ ಡೆಲಿವರಿ ಬಾಯ್‌ ಕೆಲಸ ಮಾಡುತ್ತಿದ್ದರು. ಜ.4ರಂದು ರಾತ್ರಿ 11 ಗಂಟೆ ಸುಮಾರಿಗೆ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಫುಡ್‌ ಡೆಲಿವರಿ ಮಾಡಿ ದ್ವಿಚಕ್ರ ವಾಹನದಲ್ಲಿ ವಾಪಸ್‌ ಬರುತ್ತಿದ್ದಾಗ ಅವರನ್ನು ತಡೆದು ನಿಲ್ಲಿಸಿದ ಆರೋಪಿಗಳು, ಫುಡ್‌ ಬಾಕ್ಸ್‌ನಲ್ಲಿ ಊಟ ಇದೆಯಾ ಎಂದು ಬೆದರಿಸಿ, ಬಾಕ್ಸ್‌ ಅನ್ನು ಎಸೆದಿದ್ದರು. ನಂತರ ಜೆ.ಸಿ.ರಸ್ತೆಯ ಸಿಗ್ನಲ್‌ವರೆಗೂ ಡ್ರಾಪ್‌ ಕೊಡುವಂತೆ ಹೇಳಿ, ಕಲಾಸಿಪಾಳ್ಯದ ಸಂದಿ ರಸ್ತೆಗೆ ಕರೆದುಕೊಂಡು ಹೋಗಿ ಮೊಬೈಲ್‌ ಮತ್ತು ದ್ವಿಚಕ್ರ ವಾಹನ ಕಸಿದುಕೊಂಡು ನಡು ರಸ್ತೆಯಲ್ಲೇ ಗಿರೀಶ್‌ನನ್ನು ಬಿಟ್ಟು ಕಳುಹಿಸಿದ್ದರು. ಪ್ರಕರಣ ಸಂಬಂಧ ಗಿರೀಶ್‌ ಅವರು ಕಲಾಸಿಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. 5.60 ಲಕ್ಷ ರೂ. ಮೌಲ್ಯದ ಆಭರಣ ಕಳವು ಭದ್ರಾವತಿ: ಮನೆಯಲ್ಲಿ ಯಾರೂ ಇಲ್ಲದಿರುವಾಗ ಹಿಂಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ಸುಮಾರು 147 ಗ್ರಾಂ ತೂಕದ ಅಂದಾಜು 5.60 ಲಕ್ಷ ರೂ. ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಕದ್ದಿರುವ ಘಟನೆ ಗಾಂಧಿ ನಗರ ಗಣಪತಿ ದೇವಾಲಯ ಬಳಿ ನಡೆದಿದೆ. ಬಿಳಿಮನೆ ಸರಕಾರಿ ಶಾಲೆ ಶಿಕ್ಷಕ ಪರಮೇಶ್ವರಪ್ಪ ಅವರು ಶಾಲೆಗೆ ರಜೆಯಿದ್ದ ಕಾರಣ ಕುಟುಂಬ ಸಮೇತ ಕಳೆದ ಶನಿವಾರ ಯಡೇಹಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ಹೋಗಿ, ಭಾನುವಾರ ಹಿಂದಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಹೊಸಮನೆ ಠಾಣೆಗೆ ದೂರು ನೀಡಿದ್ದಾರೆ.